ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಯಕ್ಷಗಾನ ವೇಷಧಾರಿಯಾಗಿ ಸಂಭ್ರಮಿಸಿದರು.
ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯ ಕಲ್ಪಿಸುವ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ ಮಂಗಳವಾರ ಆಗಮಿಸಿದ್ದರು.
ಕಾರವಾರ, ಕುಮಟಾ, ಭಟ್ಕಳ ಆಸ್ಪತ್ರೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳ ಸಭೆ ನಡೆಸಿದ್ದರು. ರಾತ್ರಿ ಭಟ್ಕಳ ಶಾಸಕ ಸುನೀಲ ನಾಯ್ಕ ಅವರ ಜಾಲಿಯ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು.
ರಾತ್ರಿ ಶಾಸಕರ ಮನೆಯಲ್ಲೇ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ಸಚಿವರು ಯಕ್ಷಗಾನದ ವಸ್ತ್ರ, ಕೇದಿಗೆ ಮಂದಲೆ ಹಾಗೂ ಆಭರಣ ತೊಟ್ಟು ಸಂಭ್ರಮಿಸಿದರು. ಯಕ್ಷಗಾನ ನೋಡಿ ಖುಷಿಪಟ್ಟರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel