ಡ್ರೈಫ್ರುಟ್ಸ್ ಹೆಸರಿನಲ್ಲಿ ಅಡಿಕೆ ಕಳ್ಳಸಾಗಾಣಿಕೆ ಮತ್ತೆ ಬೆಳೆಕಿಗೆ ಬಂದಿದೆ. ತಮಿಳುನಾಡಿನ ಟ್ಯುಟಿಕೋರಿನ್ ಬಂದರಿಗೆ ಆಗಮಿಸಿದ ಕಂಟೈನರ್‌ನಲ್ಲಿ ಗೋಡಂಬಿಯೊಂದಿಗೆ 23.17 ಮೆಟ್ರಿಕ್ ಟನ್ ಅಡಿಕೆ ಇರುವುದು ಬೆಳಕಿಗೆ ಬಂದಿದೆ. ಡಿಆರ್‌ಐ ಇದನ್ನು ಪತ್ತೆ ಮಾಡಿದ್ದು ತನಿಖೆ ನಡೆಸುತ್ತಿದೆ.
Advertisement
ಈ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿ ತಿಂಗಳಲ್ಲಿ ಡಿಆರ್‌ಐ 83.352 ಮೆಟ್ರಿಕ್ ಟನ್ ಅಡಿಕೆಯನ್ನು ವಶಪಡಿಸಿಕೊಂಡಿದೆ. ಸಂಬಂಧಿತ ಆಮದು ದಾಖಲೆಗಳಲ್ಲಿ ಬೇಸ್ ಆಯಿಲ್ ಎಂದು ಘೋಷಿಸಿ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ 5.71 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ ಪಡೆದಿದ್ದರು. ಆ ಬಳಿಕವೂ ಡ್ರೈಫ್ರುಟ್ ಹಾಗೂ ಇತರ ಹೆಸರಿನ ಮೂಲಕ ವಿವಿಧ ದೇಶಗಳಿಂದ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement