ಇನ್ನು ಮುಂದೆ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡವರಿಗೆ 3,500 ರೂ ಹಾಗೂ ಅದರಲ್ಲಿ 1,500 ಚಿಕಿತ್ಸೆ ವೆಚ್ಚಕ್ಕೆ ನೀಡಲಾಗುವುದು. ಇನ್ನು ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟವರಿಗೆ 5 ಲಕ್ಷ ರೂ ಪರಿಹಾರ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.
ಬೀದಿ ನಾಯಿಗಳನ್ನು ಸಂತಾನಹರಣ ಮಾಡುವುದು ಮತ್ತು ಲಸಿಕೆ ಹಾಕುವುದನ್ನು ಬೆಂಬಲಿಸಬೇಕು. ಈ ರೀತಿ ಮಾಡಿದ ನಾಯಿಗಳನ್ನು ಅದರ ವಾಸಸ್ಥಾನಗಳಿಗೆ ಬಿಡಬೇಕು ಹೊರತು ಸಾರ್ವಜನಿಕ ಸ್ಥಳಗಳಲ್ಲಿ ಬಿಡಬಾರದು ಎಂಬ ನಿಯಮವನ್ನು ಸುಪ್ರಿಂ ಕೋರ್ಟ್ ಆದೇಶವನ್ನು ಜಾರಿಗೊಳಿಸಿದರೂ ಏನೂ ಪ್ರಯೋಜನಕಾರಿಯಾಗಿಲ್ಲ. ಬೀದಿ ನಾಯಿಗಳ ಕಾಟ ಇತ್ತೀಚಿಗೆ ಹೆಚ್ಚಾಗಿದ್ದು, ಅದೇಷ್ಟೋ ಮಕ್ಕಳ ಮೇಲೆಯೂ ದಾಳಿ ಮಾಡುತ್ತಿದೆ.
ಇದೀಗ, ರಾಜ್ಯ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ. ಅದೇನೆಂದರೆ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡವರಿಗೆ 3,500 ರೂ ಹಾಗೂ ಅದರಲ್ಲಿ 1,500 ಚಿಕಿತ್ಸೆ ವೆಚ್ಚಕ್ಕೆ ನೀಡಲಾಗುವುದು. ಇನ್ನು ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟವರಿಗೆ 5 ಲಕ್ಷ ರೂ ಪರಿಹಾರ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದೆ. ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗುವ ನಾಗರಿಕರಿಗೆ ಸಂಬಂಧಿಸಿದಂತೆ, ಪರಿಶೀಲನಾ ಮತ್ತು ಪರಿಹಾರಧನ ವಿತರಿಸುವ ಸಮಿತಿಯನ್ನು ರಚಿಸಲಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…
ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…
ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…
ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…
ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…
ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…