Advertisement
MIRROR FOCUS

ಗ್ರಾಮೀಣ ಶಾಲೆಗಳಿಗೆ “ಸೇವೆ” | ವೈದ್ಯರ ತಂಡದ “ಸಂಕಲ್ಪ” | ಬಾಳಿಲ ಶಾಲೆಗೆ ಕಲಿಕಾ ಸಾಮಾಗ್ರಿಗಳ ಹಸ್ತಾಂತರ |

Share

ಗ್ರಾಮೀಣ ಭಾಗದ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕಾದ್ದು ಇಂದಿನಿ ಅನಿವಾರ್ಯತೆ ಹಾಗೂ ಅಗತ್ಯವೂ ಹೌದು. ಇದಕ್ಕಾಗಿ ಒಂದಷ್ಟು ಯುವಕರು, ಚಿಂತನಶೀಲರು ಕೆಲಸ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದ “ಸಂಕಲ್ಪ” ತಂಡವೂ ಅಂತಹದ್ದೇ ಕೆಲಸ ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳಿಲದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಗೆ ಚಿಕ್ಕಬಳ್ಳಾಪುರದ “ಸಂಕಲ್ಪ” ತಂಡ ಹಾಗೂ ಡಾ.ಕಿಶನ್‌ ರಾವ್‌ ಬಾಳಿಲ ಇವರು ಜೊತೆಯಾಗಿ ಅಗತ್ಯ ಸಾಮಾಗ್ರಿಗಳನ್ನು ವಿತರಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಶಿಕ್ಷಣ ವ್ಯವಸ್ಥೆಗೆ ಬಹಳಷ್ಟು ಮೂಲಭೂತ ಕೊರತೆ ಇದೆ. ಹಲವು ಕಡೆ ಶಾಲೆಗಳಿಗೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ.  ಶಾಲೆಯಲ್ಲಿ ಇರುವ ಶಿಕ್ಷಕರು ಇರುವ ವ್ಯವಸ್ಥೆಯಲ್ಲಿ ಉತ್ತಮ ಶಿಕ್ಷಣ ನೀಡಲು ಪ್ರಯತ್ನ ಪಡುತ್ತಾರೆ. ಒಂದಿಷ್ಟು ವ್ಯವಸ್ಥೆಗಳು ಗ್ರಾಮೀಣ ಶಾಲೆಗಳಿಗೂ ಸಿಕ್ಕಿದರೆ ಉತ್ತಮವಾದ ಶಿಕ್ಷಣ ನೀಡಲು ಗ್ರಾಮೀಣ ಭಾಗದಲ್ಲೂ ಸಾಧ್ಯವಿದೆ. ಇದಕ್ಕೆ ಉದಾಹರಣೆಯಾಗಿ ಹಲವು ಶಾಲೆಗಳು ಇವೆ. ಸರ್ಕಾರದಿಂದ ಬಹುತೇಕ ವ್ಯವಸ್ಥೆಗಳು ಲಭ್ಯವಾಗುವುದು ಕಡಿಮೆಯೇ ಆಗುತ್ತದೆ. ಅಗತ್ಯ ಸೇವೆಗಳಿಗೆ ಯಾವತ್ತೂ ಹತ್ತಾರು ತಡೆಗಳು ಇರುತ್ತವೆ. ಈಗ ಗ್ರಾಮೀಣ ಶಾಲೆಗಳಿಗೆ ಕೊಡುಗೆ ನೀಡುವ ಒಂದಷ್ಟು ಮಂದಿ, ಸಂಘಟನೆಗಳು ಹೆಚ್ಚು ಸಕ್ರಿಯವಾದರೆ ಈ ಕೊರತೆಗಳನ್ನು ನೀಗಿಸಲು ಸಾಧ್ಯವಿದೆ.

