ಆಮವಾತವನ್ನು ನಿರ್ಲಕ್ಷಿಸದಿರಿ | ಸಾಕಷ್ಟು ವಿಶ್ರಾಂತಿ ಹಾಗೂ ನಿಯಮಿತ ವ್ಯಾಯಾಮ ಅಗತ್ಯ

August 19, 2023
5:24 PM
ಸಾಮಾನ್ಯವಾಗಿ ಆಮವಾತ ಮಣಿಗಂಟು, ಕೈಕಾಲುಗಳ ಮೇಲೆ ಮೊದಲು ಪರಿಣಾಮ ಬೀರಬಹುದು ಅನಂತರ ನಿಧಾನವಾಗಿ ಕತ್ತು, ಭುಜ ಸೊಂಟ ಮೊಣಕಾಲು ಹಿಮ್ಮಡಿ ಮತ್ತು ದೇಹದ ಇತರ ಕೀಲುಗಳ ಮೇಲೆ ಪರಿಣಾಮ ಬೀರಬಹುದು. ಈ ನೋವು ಬೆಳಿಗ್ಗೆ ಗಂಭೀರವಾಗಿರಬಹುದು ಹಾಗೂ ಗಂಟುಗಳಲ್ಲಿ ಗಡಸುತನ ಇರುತ್ತದೆ.ಇದಕ್ಕೆ ಆಯುರ್ವೇದದಲ್ಲಿ ಪರಿಹಾರ ಇದೆ.

ಆಮವಾತ.. ಇದು ಸ್ವಯಂ ನಿರೋಧಕ ಕಾಯಿಲೆ #AutoimmuneDisorder. ರಕ್ತದಲ್ಲಿ ಸೋಂಕು ಉಂಟಾಗಿ ದೇಹದ ಗಂಟುಗಳ ಮೇಲೆ ದಾಳಿ ಮಾಡುವುದರಿಂದ ತೀವ್ರತರವಾದ ಕೀಲು ನೋವು ಉಂಟಾಗುತ್ತದೆ. ಇದಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಇದು ಅನುವಂಶಿಕವಾಗಿಯೂ ಸಹ ಬರುತ್ತದೆ. ಕೀಲುಗಳಲ್ಲಿ ಊತ ನೋವು,ಹಾಗೂ ಗಡಸುತನ ಉಂಟು ಮಾಡುವುದಲ್ಲದೆ ಸ್ನಾಯುಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಕೀಲುಗಳು ವಿರೂಪಗೊಂಡು #JointsDeformity ಸರಿಯಾಗಿ ಕೆಲಸ ಮಾಡಲು ಸಾಧ್ಯ ಆಗುವುದಿಲ್ಲ ಈ ಕಾಯಿಲೆಗೆ ಸರಿಯಾದ ಚಿಕಿತ್ಸೆ ನೀಡದೇ ಹೋದಲ್ಲಿ ಹೃದಯ, ಶ್ವಾಸಕೋಶ, ಕಣ್ಣು ಮತ್ತು ಮೆದುಳು ಹಾಗೂ ಇತರ ದೇಹದ ಅಂಗಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಸಾಮಾನ್ಯವಾಗಿ ಆಮವಾತ ಮಣಿಗಂಟು, ಕೈಕಾಲುಗಳ ಮೇಲೆ ಮೊದಲು ಪರಿಣಾಮ ಬೀರಬಹುದು ಅನಂತರ ನಿಧಾನವಾಗಿ ಕತ್ತು, ಭುಜ ಸೊಂಟ ಮೊಣಕಾಲು ಹಿಮ್ಮಡಿ ಮತ್ತು ದೇಹದ ಇತರ ಕೀಲುಗಳ ಮೇಲೆ ಪರಿಣಾಮ ಬೀರಬಹುದು. ಈ ನೋವು ಬೆಳಿಗ್ಗೆ ಗಂಭೀರವಾಗಿರಬಹುದು ಹಾಗೂ ಗಂಟುಗಳಲ್ಲಿ ಗಡಸುತನ ಇರುತ್ತದೆ. ಗಂಟುಗಳಲ್ಲಿ ನೋವಿನ ಜೊತೆಗೆ ಜ್ವರದ ಲಕ್ಷಣವೂ ಕೂಡ ಕಾಣಿಸಿಕೊಳ್ಳಬಹುದು. ಇಂತ ಲಕ್ಷಣಗಳು ಕಾಣಿಸಿಕೊಂಡಾಗ ನಿರ್ಲಕ್ಷ ಮಾಡದೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ. ಆಮವಾತ ಸಂಪೂರ್ಣ ಗುಣಮುಖ ಪಡಿಸಲು ಸಾಧ್ಯವಿಲ್ಲದಿದ್ದರೂ ಸಹ ಸಾಕಷ್ಟು ವಿಶ್ರಾಂತಿ ಹಾಗೂ ನಿಯಮಿತ ವ್ಯಾಯಾಮಗಳನ್ನು ಮಾಡುವುದರಿಂದ ತಡೆಗಟ್ಟಬಹುದು.

