ನಿಮಗೆ ಕೃಷಿ ಡಿಪ್ಲೋಮ ಮಾಡುವ ಆಸೆ ಇದ್ಯಾ..? | 10ನೇ ತರಗತಿ ಪಾಸ್​ ಆದವರೂ ಅರ್ಜಿ ಸಲ್ಲಿಸಿಬಹುದು |

July 20, 2024
11:57 AM

ಅಗ್ರಿಕಲ್ಚರ್‌ ಬಿಎಸ್ಸಿ‌  ಮಾಡಲು ಮನಸ್ಸಿದ್ದರು ಸಿಇಟಿ ಬರೆದು ರೇಂಕ್ ತೆಗೆದು ಸೀಟು ತೆಗೆದುಕೊಳ್ಳುವುದೆಂದರೆ ಎಲ್ಲರಿಗೂ ಆಗದ ಕೆಲಸ. ಆದ್ರೆ ಎಷ್ಟೋ ವಿದ್ಯಾರ್ಥಿಗಳಿಗೆ ಕೃಷಿ(Agriculture) ಸಂಬಂಧಿತ ಕೋರ್ಸ್‌ ಮಾಡಬೇಕು ಅನ್ನುವ ಆಸೆ ಇರುತ್ತದೆ. ಯಾರಿಗೆಲ್ಲಾ ಈ ಕನಸು ಇದೆಯೋ ಅವರೆಲ್ಲಾ ಈಗ ನನಸು ಮಾಡಿಕೊಳ್ಳಬಹುದು. 2024 ಹಾಗೂ 25ನೇ ವರ್ಷದ ಕೋರ್ಸ್​ಗೆ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು(Agricultural university Bengaluru) ಅಧಿಸೂಚನೆ ಹೊರಡಿಸಿದೆ. ಹೊರಡಿಸಿದ ಅಧಿಸೂಚನೆ ಪ್ರಕಾರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೀವೂ ಕೂಡ ಅಗ್ರಿಕಲ್ಚರ್​ ಸಂಬಂಧಿತ ಕೋರ್ಸ್(Agriculture Diploma)​ ಮಾಡಲು ಆಸಕ್ತಿ ಹೊಂದಿದ್ದರೆ ಈ ಕೋರ್ಸ್​ಗೆ ಸೇರಿಕೊಳ್ಳಬಹುದು. ಅದಕ್ಕೂ ಮುನ್ನ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.

ಕನ್ನಡ ಮಾಧ್ಯಮದಲ್ಲಿ ನೀವು ಈ ಕೋರ್ಸ್​  ಮಾಡಬಹುದಾಗಿದೆ. ಈ ಕೋರ್ಸ್​ನಲ್ಲಿ ನಾಲ್ಕು ಸೆಮಿಸ್ಟರ್​ಗಳು ಇರುತ್ತದೆ. ಅದನ್ನಾಧರಿಸಿ ನೀವು ಈ ಕೋರ್ಸ್​ಗೆ ಸೇರಿಕೊಳ್ಳಬಹುದು. ಈ ಕೋರ್ಸ್​ಗೆ ಸೇರಿಕೊಳ್ಳಲು ನೀವು ಹತ್ತನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ 45 ಪ್ರತಿಷತ ಅಂಕ ಗಳಿಸಿರಬೇಕಾಗುತ್ತದೆ. ಮೆರಿಟ್ ಆಧಾರದ ಮೇಲೆ ರೋಸ್ಟರ್​ ಪದ್ಧತಿ ಅಳವಡಿಸಿ, ಪ್ರವೇಶಕ್ಕೆ ಆಯ್ಕೆ ಮಾಡಲಾಗುವುದು. ಆಯ್ಕೆ ಆದ ವಿದ್ಯಾರ್ಥಿಗಳಿಗೆ ಪತ್ರ ಹಾಗೂ ವೆಬ್​ಸೈಟ್​ ಮೂಲಕ ನೀವು ಆಯ್ಕೆ ಆಗಿದ್ದೀರಾ ಎನ್ನುವುದನ್ನು ತಿಳಿಸಲಾಗುವುದು. ಸಾಮಾನ್ಯ ವರ್ಗದವರಿಗೆ 500 ರೂ ಶುಲ್ಕವಿರುತ್ತದೆ. ಶುಲ್ಕ ಕಟ್ಟಲು ದಿನಾಂಕ 11 .8. 2024 ಕೊನೆ ದಿನವಾಗಿರುತ್ತದೆ. ಈ ದಿನಾಂಕಕ್ಕೂ ಮುನ್ನ ನೀವು ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಬೇಕಾಗುತ್ತದೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?
September 7, 2026
1:29 PM
by: ಸಾಯಿಶೇಖರ್ ಕರಿಕಳ
ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!
September 7, 2026
7:59 AM
by: ದ ರೂರಲ್ ಮಿರರ್.ಕಾಂ
ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!
September 7, 2026
7:44 AM
by: ಮಿರರ್‌ ಡೆಸ್ಕ್‌
ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ
September 6, 2026
2:52 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror