ಆಮವಾತ.. ಇದು ಸ್ವಯಂ ನಿರೋಧಕ ಕಾಯಿಲೆ #AutoimmuneDisorder. ರಕ್ತದಲ್ಲಿ ಸೋಂಕು ಉಂಟಾಗಿ ದೇಹದ ಗಂಟುಗಳ ಮೇಲೆ ದಾಳಿ ಮಾಡುವುದರಿಂದ ತೀವ್ರತರವಾದ ಕೀಲು ನೋವು ಉಂಟಾಗುತ್ತದೆ. ಇದಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಇದು ಅನುವಂಶಿಕವಾಗಿಯೂ ಸಹ ಬರುತ್ತದೆ. ಕೀಲುಗಳಲ್ಲಿ ಊತ ನೋವು,ಹಾಗೂ ಗಡಸುತನ ಉಂಟು ಮಾಡುವುದಲ್ಲದೆ ಸ್ನಾಯುಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಕೀಲುಗಳು ವಿರೂಪಗೊಂಡು #JointsDeformity ಸರಿಯಾಗಿ ಕೆಲಸ ಮಾಡಲು ಸಾಧ್ಯ ಆಗುವುದಿಲ್ಲ ಈ ಕಾಯಿಲೆಗೆ ಸರಿಯಾದ ಚಿಕಿತ್ಸೆ ನೀಡದೇ ಹೋದಲ್ಲಿ ಹೃದಯ, ಶ್ವಾಸಕೋಶ, ಕಣ್ಣು ಮತ್ತು ಮೆದುಳು ಹಾಗೂ ಇತರ ದೇಹದ ಅಂಗಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಸಾಮಾನ್ಯವಾಗಿ ಆಮವಾತ ಮಣಿಗಂಟು, ಕೈಕಾಲುಗಳ ಮೇಲೆ ಮೊದಲು ಪರಿಣಾಮ ಬೀರಬಹುದು ಅನಂತರ ನಿಧಾನವಾಗಿ ಕತ್ತು, ಭುಜ ಸೊಂಟ ಮೊಣಕಾಲು ಹಿಮ್ಮಡಿ ಮತ್ತು ದೇಹದ ಇತರ ಕೀಲುಗಳ ಮೇಲೆ ಪರಿಣಾಮ ಬೀರಬಹುದು. ಈ ನೋವು ಬೆಳಿಗ್ಗೆ ಗಂಭೀರವಾಗಿರಬಹುದು ಹಾಗೂ ಗಂಟುಗಳಲ್ಲಿ ಗಡಸುತನ ಇರುತ್ತದೆ. ಗಂಟುಗಳಲ್ಲಿ ನೋವಿನ ಜೊತೆಗೆ ಜ್ವರದ ಲಕ್ಷಣವೂ ಕೂಡ ಕಾಣಿಸಿಕೊಳ್ಳಬಹುದು. ಇಂತ ಲಕ್ಷಣಗಳು ಕಾಣಿಸಿಕೊಂಡಾಗ ನಿರ್ಲಕ್ಷ ಮಾಡದೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ. ಆಮವಾತ ಸಂಪೂರ್ಣ ಗುಣಮುಖ ಪಡಿಸಲು ಸಾಧ್ಯವಿಲ್ಲದಿದ್ದರೂ ಸಹ ಸಾಕಷ್ಟು ವಿಶ್ರಾಂತಿ ಹಾಗೂ ನಿಯಮಿತ ವ್ಯಾಯಾಮಗಳನ್ನು ಮಾಡುವುದರಿಂದ ತಡೆಗಟ್ಟಬಹುದು.
ಆಯುರ್ವೇದ ಪರಿಹಾರ:
ಆರೋಗ್ಯಕರ ಆಹಾರದ ಜೊತೆಗೆ ಸಾಕಷ್ಟು ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡುವುದರಿಂದ ದೇಹಕ್ಕೆ ವಿಟಮಿನ್ ಡಿ ಪೋಷಕಾಂಶ ದೊರೆತು ಕೀಲುಗಳನ್ನು ಸದೃಢವನ್ನಾಗಿರುಸುತ್ತದೆ. ದಿನವಿಡೀ ಬೆಚ್ಚಗಿನ ನೀರಿನ ಸೇವನೆ ಮಾಡುವುದರಿಂದ ಕೀಲುಗಳಿನ ಊತ ಕಡಿಮೆಯಾಗುವುದು ಶುಂಠಿ ಮತ್ತು ಜೀರಿಗೆಯನ್ನು ಹಾಕಿ ಬಿಸಿ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಜೀರ್ಣಶಕ್ತಿ ಹೆಚ್ಚಿಸಿ ಆಮವನ್ನು ಹೊರಹಾಕಲಾಗುವುದು.
ಟೊಮೆಟೊ, ಮೊಸರು, ಬೇಕರಿ ಪದಾರ್ಥ ಕರಿದ ಹಾಗೂ ಶೀತ ಪದಾರ್ಥ ಇವುಗಳನ್ನು ತ್ಯಜಿಸುವುದು ಒಳ್ಳೆಯದು.
ಆಮವಾತದ ಪ್ರಾರಂಭದ ಸಮಯದಲ್ಲಿ ವಾತ ದೋಷವನ್ನು ಸಮತೋಲನದಲ್ಲಿಗೊಳಿಸುವುದರ ಮೇಲೆ ಕೇಂದ್ರೀಕರಿಸಿಬೇಕು ಊತ ಕಡಿಮೆ ಮಾಡಲು ಹಾಗೂ ಆಮ ಹೊರಗೆ ಹಾಕಲು ಆಯುರ್ವೇದ ಗಿಡಮೂಲಿಕೆ ಔಷಧಿಗಳನ್ನು ಬಳಸುವುದರಿಂದ ಅಸ್ಥಿ ಹಾಗೂ ಮಚ್ಚಾ ಧಾತುಗಳನ್ನು ಪುನರ್ಜೀವನಗೊಳಿಸಬಹುದು.
ಉತ್ತಮ ಫಲಿತಾಂಶಕ್ಕಾಗಿ ಪಂಚಕರ್ಮ ಚಿಕಿತ್ಸೆಯನ್ನು ಮಾಡಬಹುದು ( ಬಸ್ತಿ ತೆರಪಿ, ವಿರೇಚನ ರೂಕ್ಷಸ್ವೇಧನ –ಮರಳಿನಿಂದ ಶಾಖ ( valuka sweda ) ಮೊದಲಾದ ಪಂಚಕರ್ಮ ಚಿಕಿತ್ಸೆ ಆಯುರ್ವೇದ ಔಷಧಿಗಳು, ಆರೋಗ್ಯಕರ ಆಹಾರ ಹಾಗೂ ಉತ್ತಮ ಜೀವನ ಶೈಲಿ, ಸೂಕ್ತವಾದ ಪಂಚ ಕರ್ಮ ಚಿಕಿತ್ಸೆ ಇವುಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದರಿಂದ ಆಮವಾತ ತಡೆಗಟ್ಟಬಹುದು.
ವಾರಣಾಸಿಯ ಸೆಳೆತ ಅಸಾಧ್ಯವಾದದ್ದು ಅಂತ ಅಲ್ಲೇ ನೆಲೆನಿಂತ ವಿದೇಶಿಗರೂ ಇದ್ದಾರಂತೆ.ತಮ್ಮ ಉಳಿದ ಜೀವಿತಾವಧಿ…
ನಮ್ಮ ಯೋಚನೆಗಳು, ಯೋಜನೆಗಳು , ನಿರ್ಧಾರಗಳೆಲ್ಲವೂ ಆಹಾರ, ನಮ್ಮ ಪರಿಸರದ ಪ್ರಭಾವದಿಂದ ತಪ್ಪಿಸಿ…
ಬಣ್ಣದ ಜೀವಿಗಳನ್ನು ಸೃಷ್ಟಿಸಿರುವ ಜಡವನ್ನೂ ಜೀವವನ್ನಾಗಿ ಪರಿವರ್ತಿಸಬಲ್ಲ ತಾಕತ್ತುಳ್ಳ ಪರಮಾತ್ಮನೇ ಅಲ್ವೇ ಪರಮಕಲಾವಿದ?
ಇಂದಿನ ಜಗತ್ತಿನಲ್ಲಿ ನಿರ್ದಿಷ್ಟ ಜೀವನ ದೃಷ್ಠಿಯನ್ನು ಹೊಂದಿರಲು ಸಾಧ್ಯವಿಲ್ಲ. ಅದು ಆಗಾಗ ಬದಲಾಗುವ…
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮೀನುಗಾರಿಕೆ ವಲಯದ ಪ್ರಗತಿ ಹಾಗೂ ಭವಿಷ್ಯದ…
ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಪ್ರಸ್ತುತ ಕೃಷಿ ಉತ್ಪಾದನೆಯ…