ಸಂಪಾದಕೀಯ ಆಯ್ಕೆ

ಅಡಿಕೆ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಅವರಿಗೆ ಮತ್ತೊಮ್ಮೆ ಅಂತರಾಷ್ಟ್ರೀಯ ಮನ್ನಣೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ವಿಶ್ರಾಂತ ಪ್ರಾಧ್ಯಾಪಕ,ಪ್ರಾಂಶುಪಾಲ ಹಾಗೂ ಕೃಷಿ ಮಾರುಕಟ್ಟೆ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿದ್ದ ಲೇಖನಗಳನ್ನು ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಸಂಶೋಧಕರು ಅವರ ಸಂಶೋಧನೆಗಳಲ್ಲಿ ಮೂಲವಾಗಿ ಬಳಸಿಕೊಂಡು ಅದರ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಈ ಉಲ್ಲೇಖಗಳು, ವಿಶ್ವದಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸುವ ದೃಷ್ಟಿಯಿಂದ ಮೊದಲ ಎರಡು ಸ್ಥಾನದಲ್ಲಿರುವ Elsevier  ಮತ್ತು springer ಗಳು ಪ್ರಕಟಿಸುವ ವಿವಿಧ ನಿಯತಕಾಲಿಕೆಗಳಲ್ಲಿ ಆಗಿವೆ.ಈ ವರ್ಷ ಜೂನ್ 2025 ರ ತನಕ ಆರು ತಿಂಗಳಲ್ಲಿ ಇವರ ಲೇಖನಗಳನ್ನು ಇಥಿಯೋಪಿಯಾ, ನೈಜೀರಿಯಾ,ಈಜಿಪ್ಟ್, ಆಫ್ರಿಕಾ,ನೇಪಾಳ,ಘಾನಾ ಮತ್ತು ಬಾಂಗ್ಲಾ ದೇಶಗಳ ಸಂಶೋಧಕರು ಉಲ್ಲೇಖ ಮಾಡಿದ್ದಾರೆ.

Advertisement

ಗೂಗಲ್ ಸ್ಕಾಲರ್ ಆಗಿ ಗಮನಾರ್ಹ ಸಾಧನೆ : ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳ ಪಾಂಡಿತ್ಯಪೂರ್ಣ ಸಾಹಿತ್ಯಗಳಲ್ಲಿ ಅಂದಾಜು ಸುಮಾರು 176 ಮಿಲಿಯ ಕ್ಕಿಂತಲೂ ಹೆಚ್ಚು ಸಂಶೋಧನಾ ಲೇಖನಗಳು, ಪರಾಮರ್ಶನ ಗ್ರಂಥಗಳು,ಇತ್ಯಾದಿಗಳ ಸುಮಾರು 2.3 ಬಿಲಿಯ ಕ್ಕಿಂತಲೂ ಹೆಚ್ಚು ಸಂಶೋಧನಾ ಲೇಖನಗಳನ್ನು ಹೊಂದಿರುವ ಇಲ್ಲಿ ಸಂಶೋಧನಾ ಕಾರ್ಯದ ತೂಕ, ಕ್ಷೇತ್ರ, ಪರಿಣಿತಿ, ಬೇರೆ ಸಂಶೋಧಕರಿಗೆ ಮಾರ್ಗದರ್ಶನ ಆಗಬಲ್ಲ ಲೇಖನ ಮುಂತಾದ ಮಾನದಂಡಗಳ ಮೂಲಕ ಗೂಗಲ್ ಸ್ಕಾಲರ್ ಸ್ಥಾನಮಾನ ದೊರಕುತ್ತದೆ.