ಚಿಕ್ಕಬಳ್ಳಾಪುರದ ಸಂಕಲ್ಪ ಬಳಗವು ಚಿಕ್ಕಬಳ್ಳಾಪುರದ ಹತ್ತಾರು ಗ್ರಾಮೀಣ ಶಾಲೆಗಳಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿದೆ. ಈ ತಂಡದಲ್ಲಿ ವೈದ್ಯರುಗಳಾದ  ಡಾ.ಭಾಸ್ಕರ ಬೆಂಗಳೂರು, ಡಾ.ಪ್ರಶಾಂತ ಕೇಸರಿ,  ಶ್ರೀನಿವಾಸ ರಾವ್‌, ಎಸ್‌ ಆರ್‌ ವಿಜಯಾನಂದ , ಡಾ.ಕಿಶನ್‌ ರಾವ್‌ ಇದ್ದಾರೆ. ಇವರೆಲ್ಲಾ ಸೇರಿ ಅಗತ್ಯ ಉಳ್ಳ ಗ್ರಾಮೀಣ ಜನರಿಗೆ, ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡುತ್ತಿದ್ದಾರೆ. ಅಂದರೆ ಗ್ರಾಮೀಣ ಭಾಗದ ಶಿಕ್ಷಣ ಹಾಗೂ ಆರೋಗ್ಯ ಸೇವೆ ಉತ್ತಮಗೊಳ್ಳಬೇಕು ಎನ್ನುವುದು ಇವರ ಕಾಳಜಿ. ಈಗ ಬಾಳಿಲ ಹಿರಿಯ ಪ್ರಾಥಮಿಕ ಶಾಲೆಗೆ, ನಲಿಕಲಿ ಪೀಠೋಪಕರಣ, ಬೆಂಚು-ಡೆಸ್ಕ್‌, ವಿಜ್ಞಾನ ಪ್ರಯೋಗಾಲಯಕ್ಕೆ ಬೋಧನಾ ಸಲಕರಣೆ, ಆಟೋಟ ಸಾಮಾಗ್ರಿ… ಹೀಗೆ ಸುಮಾರು 1.5 ಲಕ್ಷ ರೂಪಾಯಿ ವಸ್ತುಗಳನ್ನು ನೀಡಿದ್ದಾರೆ.

ಈ ಎಲ್ಲಾ ವಸ್ತುಗಳ ಹಸ್ತಾಂತರ ಕಾರ್ಯಕ್ರಮವೂ ಈಚೆಗೆ ನಡೆಯಿತು. ಡಾ.ಕಿಶನ್‌ ರಾವ್‌ ಬಾಳಿಲ ಹಸ್ತಾಂತರ ನಡೆಸಿದರು. ಬಾಳಿಲ ವಿದ್ಯಾಬೋಧಿನೀ ಎಜುಕೇಶನ್‌ ಸೊಸೈಟಿಯ ಅಧ್ಯಕ್ಷ ರಾಧಾಕೃಷ್ಣ ರಾವ್‌, ಸಂಚಾಲಕ ಪಿಜಿಎಸ್‌ಎನ್‌ ಪ್ರಸಾದ್‌, ಶಿಕ್ಷಣ ಇಲಾಖೆಯ ಆಶಾ  ನಾಯಕ್‌, ಶಾಲಾಮುಖ್ಯಗುರುಗಳಾದ ಉದಯಕುಮಾರ್‌ ರೈ,  ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮೊದಲಾದವರು ಇದ್ದರು.

ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಈ ಮಾದರಿಯ ಕೊಡುಗೆಗಳು ಲಭ್ಯವಾದರೆ ಉತ್ತಮ ಶಿಕ್ಷಣವನ್ನು ಗ್ರಾಮೀಣ ಭಾಗದಲ್ಲೂ ಕೂಡಾ ನೀಡಲು ಸಾಧ್ಯವಿದೆ. ಶಿಕ್ಷಣದ ಮೂಲಕ ಗ್ರಾಮೀಣ ಸುಧಾರಣೆ ಸಾಧ್ಯವಿದೆ.

