ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಕ್ಯಾಂಪ್ಕೋ ಸಂಸ್ಥೆಯ ಹಿರಿಯ ಸದಸ್ಯರೂ ಹಾಗೂ ARDF ಅಧ್ಯಕ್ಷರಾಗಿ ಸಂಸ್ಥೆಯ ಮಾರ್ಗದರ್ಶಕರೂ ಆಗಿರುವ ಡಾ.ಹೆಗ್ಗಡೆ ಅವರುರಾಜ್ಯಸಭೆಗೆ ನಾಮನಿರ್ದೆಶನಗೊಂಡಿರುವುದು ಸಮಸ್ತ ಅಡಿಕೆ ಬೆಳೆಗಾರರಿಗೆ ಸಂತಸ ತಂದಿದೆ ಮತ್ತು ಈ ಗೌರವ ಎಲ್ಲಾ ಅಡಿಕೆ ಬೆಳೆಗಾರರಿಗೆ ಸಂದಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಅಡಿಕೆ ಆಮದು ತಡೆ ಮತ್ತು ಅಡಿಕೆಗೆ ಕನಿಷ್ಟಆಮದು ಬೆಲೆಯನ್ನು 360 ರೂಪಾಯಿಗೆ ನಿಗದಿಪಡಿಸಬೇಕು ಹಾಗೂ ಅಡಿಕೆ ಬೆಳೆ ಸಂಶೋಧನೆಗೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದರು. ಈಗ ರಾಜ್ಯಸಭೆಯಲ್ಲಿ ಅಡಿಕೆ ಬೆಳೆಗಾರರ ಧ್ವನಿಯಾಗಿ ನಮ್ಮ ಕೃಷಿಕರ ಶಕ್ತಿಯಾಗಿ ಡಾ. ಹೆಗ್ಗಡೆಯವರು ಇರುವುದು ನಮಗೆಲ್ಲರಿಗೂ ಹೆಮ್ಮೆ. ಹೀಗಾಗಿ ಸಮಸ್ತ ಕ್ಯಾಂಪ್ಕೋ ಸದಸ್ಯರ ಮತ್ತು ಅಡಿಕೆ ಬೆಳೆಗಾರರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದು ಕ್ಯಾಂಪ್ಕೋ ಅಧ್ಯಕ್ಷರು ತಿಳಿಸಿದ್ದಾರೆ.