ಅಖಂಡ ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ.
ದ್ರೌಪದಿ ಮುರ್ಮು ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮುರ್ಮು ಅವರ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿಯಾಗಿ ಮಾಜಿ ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು ನಾಮಪತ್ರ ಸಲ್ಲಿಸಿ ಕಣಕ್ಕೆ ಇಳಿದಿದ್ದರು.
ದ್ರೌಪದಿ ಮುರ್ಮು ಅವರು ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯಾಗಿದ್ದಾರೆ. 1958 ಜೂನ್ 20ರಂದು ಜನಿಸಿದ ಮುರ್ಮು ಅವರಿಗೆ ಒರ್ವ ಮಗಳು ಇದ್ದಾರೆ. ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದ ಸಂತಾಲಿ ಬುಡಕಟ್ಟು ಗ್ರಾಮದಲ್ಲಿ ಜನಿಸಿದ ಮುರ್ಮ ಅವರು ಬುಡಕಟ್ಟು ಜನಾಂಗದಿಂದ ಬಹಳ ಕಷ್ಟದ ಪರಿಸರದಲ್ಲಿ ಶಿಕ್ಷಣ ಪೂರೈಸಿ ಅದಮ್ಯ ಚೇತನವಾಗಿ ಬೆಳೆದು ಬಂದವರು. ದ್ರೌಪದಿ 1997ರಲ್ಲಿ ಕೌನ್ಸಿಲರ್ ಆಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು. 2015 ರಿಂದ 2021 ರವರೆಗೆ ಜಾಖಂಡ್ ರಾಜ್ಯದ ಗವರ್ನರ್ ಆಗಿದ್ದ ದ್ರೌಪದಿ ಮುರ್ಮು ಅವರು ಎನ್‌ಡಿಎಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ರಾಷ್ಟ್ರಪತಿ ಚುನಾವಣೆಗೆ ಜುಲೈ 18ರಂದು ಮತದಾನ ನಡೆದಿತ್ತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




