ಬೀದಿ ನಾಯಿಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ದೇಶಾದ್ಯಂತ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ರೈಲ್ವೆ ನಿಲ್ದಾಣಗಳಿಂದ ಅಲೆಮಾರಿ ನಾಯಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವಂತೆ ನಿರ್ದೇಶಿಸಿದೆ. ಲಸಿಕೆ ಮತ್ತು ಸ್ಟೆರಿಲೈಸೇಶನ್ ನಂತರವೂ ಈ ಸ್ಥಳಗಳಲ್ಲಿ ನಾಯಿಗಳನ್ನು ಬಿಡುಗಡೆ ಮಾಡಬಾರದು ಎಂದು ಸ್ಪಷ್ಟಪಡಿಸಿದ್ದು, ಅವುಗಳನ್ನು ಆಶ್ರಯ ಗೃಹಗಳಲ್ಲಿ ಮಾತ್ರ ಇರಿಸಬೇಕು ಎಂದು ಆದೇಶಿಸಿದೆ. ದಿನದಿಂದ ದಿನಕ್ಕೆ ನಾಯಿಗಳ ಕಾಟ ಹೆಚ್ಚುತ್ತಿದ್ದು, ಇದರಿಂದ ಜನರು ತುಂಬಾನೇ ಕಷ್ಟ ಎದುರಿಸುತ್ತಿದ್ದಾರೆ ಬೀದಿ ನಾಯಿಗಳನ್ನು ಆದಷ್ಟೂ ತೆರವುಗೊಳಿಸುವುದೇ ಉತ್ತಮವೆಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ ಅಂಜಾರಿಯಾ ಹೇಳಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

