ದಸರಾ ಅಂಗವಾಗಿ ಶ್ವಾನಗಳ ಪ್ರದರ್ಶನ ಸ್ಪರ್ಧೆ | 45 ತಳಿಯ ಶ್ವಾನಗಳಿಂದ ಪ್ರದರ್ಶನ | ಸುಧಾಮೂರ್ತಿ ಅವರ ಪ್ರೀತಿಯ ಶ್ವಾನ ‘ಗೋಪಿ’ ಕೂಡ ಭಾಗಿ |

October 7, 2024
8:27 PM

ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ  ಜೆ.ಕೆ. ಮೈದಾನದಲ್ಲಿ “ಶ್ವಾನಗಳ ಪ್ರದರ್ಶನ ಸ್ಪರ್ಧೆ” ಏರ್ಪಡಿಸಲಾಗಿತ್ತು. ಜರ್ಮನ್ ಶಫರ್ಡ್, ಡಾಬರ್ ಮ್ಯಾನ್, ಮುಧೋಳ, ಸಿಬೇರಿಯನ್ ಹಸ್ಕಿ ಸೇರಿದಂತೆ ಸುಮಾರು 45 ತಳಿಯ ಶ್ವಾನಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಸುಧಾಮೂರ್ತಿ ಅವರ ಮುದ್ದಾದ ಶ್ವಾನ ‘ಗೋಪಿ’ ಕೂಡ ಪ್ರದರ್ಶನದಲ್ಲಿ ಪಾಲ್ಗೊಂಡಿತ್ತು. 

Advertisement

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಪ್ರಾಣಿಯ ಪ್ರೀತಿ ಹೆಚ್ಚಾಗಲಿದೆ. ತಮಗೂ ಶ್ವಾನಗಳೆಂದರೆ ಹೆಚ್ಚು ಆಸಕ್ತಿ. ಕಾರ್ಯಕ್ರಮದಲ್ಲಿ ಭಾಗಿವಹಿಸಿ ವಿವಿಧ ತಳಿಯ ಶ್ವಾನಗಳನ್ನು ನೋಡಲು ಸಾಧ್ಯವಾಗಿದ್ದು, ಸಂತಸ ತಂದಿದೆ ಎಂದರು. ಈ ವರ್ಷ 550ಕ್ಕೂ ಹೆಚ್ಚು ಶ್ವಾನಗಳು ಮತ್ತು ಬೆಕ್ಕುಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಆಯ್ಕೆ ಮಾಡುವುದು ತೀರ್ಪುಗಾರರಿಗೆ ಬಹಳ ಕಷ್ಟ. ಏಕೆಂದರೆ ಇಲ್ಲಿ ಬಂದಿರುವ ಪ್ರಾಣಿಗಳು ಅಷ್ಟು ಮುದ್ದಾಗಿವೆ. ಭಾಗವಹಿಸಿದ ಶ್ವಾನಗಳಿಗೆ ಬಹುಮಾನ ಬರಲಿಲ್ಲ ಎಂದು ಬೇಸರ ಬೇಡ ಅಥವಾ ‌ನಮ್ಮ ನಾಯಿ ಚೆನ್ನಾಗಿ ಇಲ್ಲ ಎಂದು ತಿಳಿದುಕೊಳ್ಳಬೇಡಿ. ಅವರವರ ಶ್ವಾನಗಳು ಮಾಲೀಕರ ಹೃದಯಕ್ಕೆ ಹತ್ತಿರವಾಗಿಯೇ ಇರುತ್ತದೆ ಎಂದರು.

ನಮ್ಮ ಗೋಪಿ ಕೂಡಾ ಈ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಅವನು ಬಹಳ ಸುಂದರ ಮತ್ತು  ಸ್ನೇಹಮಯಿ ಆಗಿದ್ದಾನೆ. ಅವನ ಪುಸ್ತಕವು ಭಾರತದ ಎಂಟು ಭಾಷೆಗಳಲ್ಲಿ ಭಾಷಾಂತರಗೊಂಡಿದೆ. ಅದು ವರ್ಷಕ್ಕೆ 5 ಲಕ್ಷ ಕಾಪಿ ಮಾರಾಟವಾಗುತ್ತದೆ. ಈ ದುಡ್ದಿನಲ್ಲಿ ಬೀದಿ ನಾಯಿಗಳಿಗೆ ಪ್ರತಿ ತಿಂಗಳು 2 ಸಾವಿರ ಕೆ.ಜಿ ಅಕ್ಕಿಯನ್ನು ಕೊಡುತ್ತೇವೆ. ಮಕ್ಕಳು ಕೇವಲ ಗೊಂಬೆಗಳೊಂದಿಗೆ ಬೆಳೆದರೆ ಸ್ವಾರ್ಥ ಬಂದು ಬಿಡುತ್ತದೆ. ಆದ್ದರಿಂದ ಮನೆಯಲ್ಲಿ ಪ್ರಾಣಿಗಳನ್ನು ಸಾಕಿದರೆ ಕರುಣೆ, ಅಂತಃಕರಣ, ನಿಷ್ಕಲ್ಮಶವಾದ ಪ್ರೀತಿ ಮಕ್ಕಳಲ್ಲಿ ಬೆಳೆಯುತ್ತದೆ ಎಂದು ಸುಧಾಮೂರ್ತಿ ತಿಳಿಸಿದರು.

ವಿಜೇತರಾದ ಪೂಜಾ, ಈ ಸ್ಪರ್ಧೆಯಲ್ಲಿ ತಮ್ಮ ಶ್ವಾನ ಮೊದಲ ಸ್ಥಾನ ಗಳಿಸಿದ್ದು ಸಂತಸವಾಗಿದೆ. ಶ್ವಾನಪ್ರಿಯರಿಗೆ ಇದೊಂದು ಆಸಕ್ತದಾಯಕ ಕಾರ್ಯಕ್ರಮ ಎಂದರು.

ಶ್ವಾನ ಸ್ಪರ್ಧಿ ನಂಬ್ರತಾ, ಇದೇ ಮೊದಲ ಬಾರಿಗೆ ತಮ್ಮ ಶ್ವಾನ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಶ್ವಾನಗಳಿಗೂ ಮನರಂಜನೆ ದೊರೆತಂತಾಗುತ್ತದೆ ಎಂದು ಹೇಳಿದರು.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು
April 24, 2025
6:45 AM
by: The Rural Mirror ಸುದ್ದಿಜಾಲ
ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ
April 24, 2025
6:29 AM
by: The Rural Mirror ಸುದ್ದಿಜಾಲ
82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ
April 24, 2025
6:10 AM
by: ದ ರೂರಲ್ ಮಿರರ್.ಕಾಂ
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ
April 24, 2025
6:05 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group