ನೀರು(Water) ಜೀವ ಜಲ. ಈಗಲೇ ಎಚ್ಚರವಾಗಿ, ಹಲವು ಕಡೆ ನೀರಿಗೆ ಹಾಹಾಕಾರವೆದ್ದಿದೆ(Water Crisis). ಕೆಲವು ಕಡೆ ನೀರಿಲ್ಲದೆ ಪರದಾಟ ಶುರುವಾಗಿದೆ. ನೀರಿನ ಮೂಲ(Water source) ಮಾರ್ಚ್ ಮೊದಲರ್ಧದಲ್ಲೇ ಈ ಬಾರಿ ಬರಿದಾಗಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಬೆಂಗಳೂರಿಗೆ(Bengaluru) ನೀರುಣಿಸುವ KRS ಕೂಡಾ ಬರಿದಾಗಲಿದೆ. ಪ್ರಕೃತಿ ಮುನಿಸಿಕೊಂಡು ಮಳೆಯ(Rain) ಕೃಪೆ ತೋರದೇ ಇದ್ದರೆ ಜೀವನದ ಸಂಕಷ್ಟ ಹೇಳತೀರದಂತಾಗಲಿದೆ, ಕುಡಿಯುವ ನೀರಿಗೂ(Drinking water) ಸಂಕಷ್ಟ ಎದುರಾಗಲಿದೆ. ಗುಳೇ(Migration) ಹೋಗುವ ಪರಿಸ್ಥಿತಿ ಬಂದರೂ ಬರಬಹುದು. ಇದಕ್ಕಾಗಿ ಈಗಲೇ ಎಚ್ಚರವಾಗಿ ನೀರಿನ ಬಗ್ಗೆ ಇರಲಿ ಎಚ್ಚರ.
ಇದು ಎಚ್ಚರಿಕೆ ಕರೆಗಂಟೆ, ಪ್ರತಿಯೊಬ್ಬರೂ ನೀರಿನ ಮಿತಬಳಕೆ ಬಗ್ಗೆ ಯೋಚಿಸಿ, ತಮ್ಮ ತಮ್ಮ ಮನೆ, ಅಪಾರ್ಟ್ಮೆಂಟ್ನಲ್ಲಿ ನೀರುಳಿಸುವ ಪ್ರಯತ್ನ ಪಡಬೇಕಾದ ಅತ್ಯವಶ್ಯಕತೆ ಇದೆ.ಕೃಷಿಯಲ್ಲೂ ಯಥೇಚ್ಛವಾಗಿ ನೀರು ಬಳಕೆ ಮಾಡಬೇಡಿ. ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟನ್ನು ಬಳಕೆ ಮಾಡಿ. ಕೊಳವೆಬಾವಿಯಿಂದ ಬೇಕಾಬಿಟ್ಟಿಯಾಗಿ ನೀರೆತ್ತಬೇಡಿ, ಉಚಿತ ವಿದ್ಯುತ್ ನೆಪದಲ್ಲಿ ಕೊಳವೆಬಾವಿಯನ್ನೇ ಬರಿದು ಮಾಡಬೇಡಿ. ಈ ಪರಿಸರ, ಸಮಾಜದ ಮೇಲೂ ಕಾಳಜಿ ಇರಲಿ. ನೀರು ಉಳಿಸಲು ಈಗ ಹೀಗೆ ಮಾಡಿ…
ಎಚ್ಚರಿಕೆಗಳು ಹೀಗೆ ಇರಲಿ:
- ನೀರನ್ನು ಆದಷ್ಟು ಮರುಬಳಕೆ ಮಾಡಿ.
- ಕುಡಿಯಲು ಹಾಹಾಕಾರ ಇರುವ ಸಂದರ್ಭದಲ್ಲಿ, ವಾಹನಗಳನ್ನು ತೊಳೆಯುವ ನೀರನ್ನು ಉಳಿಸಿ-ತೊಳೆಯದೇ ಇದ್ದರೂ ಪರವಾಗಿಲ್ಲ.
- ಟಾಯ್ಲೆಟ್ ಫ್ಲಶ್ ಮಾಡುವಾಗ ಎಚ್ಚರ ವಹಿಸಿ, ಮಿತ ಬಳಕೆ ಮಾಡಿ!.
- ಕಡಿಮೆ ನೀರಿನಲ್ಲಿ ಸ್ನಾನ ಮುಗಿಸಿ, ನೀರು ಉಳಿಸಿ. ಸ್ನಾನಕ್ಕೆ ಬಕೆಟ್ ಬಳಸಿ.
- ಶವರ್ ಬಳಕೆ ಕಡ್ಡಾಯ ನಿಲ್ಲಿಸಿ.
- ಟೆರೇಸ್ ಗಾರ್ಡನ್, ನಿಮ್ಮ ಅಪಾರ್ಟ್ಮೆಂಟ್ ಗಿಡಗಳ ನೀರುಣಿಸುವಿಕೆ ಮಿತಗೊಳಿಸಿ, ಪೋಲಾಗುವುದನ್ನು ತಪ್ಪಿಸಿ. ಪಾತ್ರೆ ತೊಳೆದ ನೀರನ್ನು ಗಿಡಗಳಿಗೆ ಬಳಸಿ.
- ಬ್ರಶ್ ಮತ್ತು ಶೇವ್ ಮಾಡುವಾಗ ನಲ್ಲಿಯನ್ನು ತೆರೆದಿಡಬೇಡಿ.
- ಕುಡಿಯುವ ನೀರಿನ ಬಾಟಲಿಗಳಲ್ಲಿ ಅರ್ಧ ನೀರು ಪೋಲು ಮಾಡಿ ಬಿಸಾಕಬೇಡಿ.
- ನಲ್ಲಿಯ ಲೀಕೇಜ್ ಗಳನ್ನು ಕೂಡಲೆ ಸರಿಪಡಿಸಿ.
- ನೀರು ಬಂಗಾರಕ್ಕಿಂತ ಸಾವಿರ ಪಾಲು ಮಿಗಿಲು. ನಿಮ್ಮ ಒಡವೆಗಳಿಗೆ ಕೊಡುವ ಗಮನ ನೀರಿಗೂ ಕೊಡಿ.
- ಮಕ್ಕಳು ನೀರು ಪೋಲುಮಾಡದಂತೆ, ಓವರ್ ಟ್ಯಾಂಕ್ ಗಳು ತುಂಬಿ ಹರಿಯದಂತೆ ಎಚ್ಚರ ವಹಿಸಿ. ನಾನೊಬ್ಬ ಮಿತ ಬಳಕೆ ಮಾಡಿದರಾಯಿತೆ ಎಂಬ ವಿತಂಡವಾದ ಬೇಡ. ಎಲ್ಲ ಬೆಂಗಳೂರಿಗರು ತಲೆಗೊಬ್ಬರಂತೆ ದಿನಕ್ಕೆ 2.5 ಲೀಟರ್ ನೀರು ಉಳಿಸಿದರೆ, 22 ದಿನಗಳಲ್ಲಿ ಒಂದು ಅಲಸೂರು ಕೆರೆಯನ್ನು ತುಂಬಿಸಬಲ್ಲುದು! ಯೋಚಿಸಿ, ನೀರು ಉಳಿಸಿ
- ಕೃಷಿಕರೂ ಅಷ್ಟೇ, ಕೊಳವೆಬಾವಿಯಿಂದ ದಿನಕ್ಕೆ ಅಗತ್ಯವಾದರೆ ಮಾತ್ರಾ ತೋಟಕ್ಕೆ ನೀರುಣಿಸಿ
- ಕೆರೆ, ಹೊಳೆಗಳು ಇದ್ದರೆ ಅದರಿಂದಲೇ ನೀರನ್ನು ಬಳಕೆ ಮಾಡಿ
- ಅಂತರ್ಜಲಮಟ್ಟ ಕಾಪಾಡಿಕೊಂಡರೆ ಕೆರೆ, ಬಾವಿಗಳಲ್ಲೂ ನೀರು ಉಳಿಯಲು ಸಾಧ್ಯವಿದೆ.
- ತೋಟಗಳಿಗೆ ಅಗತ್ಯಕ್ಕೆ ತಕ್ಕಷ್ಟೇ ಈಗ ನೀರು ಬಳಕೆ ಮಾಡಲು ಅಭ್ಯಾಸ ಮಾಡಿರಿ.