ಈ ಮಾನದಂಡಗಳ ಆಧಾರದಲ್ಲಿ ಡಾ. ವರ್ಮುಡಿ ಅವರು ಕೃಷಿ ಅರ್ಥಶಾಸ್ತ್ರ,ಮಾರುಕಟ್ಟೆ,ಗ್ರಾಮೀಣಾಭಿವೃದ್ದಿ,ಸಹಕಾರ ವ್ಯವಸ್ಥೆ ಮುಂತಾದ ವಿಚಾರಗಳ ಬಗ್ಗೆ ಪ್ರಕಟಿಸಿದ ಸಂಶೋಧನಾ ಲೇಖನಗಳನ್ನು ಗಣನೆಗೆ ತೆಗೆದುಕೊಂಡು,ಅವರನ್ನು ಗೂಗಲ್ ಸ್ಕಾಲರ್ ಎಂದು ಪರಿಗಣಿಸಲಾಗಿದೆ.ಈ ತನಕ ಅವರ ಲೇಖನಗಳು ಮತ್ತು ಪರಾಮರ್ಶನ ಗ್ರಂಥಗಳನ್ನು ಸುಮಾರು 180 ಕ್ಕಿಂತಲೂ ಅಧಿಕ ಆಂತರಿಕ ಹಾಗೂ ಅಂತರಾಷ್ಟ್ರೀಯ ಸಂಶೋಧಕರು ತಮ್ಮ ಸಂಶೋಧನೆಗಳಲ್ಲಿ ಉಲ್ಲೇಖಿಸುತ್ತಾರೆ.ಇದರಿಂದಾಗಿ ಗೂಗಲ್ ಸ್ಕಾಲರ್ ಪ್ರಕಾರ ಅಲ್ಲಿ ಸಂಗ್ರಹ ಇರುವ 176 ಮಿಲಿಯ ಕ್ಕಿಂತಲೂ ಅಧಿಕ ಸಂಶೋಧಕರ ಲೇಖನಗಳ ಉಲ್ಲೇಖಕ್ಕೆ ಸಂಬಂಧಿಸಿದಂತೆ ಡಾ. ವರ್ಮುಡಿ ಅವರ ಸ್ಥಾನ ಮೊದಲ ಶೇಕಡಾ 1.8 ಕೆ ಏರಿದೆ.ಇದೊಂದು ಗಮನಾರ್ಹ ಸಾಧನೆ ಆಗಿ, ಅವರ ಪರಿಣಿತಿ ಕ್ಷೇತ್ರದಲ್ಲಿ ಅವರೊರ್ವ ಪ್ರಭಾವಶಾಲಿ ಸಂಶೋಧಕರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.

ಡಾ. ವರ್ಮುಡಿ ಅವರು ಆಂಗ್ಲ ಭಾಷೆಯಲ್ಲಿ ಆರು ಸ್ವರಚಿತ ಪರಾಮರ್ಶನ ಗ್ರಂಥಗಳು ಮತ್ತು ಇಪ್ಪತ್ತು ಸಂಪಾದಿತ ಪರಾಮರ್ಶನ ಗ್ರಂಥಗಳಲ್ಲಿ ಬರೆದಿದ್ದಾರೆ.ಇವರ ಸುಮಾರು ಇನ್ನೂರೈವತ್ತು ಸಂಶೋಧನಾ ಲೇಖನಗಳು ಪ್ರತಿಷ್ಠಿತ ಸೂಚ್ಯಂಕ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.ಇವರ ಸಂಪಾದಕತ್ವದಲ್ಲಿ ಹಲವು ಇಂಗ್ಲೀಷ್ ಮತ್ತು ಕನ್ನಡ ಪುಸ್ತಕಗಳೂ ರಚನೆ ಆಗಿವೆ.ಕನ್ನಡದಲ್ಲಿ ಇಪ್ಪತ್ತು ಕೃತಿಗಳನ್ನು ರಚಿಸಿರುವ ಇವರು ರಾಜ್ಯದ ಪ್ರತಿಯೊಂದು ಪತ್ರಿಕೆಗಳು ಮತ್ತು ಕೆಲವು ನಿಯತಕಾಲಿಕೆಗಳಲ್ಲಿ ಸಾವಿರಕ್ಕೂ ಅಧಿಕ ಲೇಖನಗಳನ್ನು ಬರೆದಿದ್ದಾರೆ.ಇವರ ಪರಾಮರ್ಶನ ಗ್ರಂಥಗಳು ಅಮೆರಿಕದ ಆರು, ಇಂಗ್ಲೆಂಡ್,ಫಿಜಿ,ಶ್ರೀಲಂಕಾ ಗಳಲ್ಲಿ ತಲಾ ಒಂದು,ಭಾರತದ ಹನ್ನೆರಡು ವಿ. ವಿ ಗಳಲ್ಲಿ ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶನ ಗ್ರಂಥಗಳಾಗಿವೆ.ಈ ತನಕ ಇವರ ಲೇಖನಗಳನ್ನು ಅಮೇರಿಕಾ,ಇಂಗ್ಲಂಡ್, ಆಫ್ರಿಕಾ, ಥಾಯ್ಲೆಂಡ್,ಶ್ರೀಲಂಕಾ,ಬಾಂಗ್ಲಾ ದೇಶ, ಪಾಕಿಸ್ತಾನ,ನೇಪಾಳ,ಇರಾಕ್,ಚೀನಾ,ಮಲೇಷಿಯಾ,ವೆಸ್ಟ್ಇಂಡೀಸ್, ನೈಜೀರಿಯಾ,ಇತಿಯೋಪಿಯ,ಕೀನ್ಯಾ,ನೆದರ್ಲೆಂಡ್,ಯೋಗೋಸ್ಲೇವಿಯಾ ಮುಂತಾದ ರಾಷ್ಟ್ರಗಳ ಸಂಶೋಧಕರು ಉಲ್ಲೇಖಿಸಿದ್ದಾರೆ.

