ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತದೆ. ಆದರಲ್ಲೂ ಹೃದಯದ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಎಂದು ಆರೋಗ್ಯ ತಜ್ಞರ ಆಭಿಪ್ರಾಯ. ಯಾಕೆಂದರೆ ಹೃದಯ ನೋವು ಬಂದರೆ ಆದು ಚಳಿಗಾಲದಲ್ಲಿ ಸರ್ವೇ ಸಾಮಾನ್ಯ ಎಂದು ಸುಮ್ಮನಾಗಬೇಡಿ. ಏಕೆಂದರೆ ಇದು ಹೃದಯಾಘಾತದ ಸಂದೇಶವೂ ಆಗಿರಬಹುದು. ಹಾಗೆಂದು ಎಲ್ಲದಕ್ಕೂ ಇದು ಹೃದಯದ ಸಮಸ್ಯೆ ಎಂದು ಗಡಿಬಿಡಿಯೂ ಆಗಬೇಡಿ. ಎಚ್ಚರಿಕೆ ಇರುವುದು ಉತ್ತಮ ಅಷ್ಟೇ.
ಬೇರೆ ಸಮಯಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ದೇಹವು ತನ್ನ ತಾಪಮಾನವನ್ನು ಕಾಪಾಡಿಕೊಳ್ಳಲು ರಕ್ತನಾಳಗಳನ್ನು ಸಂಕೋಚನಗೊಳಿಸುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸಿ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಈ ಹೃದಯ ಸಂಬಂಧಿ ಕಾಯಿಲೆಗಳು ಬರಲು ಮುಖ್ಯ ಕಾರಣವೆಂದರೆ ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆ ಇರುವುದರ ಜೊತೆಗೆ, ಜಡಜೀವನಶೈಲಿ ವ್ಯಾಯಾಮದ ಕೊರತೆ ಮತ್ತು ಅನಾರೋಗ್ಯ ಆಹಾರ ಪದ್ಧತಿಯನ್ನು ಹೆಚ್ಚಾಗಿ ಅನುಸರಿಸುವುದರಿಂದ ಹೃದಯಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಕಾಣುತ್ತದೆ. ಕೆಲವರ ಪ್ರಕಾರ ಹೃದಯಘಾತಗಳು ಆಗುವ ಮುನ್ನ ಎದೆಯಲ್ಲಿ ಅಹಿತಕರ ಅನಿಸುವುದು ಅಥವಾ ಎದೆಯಲ್ಲಿ ಆಗಾಗ ನೋವು ಬಂದು ಹೋಗುವುದು, ಉಸಿರಾಟದಲ್ಲಿ ತೊಂದರೆ, ಚಳಿಗಾಲದಲ್ಲಿಯೂ ಕೂಡ ತುಂಬಾನೇ ಬೆವರರುವುದು, ಆಗಾಗ ವಾಕರಿಕೆ ಬರುವುದು, ತಲೆನೋವು, ಕುತ್ತಿಗೆ ನೋವು ಇವೆಲ್ಲ ಲಕ್ಷಣಗಳು ಕಂಡುಬಂದರೆ ಹೃದಯಾಘತ ಎಂದು. ಈ ಮಾತು ಎಲ್ಲ ಸಮಯದಲ್ಲಿ ನಂಬಲು ಸಾಧ್ಯವಿಲ್ಲ. ಏಕೆಂದರೆ ಕೆಲವರಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ, ಕೆಲವರಲ್ಲಿ..
- ಎದೆ ನೋವು ಯಾವಾಗಲೂ ಎದೆ ಭಾರ, ಎದೆ ಉರಿ, ಒತ್ತಡ ಅಥವಾ ಬಿಗಿತದ ಭಾವನೆ ಕಾಣಿಸಿಕೊಳ್ಳುತ್ತದೆ.
- ಮೆಟ್ಟಿಲುಗಳನ್ನು ಹತ್ತುವಾಗ ಅಥವಾ ವೇಗವಾಗಿ ನಡೆಯುವಾಗ ಸ್ವಲ್ಪ ಉಸಿರಾಟದ ತೊಂದರೆ ಸಾಮಾನ್ಯವಾಘಿ ಕಂಡುಬರುತ್ತದೆ. ಆದರೆ ಇದು ದಿನ ದಿನೇ ಹೆಚ್ಚುತಿದ್ದರೆ ಅಪಾಯ.
- ಚಳಿಗಾಲದಲ್ಲಿ ಸ್ವಲ್ಪ ಆಲಸ್ಯ ಅನುಭವಿಸುವುದು ಸಹಜ, ಆದರೆ ಸಣ್ಣ ಚಟುವಟಿಕೆಗಳು ಸಹ ನಿಮ್ಮನ್ನು ಆಯಾಸಗೊಳಿಸಿದರೆ, ಅದು ಅಪಾಯ. ಹೃದಯ ವೈಫಲ್ಯದ ಆರಂಭಿಕ ಲಕ್ಷಣವೂ ಆಗಿರಬಹುದು.
- ಕಾಲುಗಳಲ್ಲಿ ಊತ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದು ಬಹುತೇಕ ಜನರು ಕಡೆಗಣಿಸುತ್ತಾರೆ. ಏಕೆಂದರೆ ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ಕಾಲುಗಳು ಊತವನ್ನು ಕಾಣಿಸುವು ಸಾಮಾನ್ಯ ಎಂದು. ಆದರೆ ಇವೆಲ್ಲವೂ ಹೃದಯ ಸಮಸ್ಯೆಗಳ ಲಕ್ಷಣಗಳಾಗಿವೆ.
- ಚಳಿಗಾಲದಲ್ಲಿ ಹೃದಯದ ಮೇಲಿನ ಒತ್ತಡ ಸ್ವಾಭಾವಿಕವಾಗ ಹೆಚ್ಚಾಗುತ್ತದೆ. ಆದ್ದರಿಂದ ಈ ಮೇಲಿನ ಲಕ್ಷಣಗಳು ಕಂಡುಬಂದರೆ ವೈದ್ಯರ ಬೇಟಿ ಮಾಡುವುದು ಉತ್ತಮ.

