ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ಪ್ರಸ್ತಾಪ | ಗ್ಯಾರಂಟಿಗಳಿಂದ ಬಂದ ಮರ್ಯಾದಿ ಮದ್ಯದಂಗಡಿ ಪರವಾನಿಗೆ ಮೂಲಕ ಕಳೆದುಕೊಳ್ಳದಿರಿ | ಸರ್ಕಾರಕ್ಕೆ ಮಹಿಳಾ ಸಂಘಟನೆಗಳ ಮನವಿ

October 2, 2023
6:37 PM
ನೂತನ ರಾಜ್ಯ ಸರಕಾರ ಮಹಿಳೆಯರಿಗೆ ಕೆಲವು ಗ್ಯಾರಂಟಿ ಯೋಜನೆಗಳ ಮೂಲಕ ಖುಷಿ ನೀಡಿತ್ತು. ಆದರೆ ಇದೀಗ ಆ ಖುಷಿಯನ್ನು ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಮೂಲಕ ಕಸಿಯಲು ಹೊರಟಿರುವುದು ಆಘಾತಕಾರಿ” ಎಂದು ದ.ಕ. ಜಿಲ್ಲೆಯ ಮದ್ಯನಿಷೇಧ ಆಂದೋಲನದಡಿ ಜಿಲ್ಲೆಯ ವಿವಿಧ ಸಂಘಟನೆಗಳ ಮಹಿಳಾ ಪ್ರತಿನಿಧಿಗಳು ರಾಜ್ಯ ಸರಕಾರಕ್ಕೆ ಭಾವನಾತ್ಮಕ ಮನವಿ ಮಾಡಿದ್ದಾರೆ.

ಹಳ್ಳಿ ಹಳ್ಳಿಗಳ ದಿನಸಿ ಅಂಗಡಿ ಸೇರಿದಂತೆ ಎಲ್ಲಿ ಬೇಕಾದರು ಮದ್ಯ ಮಾರಾಟಕ್ಕೆ ಅನುಮತಿ ನೀಡುವ ನೀಚಗೇಡಿತನದ ಕೆಲಸವನ್ನು ಮಾಡಲು ಹೊರಟಿದೆ ಕಾಂಗ್ರೆಸ್‌ ಸರ್ಕಾರ. ಇದನ್ನು ವಿರೋಧಿಸಿ ಇಂದು “ನೂತನ ರಾಜ್ಯ ಸರಕಾರ ಮಹಿಳೆಯರಿಗೆ ಕೆಲವು ಗ್ಯಾರಂಟಿ ಯೋಜನೆಗಳ ಮೂಲಕ ಖುಷಿ ನೀಡಿತ್ತು. ಆದರೆ ಇದೀಗ ಆ ಖುಷಿಯನ್ನು ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಮೂಲಕ ಕಸಿಯಲು ಹೊರಟಿರುವುದು ಆಘಾತಕಾರಿ” ಎಂದು ದ.ಕ. ಜಿಲ್ಲೆಯ ಮದ್ಯನಿಷೇಧ ಆಂದೋಲನದಡಿ ಜಿಲ್ಲೆಯ ವಿವಿಧ ಸಂಘಟನೆಗಳ ಮಹಿಳಾ ಪ್ರತಿನಿಧಿಗಳು ರಾಜ್ಯ ಸರಕಾರಕ್ಕೆ ಭಾವನಾತ್ಮಕ ಮನವಿ ಮಾಡಿದ್ದಾರೆ.

Advertisement
Advertisement

ಮಂಗಳೂರಿನ ಪುರಭವನದ ಸಮೀಪದ ರಾಜಾಜೀ ಪಾರ್ಕ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಗಾಂಧಿ ಜಯಂತಿ ಕಾರ್ಯಕ್ರಮದ ಸಂದರ್ಭ ಮಹಿಳಾ ಹೋರಾಟಗಾರರ ಗುಂಪೊಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಿತು. ”ಯಾವುದೇ ಸರಕಾರ ಮದ್ಯ ಮಾರಾಟದಿಂದ ಬರುವ ಆದಾಯವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವುದು ಅಪರಾಧ ಎಂದು ಗಾಂಧೀಜಿ ಹೇಳಿದ್ದರು. ಆದರೆ ಸರಕಾರ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು 600 ಗ್ರಾಮ ಪಂಚಾಯತ್ ಸೇರಿದಂತೆ 1000 ಹೊಸ ಮದ್ಯದಂಗಡಿಗೆ ಪರವಾನಿಗೆ ನೀಡುವ ಪ್ರಸ್ತಾವನೆ ಮುಂದಿಟ್ಟಿರುವುದು ತಿಳಿದು ಆಘಾತಗೊಂಡಿದ್ದೇವೆ” ಎಂದು ಮದ್ಯ ನಿಷೇಧ ಆಂದೋಲನ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಯುವ ಮುನ್ನಡೆ ಮಂಗಳೂರು, ಪ್ರಜ್ಞಾ ಸಲಹಾ ಕೇಂದ್ರ, ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘಗಳನ್ನು ಒಳಗೊಂಡ ಪ್ರತಿನಿಧಿಗಳು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಮದ್ಯ ನಿಷೇಧ ಆಂದೋಲನದ ಮಹಿಳೆಯರು 2015ರಿಂದಲೂ ಹೈಕೋರ್ಟ್‌ನ ಆದೇಶದಂತೆ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಅಕ್ರಮ ಮಾರಾಟಗಾರರ ಮೇಲೆ ಕಠಿಣ ಕ್ರಮ ವಹಿಸಬೇಕು. ಕರ್ನಾಟಕ ಪಂಚಾಯತ್‌ರಾಜ್ ಕಾನೂನಿನ ಅನ್ವಯ (73ನೆ ತಿದ್ದುಪಡಿ) ಗ್ರಾಮಸಭೆಗೆ ಪರಮಾಧಿಕಾರ ನೀಡುವ ಆದೇಶ ಹೊರಡಿಸಬೇಕು. ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಂತೆ ಶೇ. 10ರಷ್ಟು ಮಹಿಳೆಯರು ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಪರವಾನಿಗೆ ನೀಡಬಾರದು ಎಂಬುದಾಗಿ ಗ್ರಾಮ ಸಭೆಯಲ್ಲಿ ನಿರ್ಧರಿಸಿದ್ದಲ್ಲಿ ಆ ಠರಾವನ್ನು ಸರಕಾರ ಎತ್ತಿ ಹಿಡಿಯಬೇಕು ಎಂಬ ತಮ್ಮ ಹಕ್ಕೊತ್ತಾಯವನ್ನು ಪುನರುಚ್ಚರಿಸುತ್ತಿದ್ದೇವೆ. ಮಾತ್ರವಲ್ಲದೆ ಸರಕಾರ ಹೊರತಾಗಿ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ, ಮಾಲ್ ಸೂಪರ್ ಮಾರುಕಟ್ಟೆಗಳಲ್ಲಿ ಹಾಗೂ ಆನ್‌ಲೈನ್ ಮಾರಾಟ ಮಾಡುವ ಪ್ರಸ್ತಾವನೆ ಕೈಬಿಡಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದಿಡೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತ ಕ್ಕೆ ಕಾರಣ : ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ
April 28, 2024
9:26 PM
by: The Rural Mirror ಸುದ್ದಿಜಾಲ
ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ
April 28, 2024
9:24 PM
by: The Rural Mirror ಸುದ್ದಿಜಾಲ
ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |
April 28, 2024
4:55 PM
by: The Rural Mirror ಸುದ್ದಿಜಾಲ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |
April 28, 2024
4:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror