ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಪದಾರ್ಥಗಳು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಒಳಪಡದಿದ್ದಾಗ ಅಂದರೆ ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗಿ, ತ್ಯಾಜ್ಯವೆಲ್ಲಾ ಮಲದ ರೂಪದಲ್ಲಿ ಹೊರ ಹೋಗದಿದ್ದಾಗ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಕಾಣಿಸಿಕೊಂಡಾಗ ಮೊದಲಿಗೆ ಸಣ್ಣ ಪ್ರಮಾಣ ಹೊಟ್ಟೆ ನೋವು ಅಥವಾ ಕಿಬ್ಬೊಟ್ಟೆಯ ನೋವು ಕಾಣಿಸಿಕೊಳ್ಳಲು ಶುರುಆಗುತ್ತದೆ. ಅಲ್ಲದೇ ಸರಿಯಾಗಿ ಹಸಿವಾಗದೆ ಇರುವುದು, ಅಥವಾ ಆಹಾರ ಸರಿಯಾಗಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು, ಕೊನೆಗೆ ಇದರಿಂದಾಗಿ ಆಗಾಗ ಹೊಟ್ಟೆಉಬ್ಬರ ಕಾಣಿಸಿಕೊಳ್ಳುವುದು.
ಕರುಳಿನ ಸೋಂಕಿಗೆ ಕಾರಣಗಳೇನು? : ಸರಿಯಾಗಿ ನೀರು ಕುಡಿಯದೇ ಇರುವುದು, ಕಲುಷಿತ ಆಹಾರ ಸೇವನೆ, ಕೈಗಳನ್ನು ಸ್ವಚ್ಛಗೊಳಿಸದೆ ಆಹಾರ ಸೇವನೆ, ಹೆಚ್ಚು ಜಂಕ್ ಫುಡ್ ತಿನ್ನುವುದು, ಮತ್ತು ಒತ್ತಡದ ಜೀವನಶೈಲಿಯಿಂದಾಗಿ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಕರುಳಿನ ಆರೋಗ್ಯ ಕಾಪಾಡುವುದು ಹೇಗೆ? :
- ಮಜ್ಜಿಗೆ ಸೇವನೆ: ಮಜ್ಜಿಗೆ ಸೇವನೆಯಿಂದ ಕರುಳಿನ ಸೋಂಕುವನ್ನು ದೂರ ಮಾಡಬಹುದು. ಹೇಗೆಂದರೆ, ಇದರಲ್ಲಿ ಇಂಗು ಮತ್ತು ಜೀರಿಗೆಯನ್ನು ಬೆರೆಸಿರುವುದರಿಂದ ಕರುಳಿನ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ.
- ದಾಳಿಂಬೆ: ರಸವನ್ನು ಕುಡಿಯುವುದರಿಂದ ಕರುಳುಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಕರುಳಿನ ಸೋಂಕುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇನ್ನೂ ಕರುಳು ಸ್ನೇಹಿ ಆಹಾರಗಳಾದ ಪ್ರೋಬಯಾಟಿಕ್ ಆಹಾರ ಅಂದರೆ ಮೊಸರು ಮಜ್ಜಿಗೆ, ಹಣ್ಣು ತರಕಾರಿಗಳು, ನಾರಿನಾಂಶ ಇರುವು ಆಹಾರಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.