ಇವರು ಆಗ್ರೋ ಇಂಡಿಯಾದಲ್ಲಿ ಪ್ರಕಟಿಸಿದ ಅರೆಕ್ಯಾನಟ್ ಎಂಬ ಲೇಖನವನ್ನು ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಘಟನೆ ಒಂದು ದಾಖಲೆಯನ್ನಾಗಿ ಸ್ವೀಕರಿಸಿದೆ.ಇದರೊಂದಿಗೆ ಇಂಗ್ಲೆಂಡಿನ ಕಾಮನ್ವೆಲ್ತ್ ಅಗ್ರಿಕಲ್ಚರಲ್ ಬ್ಯೂರೋ ಇಂಟರ್ನ್ಯಾಷನಲ್,ಅಮೆರಿಕದ,ವಿಶ್ವದ ಅತೀ ದೊಡ್ಡ ಆನ್ಲೈನ್ ಮೀಡಿಲಿನ್ ಪ್ಲಸ್ ಮತ್ತು ಪ್ರೆಸ್ ಡಿಸ್ಪ್ಲೇ ಇವರ ಲೇಖನಗಳನ್ನು ಉಲ್ಲೇಖಿಸಿವೆ.

Advertisement

1985 ರಿಂದ ಇವರು ಇಂಡಿಯನ್ ಜರ್ನಲ್ ಆಫ್ ಮಾರ್ಕೆಟಿಂಗ್, ದ ಮೈಸೂರ್ ಎಕಾಮಿಕ್ ರಿವ್ಯೂ,ಯೋಜನಾ,ಸದರ್ನ್ ಎಕನಾಮಿಕ್ಸ್,ಫ್ಯಾಕ್ಟ್ಸ್ ಫಾರ್ ಯು,ಕಿಸಾನ್ ವರ್ಲ್ಡ್,ಆಗ್ರೋ ಇಂಡಿಯಾ,ಇಂಡಿಯನ್ ಕೋಕೋ ಅರೆಕಾನಟ್ ಅಂಡ್ ಸ್ಪೈಸಿ ಜರ್ನಲ್,ಫೈನಾನ್ಸಿಯಲ್ ಎಕ್ಸಪ್ರೆಸ್,ಡೆಕ್ಕನ್ ಹೆರಾಲ್ಡ್ ,ಇಂಡಿಯನ್ ಕೋಆಪರೇಟಿವ್ ರಿವ್ಯೂ,ದ ಕೂಪರೇಟರ್ ಮುಂತಾದ ನಿಯತಕಾಲಿಕ ಮತ್ತು ದಿನ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸುತ್ತಾರೆ.ಇದರೊಂದಿಗೆ ಕನ್ನಡದ ಯೋಜನಾ,ನಿರಂತರ,ಉದ್ಯಮದರ್ಶಿ,ಅಡಿಕೆ ಪತ್ರಿಕೆ,ಸ್ಪೈಸ್ ಇಂಡಿಯಾ ಇತ್ಯಾದಿಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ.‌

ಇವರು ಹಲವು ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವಿಚಾರ ಸಂಕಿರಣಗಳನ್ನು ಆಯೋಜಿಸಿರುತ್ತಾರೆ ಮತ್ತು ಪ್ರಬಂಧ ಮಂಡಿಸಿರುತ್ತಾರೆ.ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇರಳ ಮತ್ತು ಕರ್ನಾಟಕ ಸರಕಾರಗಳಿಗೆ ವರದಿಯನ್ನು ಸಲ್ಲಿಸಿ ಬೆಳೆಗಾರರಿಗೆ ಪರಿಹಾರ ದೊರಕುವಂತೆ ಮಾಡಲು ಶ್ರಮಿಸಿದ್ದಾರೆ.2014 ರ ಸಮಯದಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬ ಬಗ್ಗೆ ಕರ್ನಾಟಕ ಸರಕಾರಕ್ಕೆ ಸಮಿತಿಯ ಸದಸ್ಯನಾಗಿ ವರದಿ ಸಲ್ಲಿಸಿದ್ದಾರೆ.ಕೃಷಿಕರಿಗೆ ಬಡ್ಡಿ ರಹಿತ ಸಾಲ ನೀಡಲು ಸರಕಾರಕ್ಕೆ ವರದಿ ಸಲ್ಲಿಸಿ ಅದು ಅನುಷ್ಠಾನ ಆದ್ದು ಈಗ ಇತಿಹಾಸ.

1982 ರಲ್ಲಿ ಮಂಗಳೂರು ವಿ. ವಿ ಯ ಮೊದಲ ಬ್ಯಾಚಿನ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಬಳಿಕ ಅದೇ ಅರ್ಥಶಾಸ್ತ್ರ ವಿಭಾಗದಲ್ಲಿ ಪಿ.ಹೆಚ್. ಡಿ ಅಧ್ಯಯನ ಮಾಡುತ್ತಾ ಬೋಧನೆ ಕಾರ್ಯಗಳಲ್ಲಿ ತೊಡಗಿಸಿಕೊಂಡು,1988 ರ ಸಮಯದಲ್ಲಿ ಪೂರ್ಣ ಪ್ರಮಾಣದ ಸಂಶೋಧನಾ ವಿದ್ಯಾರ್ಥಿಯಾಗಿ ವಿ. ವಿ ಯ ಅರ್ಥಶಾಸ್ತ್ರ ವಿಭಾಗದ ಮೊದಲ ಡಾಕ್ಟರೇಟ್ ಪದವಿ ಗಳಿಸಿದರು.1983 ರ ಸಮಯದಲ್ಲಿ ದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ನಿಂದ ಸಮೀಕ್ಷಾ ಸಂಶೋಧನೆಯಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದರು.1988 ಅಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿ,ಬಳಿಕ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 2017ಕೆ ನಿವೃತ್ತಿ ಹೊಂದಿ,ನಂತರ ಪರ್ಲದ ನಾಳಂದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುತ್ತಾರೆ.

ಇವರು 1998- 2001 ರ ಅವಧಿಯಲ್ಲಿ ಮಂಗಳೂರು ವಿ. ವಿ ಯ ಅಕಡೆಮಿಕ್ ಕೌನ್ಸಿಲ್ನ ಚುನಾಯಿತ ಸದಸ್ಯರು ಆಗಿದ್ದರು. ಇದೇ ಸಂದರ್ಭದಲ್ಲಿ ಅವರು ವಿ. ವಿ ಯ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ ಪೀಠದ ಸದಸ್ಯರೂ ಆಗಿ ಸೇವೆ ಸಲ್ಲಿಸಿರುತ್ತಾರೆ.2014 ಅಲ್ಲಿ ಕರ್ನಾಟಕ ಸರಕಾರದ ಅಡಿಕೆ ಸಲಹಾ ಸಮಿತಿಯ ಸದಸ್ಯರಾಗಿ ಸರಕಾರಕ್ಕೆ ಅಡಿಕೆ ಒಂದು ಔಷದೀಯ ಸಸ್ಯ ಮತ್ತು ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬ ವರದಿ ಸಲ್ಲಿಸಿದ್ದಾರೆ. ಕರ್ನಾಟಕದ ಉಚ್ಚ ನ್ಯಾಯಾಲಯ ಇವರ ಅಡಿಕೆ ಬಗೆಗಿನ ಲೇಖನವನ್ನು ಉಲ್ಲೇಖಿಸಿ ನಿಯಂತ್ರಿತ ಮಾರುಕಟ್ಟೆಗೆ ಸಂಬಂಧಪಟ್ಟಂತೆ ತೀರ್ಪು ನೀಡುವಾಗ ಇವರನ್ನು ಅಡಿಕೆ ತಜ್ಞ ಎಂಬುದಾಗಿ ಉಲ್ಲೇಖಿಸಿದೆ.

ಈ ಮೊದಲು ಹಲವು ಬಾರಿ ಇವರ ಸಂಶೋಧನೆಗಳಿಗೆ ಅಂತರಾಷ್ಟ್ರೀಯ ಮನ್ನಣೆ ದೊರಕಿದ್ದು,ಇವುಗಳೊಂದಿಗೆ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಕ್ಕಿಗಳಿಗೆ ಗೂಡುಕಟ್ಟುವ ಪರಿಸರ ಪ್ರೇಮಿ..

ಹಕ್ಕಿಗಳಿಗೆ ಗೂಡುಕಟ್ಟುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಟ್ಟಿರುವ ದಂಪತಿಗಳು ಬಂಟ್ವಾಳ ತಾಲೂಕಿನಲ್ಲಿದ್ದಾರೆ. ಇವರ…

2 hours ago

ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?

ಜಾಗತಿಕ ಮಟ್ಟದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.ಇನ್ನು…

5 hours ago

ಮಹಾರಾಷ್ಟ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ 25,000 ಕೋಟಿ ರೂ. ಹೂಡಿಕೆ ಮಾಡಲಿದೆ

ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ  ರಾಜ್ಯ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ಕೃಷಿ…

5 hours ago

ಆಶ್ಲೇಷ ನಕ್ಷತ್ರದಲ್ಲಿ ಬುಧ: ಈ 4 ರಾಶಿಗೆ ಹೆಜ್ಜೆ ಹೆಜ್ಜೆಗೂ ಕಂಟಕ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

6 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್

ದರ್ಶಿತ್‌ ಕೆ ಎಸ್‌, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌, ಬೆಳ್ಳಾರೆದರ್ಶಿತ್‌…

14 hours ago

ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…

15 hours ago