Advertisement
MIRROR FOCUS

ಗ್ರಾಮೀಣ ಶಾಲೆಗಳಿಗೆ “ಸೇವೆ” | ವೈದ್ಯರ ತಂಡದ “ಸಂಕಲ್ಪ” | ಬಾಳಿಲ ಶಾಲೆಗೆ ಕಲಿಕಾ ಸಾಮಾಗ್ರಿಗಳ ಹಸ್ತಾಂತರ |

Share

ಗ್ರಾಮೀಣ ಭಾಗದ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕಾದ್ದು ಇಂದಿನಿ ಅನಿವಾರ್ಯತೆ ಹಾಗೂ ಅಗತ್ಯವೂ ಹೌದು. ಇದಕ್ಕಾಗಿ ಒಂದಷ್ಟು ಯುವಕರು, ಚಿಂತನಶೀಲರು ಕೆಲಸ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದ “ಸಂಕಲ್ಪ” ತಂಡವೂ ಅಂತಹದ್ದೇ ಕೆಲಸ ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳಿಲದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಗೆ ಚಿಕ್ಕಬಳ್ಳಾಪುರದ “ಸಂಕಲ್ಪ” ತಂಡ ಹಾಗೂ ಡಾ.ಕಿಶನ್‌ ರಾವ್‌ ಬಾಳಿಲ ಇವರು ಜೊತೆಯಾಗಿ ಅಗತ್ಯ ಸಾಮಾಗ್ರಿಗಳನ್ನು ವಿತರಿಸಿದ್ದಾರೆ.

Advertisement
Advertisement

Advertisement

ಗ್ರಾಮೀಣ ಭಾಗದಲ್ಲಿ ಶಿಕ್ಷಣ ವ್ಯವಸ್ಥೆಗೆ ಬಹಳಷ್ಟು ಮೂಲಭೂತ ಕೊರತೆ ಇದೆ. ಹಲವು ಕಡೆ ಶಾಲೆಗಳಿಗೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ.  ಶಾಲೆಯಲ್ಲಿ ಇರುವ ಶಿಕ್ಷಕರು ಇರುವ ವ್ಯವಸ್ಥೆಯಲ್ಲಿ ಉತ್ತಮ ಶಿಕ್ಷಣ ನೀಡಲು ಪ್ರಯತ್ನ ಪಡುತ್ತಾರೆ. ಒಂದಿಷ್ಟು ವ್ಯವಸ್ಥೆಗಳು ಗ್ರಾಮೀಣ ಶಾಲೆಗಳಿಗೂ ಸಿಕ್ಕಿದರೆ ಉತ್ತಮವಾದ ಶಿಕ್ಷಣ ನೀಡಲು ಗ್ರಾಮೀಣ ಭಾಗದಲ್ಲೂ ಸಾಧ್ಯವಿದೆ. ಇದಕ್ಕೆ ಉದಾಹರಣೆಯಾಗಿ ಹಲವು ಶಾಲೆಗಳು ಇವೆ. ಸರ್ಕಾರದಿಂದ ಬಹುತೇಕ ವ್ಯವಸ್ಥೆಗಳು ಲಭ್ಯವಾಗುವುದು ಕಡಿಮೆಯೇ ಆಗುತ್ತದೆ. ಅಗತ್ಯ ಸೇವೆಗಳಿಗೆ ಯಾವತ್ತೂ ಹತ್ತಾರು ತಡೆಗಳು ಇರುತ್ತವೆ. ಈಗ ಗ್ರಾಮೀಣ ಶಾಲೆಗಳಿಗೆ ಕೊಡುಗೆ ನೀಡುವ ಒಂದಷ್ಟು ಮಂದಿ, ಸಂಘಟನೆಗಳು ಹೆಚ್ಚು ಸಕ್ರಿಯವಾದರೆ ಈ ಕೊರತೆಗಳನ್ನು ನೀಗಿಸಲು ಸಾಧ್ಯವಿದೆ.

