ಸಮಯ ವ್ಯರ್ಥ ಮಾಡದೆ ಅಧ್ಯಯನಶೀಲರಾಗಬೇಕು

June 19, 2025
4:33 PM
ಮಿತ್ತೂರಿನ ವೇದಮೂರ್ತಿ ತಿರುಮಲೇಶ್ವರ ಭಟ್ ವೇದ ಗಣಿತದ ಪುಸ್ತಕವನ್ನು ಅನಾವರಣಗೊಳಿಸಿದರು

ಪ್ರತಿಯೊಬ್ಬ ಮನುಷ್ಯನೂ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಶೀಲನಾಗಬೇಕು. ಚಿನ್ನವಾದರೂ ಅದನ್ನು ಸಂಸ್ಕರಿಸಿದಾಗ ಮಾತ್ರ ಅದು ಆಭರಣವಾಗುತ್ತದೆ. ಹಾಗೆಯೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟರೆ ಮಾತ್ರ ಸುಸಂಸ್ಕೃತರಾಗುತ್ತಾರೆ ಎಂದು ಮಿತ್ತೂರಿನ ವೇದಮೂರ್ತಿ ತಿರುಮಲೇಶ್ವರ ಭಟ್ ಇವರು ಹೇಳಿದರು.

Advertisement

ಅವರು ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯಲ್ಲಿ ಬುಧವಾರ ‘ವರ್ಣಿಕ ಮತ್ತು ಗಣಿತ’ ಕಾರ್ಯಕ್ರಮವನ್ನು ಉದ್ಘಾಟಿಸಿ, ವೇದ ಗಣಿತದ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದರು.

ಅತಿಥಿಯಾಗಿ ಆಗಮಿಸಿದ್ದ ವಿಶ್ರಾಂತ ಮುಖ್ಯೋಪಾಧ್ಯಾಯಿನಿ ರೂಪಕಲಾ ಮಾತನಾಡಿ ಹಳೆ ಬೇರು ಹೊಸ ಚಿಗುರು ಎಂಬ ಕವಿವಾಣಿಯಂತೆ ಆಧುನಿಕ ಜ್ಞಾನ ಎಷ್ಟೇ ಬೆಳೆದರೂ ಪುರಾತನ ಜ್ಞಾನವನ್ನು ಅಡಿಪಾಯವಾಗಿ ಬಳಸಬೇಕು. ಸರಳ ಸೂತ್ರಗಳ ಮೂಲಕ ಗಣಿತ ಅಧ್ಯಯನ ಮಾಡುವ ಸುಲಭ ವಿಧಾನವನ್ನು ನಮಗೆಲ್ಲರಿಗೂ ಪರಿಚಯಿಸಿಕೊಟ್ಟವರು ಶ್ರೀ ಭಾರತೀ ಕೃಷ್ಣತೀರ್ಥರು. ಅದೇ ಸೂತ್ರಗಳ ಮುಖಾಂತರ ಸುಲಭವಾಗಿ ಗಣಿತದ ಸವಾಲುಗಳನ್ನು ಪರಿಹರಿಸಬಹುದು ಎಂದು ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಕೈಬರಹವು ಮುಖದ ಕನ್ನಡಿ ಇದ್ದಂತೆ. ಹಾಗಾಗಿ ಉತ್ತಮ ಕೈ ಬರೆಹವು ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ನುಡಿದರು.

ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಭಟ್ ಪ್ರಾಸ್ತವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳಾದ ಸುಧನ್ವಾ.ಕೆ ಸ್ವಾಗತಿಸಿ, ಸಾನ್ವಿ ಜಿ. ವಂದಿಸಿದರು. ಯಶ್ವೀ ಭುಟ್ ಕಾರ್ಯಕ್ರಮವನ್ನು ನಿರೂಪಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೇತುವಿನ ಕಾಟ: ಈ ರಾಶಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆ ಬೇಕು..!
July 11, 2025
7:33 AM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವರದಾ, ತುಂಗಭದ್ರಾ ನದಿ
July 11, 2025
7:14 AM
by: The Rural Mirror ಸುದ್ದಿಜಾಲ
ರಾಜ್ಯದ 10 ಜಿಲ್ಲೆಯಲ್ಲಿ ಶ್ರಮಿಕ, ತಾತ್ಕಾಲಿಕ ವಸತಿ ಸಮುಚ್ಛಯ ನಿರ್ಮಿಸಲು ನಿರ್ಧಾರ
July 11, 2025
7:11 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror