ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಜೆ.ಕೆ. ಮೈದಾನದಲ್ಲಿ “ಶ್ವಾನಗಳ ಪ್ರದರ್ಶನ ಸ್ಪರ್ಧೆ” ಏರ್ಪಡಿಸಲಾಗಿತ್ತು. ಜರ್ಮನ್ ಶಫರ್ಡ್, ಡಾಬರ್ ಮ್ಯಾನ್, ಮುಧೋಳ, ಸಿಬೇರಿಯನ್ ಹಸ್ಕಿ ಸೇರಿದಂತೆ ಸುಮಾರು 45 ತಳಿಯ ಶ್ವಾನಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಸುಧಾಮೂರ್ತಿ ಅವರ ಮುದ್ದಾದ ಶ್ವಾನ ‘ಗೋಪಿ’ ಕೂಡ ಪ್ರದರ್ಶನದಲ್ಲಿ ಪಾಲ್ಗೊಂಡಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಪ್ರಾಣಿಯ ಪ್ರೀತಿ ಹೆಚ್ಚಾಗಲಿದೆ. ತಮಗೂ ಶ್ವಾನಗಳೆಂದರೆ ಹೆಚ್ಚು ಆಸಕ್ತಿ. ಕಾರ್ಯಕ್ರಮದಲ್ಲಿ ಭಾಗಿವಹಿಸಿ ವಿವಿಧ ತಳಿಯ ಶ್ವಾನಗಳನ್ನು ನೋಡಲು ಸಾಧ್ಯವಾಗಿದ್ದು, ಸಂತಸ ತಂದಿದೆ ಎಂದರು. ಈ ವರ್ಷ 550ಕ್ಕೂ ಹೆಚ್ಚು ಶ್ವಾನಗಳು ಮತ್ತು ಬೆಕ್ಕುಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಆಯ್ಕೆ ಮಾಡುವುದು ತೀರ್ಪುಗಾರರಿಗೆ ಬಹಳ ಕಷ್ಟ. ಏಕೆಂದರೆ ಇಲ್ಲಿ ಬಂದಿರುವ ಪ್ರಾಣಿಗಳು ಅಷ್ಟು ಮುದ್ದಾಗಿವೆ. ಭಾಗವಹಿಸಿದ ಶ್ವಾನಗಳಿಗೆ ಬಹುಮಾನ ಬರಲಿಲ್ಲ ಎಂದು ಬೇಸರ ಬೇಡ ಅಥವಾ ನಮ್ಮ ನಾಯಿ ಚೆನ್ನಾಗಿ ಇಲ್ಲ ಎಂದು ತಿಳಿದುಕೊಳ್ಳಬೇಡಿ. ಅವರವರ ಶ್ವಾನಗಳು ಮಾಲೀಕರ ಹೃದಯಕ್ಕೆ ಹತ್ತಿರವಾಗಿಯೇ ಇರುತ್ತದೆ ಎಂದರು.
ನಮ್ಮ ಗೋಪಿ ಕೂಡಾ ಈ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಅವನು ಬಹಳ ಸುಂದರ ಮತ್ತು ಸ್ನೇಹಮಯಿ ಆಗಿದ್ದಾನೆ. ಅವನ ಪುಸ್ತಕವು ಭಾರತದ ಎಂಟು ಭಾಷೆಗಳಲ್ಲಿ ಭಾಷಾಂತರಗೊಂಡಿದೆ. ಅದು ವರ್ಷಕ್ಕೆ 5 ಲಕ್ಷ ಕಾಪಿ ಮಾರಾಟವಾಗುತ್ತದೆ. ಈ ದುಡ್ದಿನಲ್ಲಿ ಬೀದಿ ನಾಯಿಗಳಿಗೆ ಪ್ರತಿ ತಿಂಗಳು 2 ಸಾವಿರ ಕೆ.ಜಿ ಅಕ್ಕಿಯನ್ನು ಕೊಡುತ್ತೇವೆ. ಮಕ್ಕಳು ಕೇವಲ ಗೊಂಬೆಗಳೊಂದಿಗೆ ಬೆಳೆದರೆ ಸ್ವಾರ್ಥ ಬಂದು ಬಿಡುತ್ತದೆ. ಆದ್ದರಿಂದ ಮನೆಯಲ್ಲಿ ಪ್ರಾಣಿಗಳನ್ನು ಸಾಕಿದರೆ ಕರುಣೆ, ಅಂತಃಕರಣ, ನಿಷ್ಕಲ್ಮಶವಾದ ಪ್ರೀತಿ ಮಕ್ಕಳಲ್ಲಿ ಬೆಳೆಯುತ್ತದೆ ಎಂದು ಸುಧಾಮೂರ್ತಿ ತಿಳಿಸಿದರು.
ವಿಜೇತರಾದ ಪೂಜಾ, ಈ ಸ್ಪರ್ಧೆಯಲ್ಲಿ ತಮ್ಮ ಶ್ವಾನ ಮೊದಲ ಸ್ಥಾನ ಗಳಿಸಿದ್ದು ಸಂತಸವಾಗಿದೆ. ಶ್ವಾನಪ್ರಿಯರಿಗೆ ಇದೊಂದು ಆಸಕ್ತದಾಯಕ ಕಾರ್ಯಕ್ರಮ ಎಂದರು.
ಶ್ವಾನ ಸ್ಪರ್ಧಿ ನಂಬ್ರತಾ, ಇದೇ ಮೊದಲ ಬಾರಿಗೆ ತಮ್ಮ ಶ್ವಾನ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಶ್ವಾನಗಳಿಗೂ ಮನರಂಜನೆ ದೊರೆತಂತಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…