ಹಟ್ಟಿಗೆ ಡ್ರೆಸ್ ಕೋಡ್… | ಹೆಂಡತಿ ಮನೆಯಲ್ಲಿ ಇಲ್ಲದಿದ್ದಾಗ ಗಂಡಸರ ಪಾಡು ಬೇಡ….!

December 18, 2023
3:12 PM
ಹಟ್ಟಿಗೆ ಹೋಗುವಾಗ, ಹಾಲು ಕರೆಯಲು ದೇಸೀ ದನಗಳಿಗೆ ಒಬ್ಬರೇ ಆಗಬೇಕು. ಅದಕ್ಕಾಗಿ ಅವುಗಳು ಡ್ರೆಸ್‌ ಕೋಡ್‌ ನೋಡುತ್ತವೆ.

ಚಂದ್ರ ಭಟ್ಟರ ಹೆಂಡತಿ ಅರ್ಜೆಂಟು ತವರಿಗೆ ಹೋಗಬೇಕಾಯಿತು.‌ ಚಂದ್ರ ಭಟ್ಟರ ಹೆಂಡತಿ ವಿಶಾಲಕ್ಕ ತವರಿಗೆ ಹೋದರೆ ಚಂದ್ರ ಭಟ್ಟರ ಒಳಗಿನ ಅಡಿಗೆ ಹೆಂಗೋ ದಬಾಯಿಸುತ್ತದೆ. ಆದರೆ ಕೊಟ್ಟಿಗೆ(Cow shed) ಕೆಲಸದ ವಿಚಾರದಲ್ಲಿ ಬಹಳ ದೊಡ್ಡ ಸವಾಲು ಶುರುವಾಗುತ್ತದೆ. ಮದುವೆಯಾದ(Marriage) ಲಗಾಯ್ತಿನಿಂದ ವಿಶಾಲಕ್ಕನೇ ಕೊಟ್ಟಿಗೆ ಕೆಲಸ ಮಾಡೋದು ಮತ್ತು ಹಾಲು ಕರೆಯೋದು(Milking). ಮನೆಯ ಮಲೆನಾಡು ಗಿಡ್ಡ ಹಸುಗಳು(Desi Cow) ದಿನ ಹಾಲು ಕರೆಯೋರಿಗೆ ಮಾತ್ರ ಹಾಲು ಕರೆಯೋಕೆ ಬಿಡೋದು. ಚಂದ್ರ ಭಟ್ಟರ ಮನೆ ಕೊಟ್ಟಿಗೆಯ ದಾಸಿ ಎಂಬ ಮಲೆನಾಡು ಗಿಡ್ಡ ಹಸು ಹಾಲು ಕರೆಯೋ ಟಾಸ್ಕ್(Task) ಈಗ ಚಂದ್ರ ಭಟ್ಟರಿಗೆ.

Advertisement

ಸಂಜೆ ಹೆಂಡತಿ ಹಾಲು ಕರೆಯೋ ಸಮಯದಲ್ಲಿ ಚಂದ್ರು ಭಟ್ಟರು ಊರ ಅಂಗಡಿ ಕಟ್ಟೆಯಲ್ಲಿ ಸಷೆನ್ ಚೆರ್ಚೆ ಮಾಡ್ತಾ ರಾಜ್ಯ ರಾಷ್ಟ್ರ ಮಟ್ಟದ ರಾಜಕೀಯ ಚೆರ್ಚೆಯಲ್ಲಿ ಭಾಗಿಯಾಗಿರುತ್ತಿದ್ದರು. ಇವತ್ತು ಚಂದ್ರು ಭಟ್ಟರಿಗೆ ದಾಸಿ ಹಾಲು ಕರೆಯಲೇ ಬೇಕಾದ ಕಠಿಣ ಟಾಸ್ಕ್ ಎದುರಾಗಿದೆ. ಒಂದು ಹಾಲು ಕರೆವ ಮಿಳ್ಳೆ (ಪಾತ್ರೆ) ತಗೊಂಡು ನಿಧಾನಕ್ಕೆ ಕರು ಬಿಟ್ಟುಕೊಂಡು ದಾಸಿ ಹತ್ತಿರ ಹಾಲು ಕರೆಯೋಕೆ ಹೋದರು. ಕೈ ಹಂಗಿ ಹಂಗಿ ಕೆಚ್ಚಲಿಗೆ ಕೈ ಹಾಕಿದ ತಕ್ಷಣ ದಾಸಿ ಜಾಡಿಸಿ ಒದ್ದ ಹೊಡೆತಕ್ಕೆ ಹಾಲಿನ ಮಿಳ್ಳೆ ಒಂದು ಕಡೆ ಭಟ್ಟರು ಒಂದು ಕಡೆ ಹೋಗಿ ಬಿದ್ದರು. ಭಟ್ಟರಿಗೆ ಅದು ಎಷ್ಟೇ ಕಷ್ಟವಾದರೂ ಪರವಾಗಿಲ್ಲ ದಾಸಿ ಹಾಲು ಕರೆದೇ ಸಿದ್ದ ಎಂದು ಎದ್ದು ಅಂಡೊರೆಸಿಕೊಂಡು ಮಿಳ್ಳೆ ಹಿಡಿಕೊಂಡು ಕರು ಕಟ್ಟಿ ಒಳಗೆ ಬಂದರು.

ಸುಮಾರು ಹೊತ್ತು ಯೋಚನೆ ಮಾಡಿ ಕಡೆಗೆ ಒಂದು ಐಡಿಯಾ ಮಾಡಿದರು. ಹೆಂಡತಿ ಗೆ ಫೋನ್ ಮಾಡಿ ಲೌಡ್ ಸ್ಪೀಕರ್ ಆನ್ ಮಾಡಿ ದಾಸಿಯ ಹತ್ತಿರ ಮಾತನಾಡಿ ಕರೆಯಲು ಹೇಳಿ ತಮ್ಮ ಹೆಂಡತಿ ನೈಟಿನ ಹಾಕಿಕೊಂಡು ಮತ್ತೆ ಮಿಳ್ಳೆ ಹಿಡಕೊಂಡು ದಾಸಿ ಹತ್ತಿರ ಹೋಗಿ ಕರು ಬಿಟ್ಟು ಮತ್ತೆ ಎಳೆದು ಕಟ್ಟಿ ಹಾಲು ಕರೆಯಲು ಕೂತರು. ದಾಸಿ ವಡ್ಡ ಗಣ್ಣಿನಿಂದ ಭಟ್ಟರ ಮುಖ ನೋಡದೇ ವಿಶಾಲಕ್ಕನ ನೈಟಿ ನೋಡ್ತು. ನೈಟ್ ಒಳಗಿನ ಭಟ್ಟರ ಜೋಬಿನಿಂದ ವಿಶಾಲಕ್ಕನ ಸೌಂಡ್ ಕೇಳಿ ಭಟ್ಟರ ಹೆಚ್ಚು ಪರೀಕ್ಷೆ ಮಾಡದೇ ಹಾಲಿಳಿಸಿತು..‌… ಭಟ್ಟರು ದಾಸಿ ಹಾಲು ಕರೆದು ದೊಡ್ಡ ಸಾಹಸ ಮಾಡಿದ ಖುಷಿಲಿ‌ ಬೀಗಿದರು.

ಇದೇ ಖುಷಿಲಿ‌ ಹಾಲು ಕರೆದು ಎದ್ದು ಕರುನ ಬಿಟ್ಟು ಖುಷಿಲಿ ವೇಗವಾಗಿ ಮನೆಯೊಳಗೆ ಹೋಗುವಾಗ ತಾವು ಹೆಂಡತಿ ನೈಟಿ ಹಾಕ್ಯಂಡಿದ್ದೀನಿ ಎಂದು ತಲೆಲಿ ಇಲ್ಲದೇ ಹೋಗುವಾಗ ಭಟ್ಟರಿಗೆ ಹೆಂಡತಿ ನೈಟಿ ಕಾಲು ಹಿಡಿದು ಹಾಲಿನ ಸಮೇತ ಮುಗ್ಗರಿಸಿ ಬಿದ್ದರು. ಬಿದ್ದ ಹೊಡೆತಕ್ಕೆ ಮಂಡೆಯಲ್ಲಿ ಲೈಟ್ ಬಂದಂತಾಯಿತು..‌

ಸುಮಾರು ಹೊತ್ತಿಗೆ ಸವಾರಿಸಿಕೊಂಡು ಎದ್ದು ಕೂತು ಹೆಂಡತಿ ನೈಟಿ ಬಿಚ್ಚಿ ಹೆಂಡತಿ ವಿಶಾಲಕ್ಕನಿಗೆ ಕರೆ ಮಾಡಿ ನಾಳೆ ಬೆಳಿಗ್ಗೆನೇ ನೀ ಮನೆಗೆ ಬಾ. ಇಲ್ಲವಾದರೆ ಬಾವನ ಕಳಿಸು ಪಿಕ್ಅಪ್‌ನಲ್ಲಿ ದಾಸಿನ ಅಲ್ಲಿಗೆ ಕಳಿಸ್ತೇನೆ. ನೀ ಬರುವಾಗ ದಾಸಿನ ಮತ್ತೆ ಪಿಕ್ಅಪ್‌ನಲ್ಲಿ ಮನೆಗೆ ತಗೊಂಡು ಬಾ ಮರೇತಿ. ಅಂದರು ಎಡವಿ ಬಿದ್ದ ನೋವಿನಲ್ಲಿ…

ಹೆಚ್ ಎಫ್ ಮತ್ತು ಜೆರ್ಸಿ ಜಾನುವಾರುಗಳು ಯಾರು ಎಷ್ಟೊತ್ತಿಗೆ ಕರೆದರೂ ಹಾಲು ಕೊಡುತ್ತವೆ‌‌‌. ದೇಸಿ ಆಕಳುಗಳ ದೈನಂದಿನ ಸಂಪರ್ಕ ಅವರ ವಾಸನೆ ಮತ್ತು ಬಟ್ಟೆ ಖಂಡಿತವಾಗಿಯೂ ಗುರುತಿಸುತ್ತವೆ. ನಾವೇ ದಿನಾ ಕೊಟ್ಟಿಗೆ ಕೆಲಸ ಮಾಡುವವರಾದರೂ ಕೊಟ್ಟಿಗೆಗೆ ಹೋಗಬೇಕಾದರೆ ಕೊಟ್ಟಿಗೆ ಬಟ್ಟೆ ಹಾಕಿಕೊಂಡೇ ಹೋಗಬೇಕು. ಸೂಟು ಬೂಟು ಹಾಕಿಕೊಂಡು ಹೋದರೆ, ಖಂಡಿತವಾಗಿಯೂ ದೇಸಿ ಹಸುಗಳು ನಮ್ಮ ಒಪ್ಪೊಲ್ಲ. ಭಯ ಪಡುತ್ತವೆ.. ಜಾನುವಾರುಗಳಿಗೂ ಮನುಷ್ಯನ ಕೊಟ್ಟಿಗೆ ಡ್ರೆಸ್ ಕೋಡ್ ಅತಿ ಮುಖ್ಯ..

 

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group