ಮರೆಯದಿರಿ ಅಂಟುವಾಳ ಕಾಯಿ.. ಉಳಿಸಿ.. ಬೆಳೆಸಿ.. ಉಪಯೋಗಿಸಿ..

January 15, 2024
3:46 PM

 ಅಂಟುವಾಳದ ಕಾಯಿ… ಅಂಟಂಗಿಲ ಕಾಯಿ, ನರ್ವೋಳು, ಸೋಪ್ನಟ್(soap nut) ಎಂಬ ಹೆಸರಿನಿಂದಲೂ ಕರೆಸಿಕೊಳ್ಳುತ್ತದೆ. ಕೃತಕ ಸಾಬೂನುಗಳ(artificial soap) ಆವಿಷ್ಕಾರ(invention) ವಾಗುವವರೆಗೆ ಪರಿಸರಕ್ಕೆ ಪೂರಕವಾಗಿ(Natural), ಸ್ವಾವಲಂಬಿಯಾಗಿ ಸ್ವಾಭಿಮಾನದಿಂದ ಬದುಕುವ ಮಂದಿಗಳಿಗೆ ಬಟ್ಟೆ ಒಗೆಯುವುದರಿಂದ(Washing clothes) ಹಿಡಿದು ಪಾತ್ರೆಗಳನ್ನು(dish wash) ತೊಳೆಯುವವರೆಗೆ ಎಲ್ಲದಕ್ಕೂ ಬಹುಪಯೋಗಿಯಾಗಿತ್ತು.

Advertisement

ಆರ್ಥಿಕ(economic) ಸಂಕಷ್ಟದ ಕಾಲದಲ್ಲಿ ಬಡವನಿಗೆ ಮೇಲ್ ಕರ್ಚಿನ ಆದಾಯದ ಮೂಲವೂ ಆಗಿತ್ತು. ಯಾವಾಗ ಸಾಬೂನುಗಳ ಪ್ರಚಾರದ ಭರಾಟೆ ಮೇಲುಗೈ ಸಾಧಿಸಿತೋ, ಸಾಬೂನು ಬಳಕೆ ಎಂಬುದು ಆಧುನಿಕತೆಯ ಲಕ್ಷಣ ಎಂಬ ಭಾವ ಮನದಲ್ಲಿ ಸ್ಪುರಿಸಿತೋ ಆವಾಗ ನಮ್ಮ ಗ್ರಾಮೀಣ ಸೊಗಡಾದ ಸ್ವಾವಲಂಬನೆ ಸಂಕೇತವಾದ ಅಂಟ್ವಾಳದ ಕಾಯಿ ಜನ ಮಾನಸದಿಂದ ಮರೆಯಾಗಹತ್ತಿತು. ಅದರ ಮರಗಳು ಉಪೇಕ್ಷೆಗೊಳಗಾದವು. ಅಕಸ್ಮಾತ್ ಇದ್ದರೂ ಸಂಗ್ರಹಣಾ ಮತ್ತು ಸಂಸ್ಕರಣಾ ವೆಚ್ಚ ಅಧಿಕ ಎಂಬ ಕಾರಣದಿಂದ ಅವಗಹಣೆಗೆ ಒಳಗಾದದ್ದಂತು ಸತ್ಯ.

ಪಾತ್ರೆ ತೊಳೆಯುವಾಗ ಸಾಬೂನಿನಲ್ಲಿ ತೊಳೆಯುವುದಕ್ಕಿಂತ ನೀರಿನ ಖರ್ಚು ಕಡಿಮೆ. ಅಕಸ್ಮಾತ್ ಅದರ ಸತ್ವವೇನಾದರೂ ಪಾತ್ರೆಯಲ್ಲಿ ಉಳಿದಿದ್ದರೆ ಆರೋಗ್ಯದ ದೃಷ್ಟಿಯಿಂದ ಹಿತಕಾರಿ. ಸಾಬೂನಿನಿಂದ ಚರ್ಮದ ಅಲರ್ಜಿ ಆಗುವವರಿಗೆ ಇದು ಬಹಳ ಹಿತ. ಹೊಟ್ಟೆಯ ಹುಳ ತುಂಬಿದವನಿಗೆ ಹಿಂದಿನ ಕಾಲದಲ್ಲಿ ಅಂಟ್ವಾಳದ ರಸವನ್ನು ಕುಡಿಸುತ್ತಿದ್ದರಂತೆ. ಆದರೆ ಸಾಬೂನು ಇದಕ್ಕೆ ವಿರುದ್ಧ ಎಂಬುದು ಗಮನಾರ್ಹ. ಜೇನು ಕೃಷಿಕರಂತೂ ಅಂಟ್ವಾಳದ ಹೂ ಬಿಡುವುದನ್ನೇ ಕಾಯುತ್ತಲೇ ಇರುತ್ತಾರೆ. ಧಾರಾಳವಾಗಿ ಹೂ ಬಿಟ್ಟಾಗ ಒಂದು ಜೇನಿನ ಕೊಯ್ಲು ಗ್ಯಾರಂಟಿ.