ಆಯುರ್ವೇದ ಪರಿಹಾರ:

ಆರೋಗ್ಯಕರ ಆಹಾರದ ಜೊತೆಗೆ ಸಾಕಷ್ಟು ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡುವುದರಿಂದ ದೇಹಕ್ಕೆ ವಿಟಮಿನ್ ಡಿ ಪೋಷಕಾಂಶ ದೊರೆತು ಕೀಲುಗಳನ್ನು ಸದೃಢವನ್ನಾಗಿರುಸುತ್ತದೆ. ದಿನವಿಡೀ ಬೆಚ್ಚಗಿನ ನೀರಿನ ಸೇವನೆ ಮಾಡುವುದರಿಂದ ಕೀಲುಗಳಿನ ಊತ ಕಡಿಮೆಯಾಗುವುದು ಶುಂಠಿ ಮತ್ತು ಜೀರಿಗೆಯನ್ನು ಹಾಕಿ ಬಿಸಿ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಜೀರ್ಣಶಕ್ತಿ ಹೆಚ್ಚಿಸಿ ಆಮವನ್ನು ಹೊರಹಾಕಲಾಗುವುದು.

ಟೊಮೆಟೊ, ಮೊಸರು, ಬೇಕರಿ ಪದಾರ್ಥ ಕರಿದ ಹಾಗೂ ಶೀತ ಪದಾರ್ಥ ಇವುಗಳನ್ನು ತ್ಯಜಿಸುವುದು ಒಳ್ಳೆಯದು.
ಆಮವಾತದ ಪ್ರಾರಂಭದ ಸಮಯದಲ್ಲಿ ವಾತ ದೋಷವನ್ನು ಸಮತೋಲನದಲ್ಲಿಗೊಳಿಸುವುದರ ಮೇಲೆ ಕೇಂದ್ರೀಕರಿಸಿಬೇಕು ಊತ ಕಡಿಮೆ ಮಾಡಲು ಹಾಗೂ ಆಮ ಹೊರಗೆ ಹಾಕಲು ಆಯುರ್ವೇದ ಗಿಡಮೂಲಿಕೆ ಔಷಧಿಗಳನ್ನು ಬಳಸುವುದರಿಂದ ಅಸ್ಥಿ ಹಾಗೂ ಮಚ್ಚಾ ಧಾತುಗಳನ್ನು ಪುನರ್ಜೀವನಗೊಳಿಸಬಹುದು.

Advertisement

ಉತ್ತಮ ಫಲಿತಾಂಶಕ್ಕಾಗಿ ಪಂಚಕರ್ಮ ಚಿಕಿತ್ಸೆಯನ್ನು ಮಾಡಬಹುದು ( ಬಸ್ತಿ ತೆರಪಿ, ವಿರೇಚನ ರೂಕ್ಷಸ್ವೇಧನ –ಮರಳಿನಿಂದ ಶಾಖ ( valuka sweda ) ಮೊದಲಾದ ಪಂಚಕರ್ಮ ಚಿಕಿತ್ಸೆ ಆಯುರ್ವೇದ ಔಷಧಿಗಳು, ಆರೋಗ್ಯಕರ ಆಹಾರ ಹಾಗೂ ಉತ್ತಮ ಜೀವನ ಶೈಲಿ, ಸೂಕ್ತವಾದ ಪಂಚ ಕರ್ಮ ಚಿಕಿತ್ಸೆ ಇವುಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದರಿಂದ ಆಮವಾತ ತಡೆಗಟ್ಟಬಹುದು.

ಬರಹ :
ಡಾ. ಜ್ಯೋತಿ, ಆಯುರ್ವೇದ ವೈದ್ಯರು, ಮಂಗಳೂರು, 94481 68053
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಎಳ್ಳು ಸೇವನೆ ಉತ್ತಮ
January 9, 2026
9:23 PM
by: ರೂರಲ್‌ ಮಿರರ್ ಸುದ್ದಿಜಾಲ
ಬಿಳಿ ಅಕ್ಕಿ ತಿನ್ನುವುದರಿಂದ ದಪ್ಪ ಆಗುತ್ತದೆಯೇ..? ಆಹಾರ ವಿಜ್ಞಾನ ಏನು ಹೇಳುತ್ತದೆ..?
January 9, 2026
9:09 PM
by: ರೂರಲ್‌ ಮಿರರ್ ಸುದ್ದಿಜಾಲ
ಹೊಟ್ಟೆಯ ಕೊಬ್ಬು ಕರಗಿಸಲು ಸೋರೆಕಾಯಿ ಜ್ಯೂಸ್
January 8, 2026
9:20 PM
by: ರೂರಲ್‌ ಮಿರರ್ ಸುದ್ದಿಜಾಲ
ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?
January 7, 2026
11:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror