Advertisement
Opinion

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ | ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ |

Share

ಬರಗಾಲ(Drought) ಬಂದಾಗ ಬಾಯಿ ಬಡಿಕೊಳ್ಳುವವರೇ ಹೆಚ್ಚು. ನೀರಿಲ್ಲ, ಸೆಕೆ, ಮಳೆ ಇಲ್ಲ, ಬೆಳೆಗಳಿಗೆ ನೀರಿಲ್ಲ ಎಂದು ತಲೆಮೇಲೆ ಮೇಲ ಕೈ ಹೊತ್ತು ಕುಳಿತುಕೊಳ್ಳುವ ಮಂದಿ ಅದಕ್ಕೆ ಬೇಕಾದ ಮುಂಜಾಗೃತ ಕ್ರಮಗಳನ್ನು(Precaution) ತೆಗೆದುಕೊಳ್ಳುವುದಿಲ್ಲ. ಪ್ರತಿ ವರ್ಷ ಬೀಳುವ ಮಳೆಯ ನೀರನ್ನು(Rain water) ಹಿಡಿದಿಡಿಯುವ ಕ್ರಮಗಳನ್ನು ಕೈಗೊಂಡರೆ ಈ ಯಾವ ಸಮಸ್ಯೆಗಳು ಎದುರಾಗುವುದಿಲ್ಲ.

ನಗರಗಳೆಲ್ಲ ಕಾಂಕ್ರೀಟ್‌ ಮಯವಾಗಿ ಮಳೆ ನೀರು ಅಂತರ್ಜಲ(Underground water) ಸೇರಲು ಯಾವ ಮಾರ್ಗಗಳು ಇಲ್ಲ. ನೆಲಕ್ಕೆ ಬಿದ್ದ ನೀರೆಲ್ಲಾ ಸುಮ್ಮನೆ ಹರಿದು ಚರಂಡಿ(Drainage) ಸೇರುತ್ತದೆ. ಮಳೆ ಕೊಯ್ಲು ಮುಖ್ಯವಾದ ಕ್ರಮ. ಆದರೆ ಅದನ್ನು ಅನುಸರಿಸುವವರು ಕೇವಲ ಬೆರಳೆಣೀಕೆ ಮಂದಿ ಮಾತ್ರ. ಅದೇ ರೀತಿ ಜಮೀನುಗಳಲ್ಲಿ ಮಳೆ ನೀರನ್ನು ಹಿಡಿದಿಡುಯುವ ಕಾರ್ಯವನ್ನು ಮಾಡಿದರೆ ರೈತರಿಗೆ(Farmer) ಬರಗಾಲದಂತ ಸಮಸ್ಯೆಗಳಿಂದ ಅರ್ದದಷ್ಟು ತಪ್ಪಿಸಿಕೊಳ್ಳಬಹುದು. ಈ ಬಗ್ಗೆ  ಡಾ. ಎಂ. ಬಿ. ಪಟ್ಟಣಶೆಟ್ಟಿ, ವಿಜಯಪುರ ಒಂದೊಳ್ಳೆ ವಿವರವನ್ನು ನೀಡುತ್ತಾರೆ.

ಒಂದು ಮಿಲಿ ಮೀಟರ್ (mm) ಮಳೆಯಾದರೆ, ಒಂದು ಎಕರೆ ಪ್ರದೇಶದಲ್ಲಿ ಸುಮಾರು 4,000 ಲೀಟರ್ ನೀರು ಬಂದಂತಾಯ್ತು (ಒಂದು ಎಕರೆ ಅಂದರೆ 4000 ಚದುರ ಮೀಟರ್). ನಮ್ಮ ವಿಜಯಪುರ ಜಿಲ್ಲೆಯ ಸರಾಸರಿ ವಾರ್ಷಿಕ ಮಳೆ ಪ್ರಮಾಣ 570 mm, ಅಂದರೆ, ಒಂದು ಎಕರೆ ಪ್ರದೇಶದಲ್ಲಿ ಸುಮಾರು 22,80,000 ಲೀಟರ್ ನೀರು ಮಳೆಯಿಂದ ದೊರೆಯತ್ತದೆ.

