ಕಳೆದ ಕೆಲವು ಸಮಯಗಳಿಂದ ಅಡಿಕೆಯು ಅಸ್ಸಾಂ ಮೂಲಕ ವಾಹನಗಳಲ್ಲಿ ಕಳ್ಳಸಾಗಾಣಿಕೆಯಾಗಿ ಭಾರತದ ಮಾರುಕಟ್ಟೆಗೆ ಪ್ರವೇಶ ಮಾಡುತ್ತಿತ್ತು, ಇದೀಗ ಬೃಹತ್ ಪ್ರಮಾಣದ ಅಡಿಕೆ ಬಂದರು ಮೂಲಕ ಆಗಮಿಸುತ್ತಿರುವುದು ಬೆಳಕಿಗೆ ಬಂದಿದೆ. ಸುಮಾರು 8.61 ಕೋಟಿ ರೂಪಾಯಿ ಮೌಲ್ಯದ ಒಟ್ಟು 114.372 ಮೆಟ್ರಿಕ್ ಟನ್‌ಗಳಷ್ಟು ಅಡಿಕೆಯನ್ನು ಡಿಆರ್‌ಐ ವಶಪಡಿಸಿಕೊಂಡಿವೆ. ಇದೇ ವೇಳೆ ಮಣಿಪುರದ ಸೇನಾಪತಿ ಜಿಲ್ಲೆಯಿಂದ ನಾಗಾಲ್ಯಾಂಡ್‌ನ ವಾಣಿಜ್ಯ ಕೇಂದ್ರವಾದ ದಿಮಾಪುರ್‌ಗೆ ಸಾಗಿಸಬೇಕಿದ್ದ ಸುಮಾರು 18.72 ಲಕ್ಷ ರೂಪಾಯಿ ಮೌಲ್ಯದ 2880 ಕೆಜಿ ಅಡಿಕೆಯನ್ನುಯ ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ ಅಡಿಕೆ ಆಮದು ತಂಡ ಮತ್ತೆ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.
ವಿವಿಧ ಕಡೆಗಳಿಂದ ಕಂಟೈನರ್‌ಗಳಲ್ಲಿ ಬೃಹತ್ ಪ್ರಮಾಣದಲ್ಲಿ ಅಡಿಕೆಯನ್ನು ಭಾರತಕ್ಕೆ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಡಿಆರ್ ಐ ಕಾರ್ಯಾಚರಣೆ ನಡೆಸಿತ್ತು. ಬಾರ್ಲಿ, ಪ್ರಾಣಿ ಆಹಾರ ಎಂದು ತಪ್ಪಾಗಿ ನಮೂದಿಸಿ ಅಡಿಕೆ ಸಾಗಾಣಿಕೆ ಮಾಡಲಾಗುತ್ತಿತ್ತು. ಟ್ಯುಟಿಕೋರಿನ್ ಮತ್ತು ಚೆನ್ನೈ ಬಂದರಿನ ಮೂಲಕ ಒಟ್ಟು ಐದು ಕಂಟೈನರ್‌ಗಳನ್ನು ತಡೆಹಿಡಿದು ತನಿಖೆ ನಡೆಸುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಒಟ್ಟು 114.372 ಮೆಟ್ರಿಕ್ ಟನ್‌ಗಳಷ್ಟು ಕಳ್ಳಸಾಗಣೆ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಾ 5 ಕಂಟೈನರ್‌ಗಳ ಆಮದು ಚೆನ್ನೈ ಮೂಲದ ವ್ಯಕ್ತಿಯಿಂದ ಮಾಡಲ್ಪಟ್ಟಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಹಿಂದೆ ಡಿಆರ್‌ಐಯು ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ 232.349 ಮೆಟ್ರಿಕ್ ಟನ್ ಅಡಿಕೆಯನ್ನು ವಶಪಡಿಸಿಕೊಂಡಿದೆ. 2022-23ರಲ್ಲಿ 143 ಕೋಟಿ ಮೌಲ್ಯದ ಸುಮಾರು 3670.19 ಮೆ.ಟನ್ ಅಡಿಕೆಯನ್ನು ಡಿಆರ್‌ಐನ ವಿವಿಧ ಘಟಕಗಳು ವಶಪಡಿಸಿಕೊಂಡಿವೆ.
ಇದೇ ವೇಳೆ ಮಣಿಪುರದ ಸೇನಾಪತಿ ಜಿಲ್ಲೆಯಿಂದ ನಾಗಾಲ್ಯಾಂಡ್‌ನ ವಾಣಿಜ್ಯ ಕೇಂದ್ರವಾದ ದಿಮಾಪುರ್‌ಗೆ ಸಾಗಿಸಬೇಕಿದ್ದ ಸುಮಾರು 18.72 ಲಕ್ಷ ರೂಪಾಯಿ ಮೌಲ್ಯದ 2880 ಕೆಜಿ ಅಡಿಕೆಯ ಅಕ್ರಮ ಸಾಗಣೆಯನ್ನು ಅಸ್ಸಾಂ ರೈಫಲ್ಸ್ ಪತ್ತೆ ಮಾಡಿದೆ. ಅಸ್ಸಾಂ ಗಡಿ ತಲುಪಿದ ಬಳಿಕ ತಲೆ ಹೊರೆ ಹಾಗೂ ಸಣ್ಣ ವಾಹನಗಳ ಮೂಲಕ ಭಾರತದ ಮಾರುಕಟ್ಟೆಗೆ ಅಡಿಕೆ ಸಾಗಾಟ ಮಾಡಲಾಗುತ್ತಿತ್ತು, ಈ ಪ್ರಕರಣವನ್ನು ಅಸ್ಸಾಂ ರೈಫಲ್ಸ್ ಪತ್ತೆ ಮಾಡಿದೆ. ಜನವರಿ 12 ರಂದು ಮಣಿಪುರದಲ್ಲಿ ಸುಮಾರು 66.30 ಲಕ್ಷ ರೂಪಾಯಿ ಮೌಲ್ಯದ 5 ಟ್ರಕ್‌ಗಳ ಅಡಿಕೆ ವಶಪಡಿಸಿಕೊಳ್ಳುವುದರೊಂದಿಗೆ 10 ಜನರನ್ನು ವಶಕ್ಕೆ ತೆಗೆದುಕೊಂಡಿತ್ತು. ಇದೀಗ ಮತ್ತೆ ನಡೆಸಿದ ಕಾರ್ಯಾಚರಣೆಯಲ್ಲಿ 2880 ಕೆಜಿ ಅಡಿಕೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.