Rural education continues to be a pressing issue in many areas, with a lack of proper infrastructure hindering access to quality schooling. In some regions, the absence of a reliable road system makes it difficult for students to even reach their schools. Despite these challenges, dedicated teachers work tirelessly to provide a quality education within the limitations of the existing system. It is crucial that we address these issues and prioritize investment in rural education to ensure that all children have access to a quality education, regardless of their geographical location.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ | ಮತ್ತೆ ಚೇತರಿಕೆಯ ಸಂಕೇತ ನೀಡಿದ ಅಡಿಕೆ ಧಾರಣೆ

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಜಿಗೆ ₹5 ಏರಿಕೆ ದಾಖಲಾಗಿದ್ದು, ಹೊಸ ಅಡಿಕೆ…

6 hours ago

ಒಂದು ದಿನದ ತೀವ್ರ ಬಿಸಿಲು 3,400 ಹೆಚ್ಚುವರಿ ಸಾವುಗಳಿಗೆ ಕಾರಣ…? ಭಾರತದ ಬಗ್ಗೆ ಬೆಚ್ಚಿಬೀಳಿಸುವ ಅಧ್ಯಯನ

ಭಾರತದಲ್ಲಿ ಕೇವಲ ಒಂದು ದಿನದ ತೀವ್ರ ಬಿಸಿಲು ಸುಮಾರು 3,400 ಹೆಚ್ಚುವರಿ ಸಾವುಗಳಿಗೆ…

10 hours ago

ಹವಾಮಾನ ಬಿಕ್ಕಟ್ಟಿನ ನಡುವೆಯೂ ಕೃಷಿ ಉಳಿಸುವ ದಾರಿ ಕಂಡುಕೊಂಡ ದಕ್ಷಿಣ ಏಷ್ಯಾ ದೇಶಗಳು – ಸ್ಥಳೀಯ ಆವಿಷ್ಕಾರಗಳಿಗೆ ಹೆಚ್ಚಿದ ಮಹತ್ವ

ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳು ಹವಾಮಾನ ಬದಲಾವಣೆ ಮತ್ತು ಆಹಾರ ಭದ್ರತೆ ಸವಾಲುಗಳನ್ನು…

11 hours ago

ಮುಂಗಾರು ಅಧಿಕೃತ ದಿನಾಂಕ ತಪ್ಪಿತು..! ಜೂನ್ ಮೊದಲ ವಾರದ ಬಳಿಕವೇ ಭಾರೀ ಮಳೆ ಸಾಧ್ಯತೆ ಎಂದ ಸ್ಕೈಮೆಟ್

ಈ ಬಾರಿ ಮುಂಗಾರು ತನ್ನ ಸಾಮಾನ್ಯ ಪ್ರವೇಶ ದಿನಾಂಕವನ್ನು ತಪ್ಪಿಸಿದೆ ಎಂದು ಸ್ಕೈಮೆಟ್…

21 hours ago

ಹೊಸ ಪಕ್ಷ ಸ್ಥಾಪನೆ ಊಹಾಪೋಹ – ‘ಇನ್ನೆರಡು ದಿನಗಳಲ್ಲಿ ಸ್ಪಷ್ಟನೆ ಕೊಡುತ್ತೇನೆ’ ಎಂದ ಅಣ್ಣಾಮಲೈ

ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ಊಹಾಪೋಹಗಳ…

21 hours ago

ಹವಾಮಾನ ವರದಿ | 01-06-2026 | ಜೂನ್ 4 ರಿಂದ ಕರಾವಳಿಯಲ್ಲಿ ಮುಂಗಾರು ಚಟುವಟಿಕೆ ಆರಂಭ ಸಾಧ್ಯತೆ – ಜೂನ್ 8ರಿಂದ ಮಳೆ ಮತ್ತಷ್ಟು ಹೆಚ್ಚಳದ ಸೂಚನೆ

ಕರ್ನಾಟಕದ ವಿವಿಧ ಭಾಗಗಳಲ್ಲಿ ಸಂಜೆ ಹಾಗೂ ರಾತ್ರಿ ಮಳೆಯ ವಾತಾವರಣ ಮುಂದುವರಿಯಲಿದೆ. ಜೂನ್…

1 day ago