ಆದರೆ, ಸರಾಸರಿ ಸುಮಾರು ಶೇಕಡಾ 50 ರಷ್ಟು ನೀರು, ಸರಿಯಾದ ಮಣ್ಣು & ನೀರಿನ ಸಂರಕ್ಷಣಾ ಕ್ರಮಗಳಿಲ್ಲದ ಕಾರಣ ಜಮೀನ ಹೊರಗಡೆ ಹರಿದುಹೋಗುತ್ತದೆ. ಅದರ ಜೊತೆಗೆ ಅಪಾರ ಪ್ರಮಾಣದಲ್ಲಿ ಫಲವತ್ತಾದ ಮಣ್ಣೂ ಸಹ ಕೊಚ್ಚಿಕೊಂಡು ಹೋಗಿ, ಕಾಲಕ್ರಮೇಣ ಭೂಮಿ ಬರಡಾಗುತ್ತದೆ. ಶೇಕಡಾ 25 ರಷ್ಟು ನೀರು ಆವಿಯಾಗಿ ಹೋಗುತ್ತದೆ. ಇನ್ನು ನಮ್ಮ ಬೆಳೆಗಳಿಗೆ ಮತ್ತು ಅಂತರಜಲ ಮರುಪೂರಣಕ್ಕೆ ದೊರೆಯುವದು ಒಟ್ಟು ಬಿದ್ದ ಮಳೆಯಲ್ಲಿ ಕೇವಲ ಶೇಕಡಾ 25 ರಷ್ಟು ಮಾತ್ರ. ಆದ್ದರಿಂದಲೇ ಅಂತರಜಲದ ಮಟ್ಟ ದಿನೆದಿನೇ ಕುಸಿಯುತ್ತಿರುವುದು ಮತ್ತು ಬೋರವೆಲ್ ಗಳು & ಬಾವಿಗಳು ಒಣಗುತ್ತಿರುವುದು.

ಬಿದ್ದ ಮಳೆನೀರನ್ನು ಅಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುವದು ಬಹಳ ಅವಶ್ಯಕ. ಬಿದ್ದ ಮಳೆಯಲ್ಲೇ ನಾವು ಕೃಷಿ ಮಾಡುವದು ಅನಿವಾರ್ಯ. ಆದ್ದರಿಂದ, ಮಣ್ಣು ಮತ್ತು ನೀರಿನ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವದು ಅತ್ಯವಶ್ಯಕವಾಗಿದೆ. (ಮೇಲೆ ತಿಳಿಸಿದ ಪ್ರಮಾಣಗಳು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸ್ವಲ್ಪ ಹೆಚ್ಚುಕಡಿಮೆ ಆಗಬಹುದು).

ಬರಹ :
ಡಾ. ಎಂ. ಬಿ. ಪಟ್ಟಣಶೆಟ್ಟಿ
, ವಿಜಯಪುರ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

20 hours ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

1 day ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

1 day ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

1 day ago

ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?

ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…

1 day ago

ಮಂಗಳೂರು ಅಡಿಕೆ ಮಾರುಕಟ್ಟೆ | ಐದು ವರ್ಷದ ಧಾರಣೆ ಹೇಳುವ ಏರುಪೇರುಗಳ ಕಥೆ..!

ಐದು ವರ್ಷದ ದತ್ತಾಂಶವು ಮಂಗಳೂರು ಅಡಿಕೆ ಮಾರುಕಟ್ಟೆ ಚಕ್ರಾಕಾರ ಸ್ವಭಾವ ಹೊಂದಿರುವುದನ್ನು ತೋರಿಸಿದೆ.…

2 days ago