ಚಿಕ್ಕಬಳ್ಳಾಪುರದ ಸಂಕಲ್ಪ ಬಳಗವು ಚಿಕ್ಕಬಳ್ಳಾಪುರದ ಹತ್ತಾರು ಗ್ರಾಮೀಣ ಶಾಲೆಗಳಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿದೆ. ಈ ತಂಡದಲ್ಲಿ ವೈದ್ಯರುಗಳಾದ  ಡಾ.ಭಾಸ್ಕರ ಬೆಂಗಳೂರು, ಡಾ.ಪ್ರಶಾಂತ ಕೇಸರಿ,  ಶ್ರೀನಿವಾಸ ರಾವ್‌, ಎಸ್‌ ಆರ್‌ ವಿಜಯಾನಂದ , ಡಾ.ಕಿಶನ್‌ ರಾವ್‌ ಇದ್ದಾರೆ. ಇವರೆಲ್ಲಾ ಸೇರಿ ಅಗತ್ಯ ಉಳ್ಳ ಗ್ರಾಮೀಣ ಜನರಿಗೆ, ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡುತ್ತಿದ್ದಾರೆ. ಅಂದರೆ ಗ್ರಾಮೀಣ ಭಾಗದ ಶಿಕ್ಷಣ ಹಾಗೂ ಆರೋಗ್ಯ ಸೇವೆ ಉತ್ತಮಗೊಳ್ಳಬೇಕು ಎನ್ನುವುದು ಇವರ ಕಾಳಜಿ. ಈಗ ಬಾಳಿಲ ಹಿರಿಯ ಪ್ರಾಥಮಿಕ ಶಾಲೆಗೆ, ನಲಿಕಲಿ ಪೀಠೋಪಕರಣ, ಬೆಂಚು-ಡೆಸ್ಕ್‌, ವಿಜ್ಞಾನ ಪ್ರಯೋಗಾಲಯಕ್ಕೆ ಬೋಧನಾ ಸಲಕರಣೆ, ಆಟೋಟ ಸಾಮಾಗ್ರಿ… ಹೀಗೆ ಸುಮಾರು 1.5 ಲಕ್ಷ ರೂಪಾಯಿ ವಸ್ತುಗಳನ್ನು ನೀಡಿದ್ದಾರೆ.

Advertisement

ಈ ಎಲ್ಲಾ ವಸ್ತುಗಳ ಹಸ್ತಾಂತರ ಕಾರ್ಯಕ್ರಮವೂ ಈಚೆಗೆ ನಡೆಯಿತು. ಡಾ.ಕಿಶನ್‌ ರಾವ್‌ ಬಾಳಿಲ ಹಸ್ತಾಂತರ ನಡೆಸಿದರು. ಬಾಳಿಲ ವಿದ್ಯಾಬೋಧಿನೀ ಎಜುಕೇಶನ್‌ ಸೊಸೈಟಿಯ ಅಧ್ಯಕ್ಷ ರಾಧಾಕೃಷ್ಣ ರಾವ್‌, ಸಂಚಾಲಕ ಪಿಜಿಎಸ್‌ಎನ್‌ ಪ್ರಸಾದ್‌, ಶಿಕ್ಷಣ ಇಲಾಖೆಯ ಆಶಾ  ನಾಯಕ್‌, ಶಾಲಾಮುಖ್ಯಗುರುಗಳಾದ ಉದಯಕುಮಾರ್‌ ರೈ,  ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮೊದಲಾದವರು ಇದ್ದರು.

ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಈ ಮಾದರಿಯ ಕೊಡುಗೆಗಳು ಲಭ್ಯವಾದರೆ ಉತ್ತಮ ಶಿಕ್ಷಣವನ್ನು ಗ್ರಾಮೀಣ ಭಾಗದಲ್ಲೂ ಕೂಡಾ ನೀಡಲು ಸಾಧ್ಯವಿದೆ. ಶಿಕ್ಷಣದ ಮೂಲಕ ಗ್ರಾಮೀಣ ಸುಧಾರಣೆ ಸಾಧ್ಯವಿದೆ.

Advertisement

Advertisement

Rural education continues to be a pressing issue in many areas, with a lack of proper infrastructure hindering access to quality schooling. In some regions, the absence of a reliable road system makes it difficult for students to even reach their schools. Despite these challenges, dedicated teachers work tirelessly to provide a quality education within the limitations of the existing system. It is crucial that we address these issues and prioritize investment in rural education to ensure that all children have access to a quality education, regardless of their geographical location.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂದುವರಿದ ಮಳೆ | ದ ಕ ಜಿಲ್ಲೆಗೆ ರೆಡ್‌ ಎಲರ್ಟ್ | ಶಾಲೆ-ಕಾಲೇಜಿಗೆ ಜೂ.28 ರಂದು ರಜೆ ಘೋಷಣೆ |

ದ ಕ ಜಿಲ್ಲೆಯಲ್ಲಿ  ಜೂ.28ರಂದು ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ…

10 hours ago

ಸರ್ಕಾರದ ಹತ್ತಾರು ಕೆಲಸಗಳ ಜೊತೆಗೆ ಮಕ್ಕಳ ಲಾಲನೆ ಪಾಲನೆ | ಕೇಳುವವರಿಲ್ಲ ಈ ಅಂಗನವಾಡಿ ಮಾತೆಯರ ಬದುಕು ಬವಣೆ |

“ಬಾ ಬಾ ಗೊಂಬೆ , ಬಣ್ಣದ ಗೊಂಬೆ ಬೆಣ್ಣೆ ಬಿಸ್ಕೆಟ್ ತಿನ್ನೋಣ, ಕುದುರೆ…

15 hours ago

ಬಾಹ್ಯಾಕಾಶದಲ್ಲೇ ಸಿಲುಕಿಕೊಂಡ ಗಗನಯಾತ್ರಿಗಳು | ನಮ್ಮ ದೇಶದ ಸುನೀತಾ ವಿಲಿಯಮ್ಸ್​​​​ ಬಾಹ್ಯಾಕಾಶದಲ್ಲಿ | ಏನು ಈ ತಾಂತ್ರಿಕ ಸಮಸ್ಯೆ, ಸಂಕಷ್ಟ?

ಬಾಹ್ಯಾಕಾಶಕ್ಕೆ(Space) ಗಗನಯಾತ್ರಿಗಳು(Astonauts) ಹೋಗೋದು ಅಂದ್ರೆ ಹೆಮ್ಮೆಯ ವಿಷಯ. ಆದರೆ ಕಲ್ಪನಾ ಚಾವ್ಲ(Kalpana Chawla)ಆ…

15 hours ago

ರಾಜ್ಯದಲ್ಲಿ ಡೆಂಗ್ಯು ಪ್ರಕರಣ ಶೇ. 60 ರಷ್ಟು ಹೆಚ್ಚಳ | ಸೊಳ್ಳೆಗಳ ನಿಯಂತ್ರಣಕ್ಕೆ ಗಪ್ಪಿ ಮೀನು ಪ್ರಯೋಗ | ಇದು ಲಾರ್ವಾ ತಿಂದು ಬದುಕುವ ಜಲಚರ

ರಾಜ್ಯಾದ್ಯಂತ ಮಳೆಗಾಲ(Rain) ಆರಂಭವಾಗುತ್ತಿದ್ದಂತೆ ಡೆಂಗ್ಯು ಪ್ರಕರಣಗಳು(Dengue case) ಹೆಚ್ಚಾಗುತ್ತಲೇ ಇದೆ. 2023 ಕ್ಕೆ…

16 hours ago

ಕಾಲಿಟ್ಟಲ್ಲೆಲ್ಲಾ ಕಸ ಕಸ ಕಸ…… ಇದಕ್ಕೆ ನಾವೇನು ಮಾಡಬಹುದು? | ನಮ್ಮ ಜವಾಬ್ದಾರಿ ಏನು..? |

ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ವಿಲೇವಾರಿಯ ಜಾಗೃತಿಯ ಉದ್ದೇಶದಿಂದ ಬಿ ಸಂ, ಕೃಷ್ಣ…

17 hours ago

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಉತ್ತಮ ಮಳೆ | ಕುಕ್ಕೆಯ ಕುಮಾರಧಾರ ಸ್ನಾನಘಟ್ಟ ಮುಳುಗಡೆ | ಹೊನ್ನಾವರದ ಭಾಸ್ಕೇರಿ ಬಳಿ ಗುಡ್ಡ ಕುಸಿತ | ಮುಂದುವರಿದ ಮಳೆ |

ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ.ಪಶ್ಚಿಮ ಘಟ್ಟದ ಆಸುಪಾಸಿನಲ್ಲಿ ಭಾರೀ ಮಳೆಗೆ ಅಲ್ಲಲ್ಲಿ…

17 hours ago