ಮಗು ಜನ್ಮ ತಾಳುತ್ತಲೇ ಮೊದಲ ಸ್ಪರ್ಶ ವೈದ್ಯರದ್ದೇ. ಅಮ್ಮ ನೋಡುವುದೇ ಮತ್ತೆ! ನಾನು ಹೇಳಿದ್ದು ನಿಜ ತಾನೇ. ನಮಗೆ ವೈದ್ಯರ ಸಲಹೆ ಮಾರ್ಗದರ್ಶನ ಯಾವಾಗಲೂ ಬೇಕು. ಅದು ದೈಹಿಕ ವಿಷಯಕ್ಕಾಗಿರ ಬಹುದು ಮಾನಸಿಕ ವಿಚಾರದಲ್ಲಿರ ಬಹುದು. ನಮ್ಮ ಹುಟ್ಟು ಸಾವುಗಳೆರಡನ್ನು ಪ್ರಕಟಿಸುವುದು ವೈದ್ಯರೇ ಅಲ್ಲವೇ!!
ನಮ್ಮ ಪ್ರಥಮ ಆದ್ಯತೆ ಯಾವಾಗಲೂ ಆಹಾರ , ಆರೋಗ್ಯಕ್ಕೆ. ದಿನನಿತ್ಯದ ಆಗುಹೋಗುಗಳಿಗೆ ಸಲಹೆ ಸೂಚನೆಗಳನ್ನು ನಾವು ತೆಗೆದುಕೊಳ್ಳಲು ವೈದ್ಯರ ಸಲಹೆಯನ್ನು ಬಯಸುತ್ತೇವೆ. ಅದಕ್ಕಾಗಿ ನಮ್ಮವರೇ ಆದ ವೈದ್ಯರಿದ್ದರೆ ಧೈರ್ಯ. ಸಮಸ್ಯೆ ದೊಡ್ಡದು ಸಣ್ಣದು ಎಂಬುದು ವಿಷಯ ಅಲ್ಲ. ಅದಕ್ಕೆ ಪರಿಹಾರ ಹೇಳುವವರು ಇದ್ದಾರೆ ಎಂಬುದಷ್ಟೇ ಮುಖ್ಯ.
ಅದೂ ಈ ಕೊರೊನಾ ಸಮಯದಲ್ಲಂತೂ ಎಲ್ಲರಿಗೂ ವೈದ್ಯರ ಪ್ರಾಮುಖ್ಯತೆ ಅರ್ಥವಾಗಿದೆ. ಸಣ್ಣಪುಟ್ಟ ಸಮಸ್ಯೆಗಳಿಗೆ ಓಡುತ್ತಿದ್ದ ದಿನಗಳು ಈಗ ಬದಲಾಗಿದೆ. ಅಗತ್ಯವಿದ್ದರೆ ಮಾತ್ರ ವೈದ್ಯರ ಬಳಿಗೆ ಹೋಗುತ್ತಿದ್ದೇವೆ. ಹಾಗಿದ್ದೂ ಕೂಡ ವೈದ್ಯರು ಒಂದು ನಿಮಿಷ ಕೂಡ ವಿಶ್ರಾಂತಿ ಇಲ್ಲದೆ ದುಡಿಯುತ್ತಿದ್ದಾರೆ. ಆದರೆ ಅವರ ಶ್ರಮ, ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಚಿಕ್ಕ ಪ್ರಯತ್ನವನ್ನೂ ನಾವು ಮಾಡುತ್ತಿಲ್ಲವಲ್ಲ ಎಂಬುದೇ ಬೇಸರದ ಸಂಗತಿ. ಕೊರೊನಾ ಸಂಧರ್ಭದಲ್ಲಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಸಂಪೂರ್ಣ ವೈದ್ಯಕೀಯ ಸೇವೆಯನ್ನು ಅಗತ್ಯವಿದ್ದವರಿಗೆ ಕೊಡುವುದರಲ್ಲಿ ಮಗ್ನರಾದ ವೈದ್ಯರೆಷ್ಟೋ? ಜೀವ ಕಳೆದುಕೊಂಡ. ವೈದ್ಯರೆಷ್ಟು ಜನವೋ?