ಸ್ವಾವಲಂಬನೆ ಮತ್ತು ಸಾವಯವ ದೃಷ್ಟಿಯಿಂದ ಅಂಟ್ವಾಳ ಕಾಯಿಯ ಸಂಗ್ರಹಣೆ, ಸಂಸ್ಕರಣೆ ಮತ್ತು ಬಳಕೆಯನ್ನು ನಮ್ಮ ಮನೆಯಲ್ಲಿ ನಿಲ್ಲಿಸಿಯೇ ಇರಲಿಲ್ಲ. ನನ್ನ ನೆನಪಿರುವಂತೆ ಅಂಟ್ವಾಳದ ಕಾಯಿ ಮನೆ ಬಳಕೆಯ ಉಪಯೋಗಕ್ಕೆ ಸಿಗದ ವರುಷಗಳೇ ಇರಲಿಲ್ಲ. ಬೆಳೆ ಸ್ವಲ್ಪ ಹೆಚ್ಚು ಕಮ್ಮಿ ಇರಬಹುದಷ್ಟೇ. ಆದರೆ ಇತ್ತೀಚಿನ ಮೂರು ವರ್ಷಗಳಿಂದ ಋತುಮಾನಗಳ ಬದಲಾವಣೆಯ ಪರಿಣಾಮವಾಗಿ ನನ್ನ ಗಮನಕ್ಕೆ ಬಂದಂತೆ ಅಂಟ್ವಾಳ ಮತ್ತು ಪುನರ್ಪುಳಿ ಬೆಳೆಗೆ ನೇರ ಹೊಡೆತ. ಸರಿಯಾಗಿ ಹೂವು ಬಿಟ್ಟಿರಲಿಲ್ಲ ಮತ್ತು ಬಿಟ್ಟಿದ್ದರೂ ಬೆಳೆಯು ನಿಂತಿರಲಿಲ್ಲ. ಆದರೆ ಈ ವರ್ಷ ಗಮನಿಸಿದಂತೆ ಮಳೆ ವಿಚಿತ್ರವಾದರೂ, ಅಂಟ್ವಾಳಕ್ಕೆ ಅದೇನೋ ಪೂರಕ ವಾತಾವರಣ ಕಂಡುಬಂದಿದೆ. ಕಾಯಿ ಚೆನ್ನಾಗಿ ಬಿಟ್ಟಿದೆ. ತೋಡುಬದಿಯಲ್ಲಿ ಮರವಿರುವುದರಿಂದ, ಅಕಾಲದ ಮಳೆಯ ಪರಿಣಾಮವಾಗಿ ತೋಡಿನಲ್ಲಿರುವ ನೀರು ಬೆಳೆ ಸಂಗ್ರಹಣೆಗೆ ಸಮಸ್ಯೆ ಕೊಡಬಹುದು.

ಒನಕೆಯಲ್ಲಿ ಕುಟ್ಟಿ ಪುಡಿ ಮಾಡಿ ಬೀಜ ತೆಗೆಯುವಾಗ ಪಂಚ ರಂದ್ರಗಳಿಂದಲೂ, ರೋಮ ಕೂಪದಿಂದಲೂ ಬರುವ ಬಿಸಿಯೊರತೆಗೆ ಬೀಜ ಸಹಿತ ಹುಡಿ ಮಾಡುವ ಮಿಕ್ಸಿ ಎಂಬ ತಂತ್ರಜ್ಞಾನ ಬಲು ಬಲು ಬಲು ಉಪಕಾರಿ. ಸಾಧ್ಯವಾದಷ್ಟು ಎಲ್ಲರೂ ಅಂಟ್ವಾಳದ ಮರವನ್ನು ನೆಟ್ಟು ಪರಿಸರಕ್ಕೆ ಪ್ರಕೃತಿಗೆ ಪೂರಕವಾಗಿ, ಜೇನುನೊಣಗಳಿಗೂ ಒಂದಷ್ಟು ಕೊಡುಗೆಯನ್ನು ಸಲ್ಲಿಸೋಣ.

Advertisement
ಬರಹ :
ಎ.ಪಿ.ಸದಾಶಿವ ಮರಿಕೆ.

soap nut… Until the invention of artificial soaps, it was versatile for everything from washing clothes to washing dishes for those who live independently and self-respectingly, as a complement to the environment.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಅಮರನಾಥ ಯಾತ್ರೆಗೆ ಚಾಲನೆ | ಮೊದಲ ಗುಂಪಿನ 5,880 ಯಾತ್ರಿಗಳು ಪ್ರಯಾಣ
July 3, 2025
11:46 PM
by: ದ ರೂರಲ್ ಮಿರರ್.ಕಾಂ
ರಾಜ್ಯದ ವಿವಿಧೆಡೆ ಧಾರಾಕಾರ ಮಳೆ | ಉತ್ತರಕನ್ನಡ, ಕೊಡಗಿನಲ್ಲಿ ಸಮಸ್ಯೆ
July 3, 2025
11:38 PM
by: The Rural Mirror ಸುದ್ದಿಜಾಲ
ಕೇರಳದಲ್ಲಿ 1 ಲಕ್ಷ ಹೆಕ್ಟೇರ್‌ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಇಲ್ಲ..!
July 3, 2025
2:58 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 03-07-2025 | ಇಂದು ಸಾಮಾನ್ಯ ಮಳೆ | ಜು.6 ರ ನಂತರ ಮಲೆನಾಡು-ಕರಾವಳಿ ಹವಾಮಾನ ಹೇಗೆ ? | ಜು.4 ರಿಂದ ಒಳನಾಡು ವಾತಾವರಣ ಹೇಗೆ ?
July 3, 2025
12:35 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group