ನಾವು ನಿಜಕ್ಕೂ ವೈದ್ಯಕೀಯ ಸೇವೆಯಲ್ಲಿ ನಿರತರಾದವರಿಗೆ ಒಂದು ಸಲಾಮ್ ಮಾಡಲೇ ಬೇಕು. ವಿಶ್ವದೆಲ್ಲೆಡೆ ವೈದ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ, ಬೇರೆ ಬೇರೆ ದಿನಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಜುಲೈ 1 ರಂದು ಆಚರಣೆ. ಅಂದೇ ಯಾಕೆ? ಜುಲೈ 1 ಡಾ.ಬಿಧಾನ ಚಂದ್ರ ರಾಯ್ ಯವರ ಜನ್ಮ ದಿನ. ಯಾರು ಬಿಧಾನ್ ಚಂದ್ರ ರಾಯ್? ಅವರು ಪಶ್ಚಿಮ ಬಂಗಾಳದ ದ್ವಿತೀಯ ಮುಖ್ಯ ಮಂತ್ರಿ. ಮೂಲತಃ ವೈದ್ಯ ವೃತ್ತಿಯವರಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದವರು. ರಾಜಕೀಯವಾಗಿ ಉನ್ನತ ಸ್ಥಾನ ದಲ್ಲಿದ್ದರೂ ಜನರಿಗೆ ವೈದ್ಯಕೀಯ ಸೇವೆ ಒದಗಿಸುವತ್ತಲೇ ಅವರ ಮನಸು ತುಡಿಯುತ್ತಿತ್ತು. ಎಷ್ಟೇ ಕೆಲಸಗಳಿದ್ದರೂ ದಿನದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಕೊಳೆಗೇರಿಯಲ್ಲಿ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿ ಕೊಳ್ಳುತ್ತಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರತಿನಿಧಿ ಯಾಗಿ 12 ವರ್ಷಗಳ( 1948 ರಿಂದ 1962 ) ರವರೆಗೆ ಪಶ್ಚಿಮ ಬಂಗಾಳ ದ ಮುಖ್ಯ ಮಂತ್ರಿಯಾಗಿ ದ್ದರು. ಆ ಸಮಯದಲ್ಲಿ ಜನಾಂಗೀಯ ಘರ್ಷಣೆ, ದೊಂಬಿ ಗಲಭೆಗಳು ನಡೆಯುತ್ತಿದ್ದವು. ಪಾಕಿಸ್ತಾನದಿಂದ ಒಳನುಗ್ಗುವ ವಲಸೆಗಾರರ ಸಮಸ್ಯೆ ಯೂ ಇತ್ತು. ಅಲ್ಲಿನೆಲ್ಲಾ ಸಮಸ್ಯೆ ಗಳನ್ನು ತಾಳ್ಮೆ ಯಿಂದ ನಿಭಾಯಿಸಿ ರಾಜ್ಯದ ಅಭಿವೃದ್ಧಿ ಯತ್ತ ಯುವಕರು ಮುನ್ನುಗ್ಗುವಂತೆ ಮಾಡಿದವರು. ಎರಡು ಮಹಾ ನಗರಗಳ ನಿರ್ಮಾತೃ. ಪಶ್ಚಿಮ ಬಂಗಾಳದ ಶ್ರೇಷ್ಠ ಶಿಲ್ಪಿ ದೇ ಗುರುತಿಸಿಕೊಂಡವರು ಡಾ.ಬಿಧಾನ್ ಚಂದ್ರ ರಾಯ್. ಇವರ ಜನನ ( 1 ಜುಲೈ 1882 ) ಮರಣ ( 1 ಜುಲೈ 1962) ಗಳೆರಡೂ ಒಂದೇ ದಿನ ಅದು ಜುಲೈ 1., ಇಂತಹ ಅಪರೂಪಕ್ಕೆ ವಿಷಯಕ್ಕೆ ಸಾಕ್ಷಿಯಾವರು.
ಇವರ ಅಪರೂಪವಾದ ಸೇವೆಯ ಸ್ಮರಣಾರ್ಥವಾಗಿ ಜುಲೈ 1 ರಂದು ನಾವು ಭಾರತ ದೇಶದೆಲ್ಲೆಡೆ ವೈದ್ಯರ ದಿನಾಚರಣೆಯನ್ನು ಆಚರಿಸುತ್ತೇವೆ. ಇದು ಬರಿಯ ವೃತ್ತಿಯಲ್ಲ, ಸೇವಾ ವೃತ್ತಿ. ಸಮಸ್ತ ವೈದ್ಯರಿಗೂ ತಲೆಬಾಗಿ ನಮಿಸುತ್ತಾ ವೈದ್ಯರ ದಿನಾಚರಣೆಯ ಶುಭಾಶಯಗಳು.
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…