ಬೇಸಗೆಯ ಕಾವು ಹೆಚ್ಚಾಯ್ತು | ನೀರಿನ ಬಗ್ಗೆ ಇರಲಿ ಎಚ್ಚರ | ಕುಡಿಯುವ ನೀರಿಗೂ ತತ್ತ್ವಾರ ಬಂದಿದೆ ಎಚ್ಚರವಾಗಿ..!!

March 21, 2024
7:59 AM
ನೀರಿನ ಬಳಕೆಯಲ್ಲಿ ಇರಲಿ ಎಚ್ಚರ.

ನೀರು(Water) ಜೀವ ಜಲ. ಈಗಲೇ ಎಚ್ಚರವಾಗಿ, ಹಲವು ಕಡೆ ನೀರಿಗೆ ಹಾಹಾಕಾರವೆದ್ದಿದೆ(Water Crisis). ಕೆಲವು ಕಡೆ ನೀರಿಲ್ಲದೆ ಪರದಾಟ ಶುರುವಾಗಿದೆ. ನೀರಿನ ಮೂಲ(Water source) ಮಾರ್ಚ್ ಮೊದಲರ್ಧದಲ್ಲೇ ಈ ಬಾರಿ ಬರಿದಾಗಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಬೆಂಗಳೂರಿಗೆ(Bengaluru) ನೀರುಣಿಸುವ KRS ಕೂಡಾ ಬರಿದಾಗಲಿದೆ. ಪ್ರಕೃತಿ ಮುನಿಸಿಕೊಂಡು ಮಳೆಯ(Rain) ಕೃಪೆ ತೋರದೇ ಇದ್ದರೆ ಜೀವನದ ಸಂಕಷ್ಟ ಹೇಳತೀರದಂತಾಗಲಿದೆ, ಕುಡಿಯುವ ನೀರಿಗೂ(Drinking water) ಸಂಕಷ್ಟ ಎದುರಾಗಲಿದೆ. ಗುಳೇ(Migration) ಹೋಗುವ ಪರಿಸ್ಥಿತಿ ಬಂದರೂ ಬರಬಹುದು. ಇದಕ್ಕಾಗಿ ಈಗಲೇ ಎಚ್ಚರವಾಗಿ ನೀರಿನ ಬಗ್ಗೆ ಇರಲಿ ಎಚ್ಚರ.

Advertisement
Advertisement

ಇದು ಎಚ್ಚರಿಕೆ ಕರೆಗಂಟೆ, ಪ್ರತಿಯೊಬ್ಬರೂ ನೀರಿನ ಮಿತಬಳಕೆ ಬಗ್ಗೆ ಯೋಚಿಸಿ, ತಮ್ಮ ತಮ್ಮ ಮನೆ, ಅಪಾರ್ಟ್ಮೆಂಟ್ನಲ್ಲಿ ನೀರುಳಿಸುವ ಪ್ರಯತ್ನ ಪಡಬೇಕಾದ ಅತ್ಯವಶ್ಯಕತೆ ಇದೆ.ಕೃಷಿಯಲ್ಲೂ ಯಥೇಚ್ಛವಾಗಿ ನೀರು ಬಳಕೆ ಮಾಡಬೇಡಿ. ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟನ್ನು ಬಳಕೆ ಮಾಡಿ. ಕೊಳವೆಬಾವಿಯಿಂದ ಬೇಕಾಬಿಟ್ಟಿಯಾಗಿ ನೀರೆತ್ತಬೇಡಿ, ಉಚಿತ ವಿದ್ಯುತ್‌ ನೆಪದಲ್ಲಿ ಕೊಳವೆಬಾವಿಯನ್ನೇ ಬರಿದು ಮಾಡಬೇಡಿ. ಈ ಪರಿಸರ, ಸಮಾಜದ ಮೇಲೂ ಕಾಳಜಿ ಇರಲಿ. ನೀರು ಉಳಿಸಲು ಈಗ ಹೀಗೆ ಮಾಡಿ…

Advertisement

ಎಚ್ಚರಿಕೆಗಳು ಹೀಗೆ ಇರಲಿ:

  •  ನೀರನ್ನು ಆದಷ್ಟು ಮರುಬಳಕೆ ಮಾಡಿ.
  • ಕುಡಿಯಲು ಹಾಹಾಕಾರ ಇರುವ ಸಂದರ್ಭದಲ್ಲಿ, ವಾಹನಗಳನ್ನು ತೊಳೆಯುವ ನೀರನ್ನು ಉಳಿಸಿ-ತೊಳೆಯದೇ ಇದ್ದರೂ ಪರವಾಗಿಲ್ಲ.
  •  ಟಾಯ್ಲೆಟ್ ಫ್ಲಶ್ ಮಾಡುವಾಗ ಎಚ್ಚರ ವಹಿಸಿ, ಮಿತ ಬಳಕೆ ಮಾಡಿ!.
  • ಕಡಿಮೆ ನೀರಿನಲ್ಲಿ ಸ್ನಾನ ಮುಗಿಸಿ, ನೀರು ಉಳಿಸಿ. ಸ್ನಾನಕ್ಕೆ ಬಕೆಟ್ ಬಳಸಿ.
  • ಶವರ್ ಬಳಕೆ ಕಡ್ಡಾಯ ನಿಲ್ಲಿಸಿ.
  • ಟೆರೇಸ್ ಗಾರ್ಡನ್, ನಿಮ್ಮ ಅಪಾರ್ಟ್ಮೆಂಟ್ ಗಿಡಗಳ ನೀರುಣಿಸುವಿಕೆ ಮಿತಗೊಳಿಸಿ, ಪೋಲಾಗುವುದನ್ನು ತಪ್ಪಿಸಿ. ಪಾತ್ರೆ ತೊಳೆದ ನೀರನ್ನು ಗಿಡಗಳಿಗೆ ಬಳಸಿ.
  • ಬ್ರಶ್ ಮತ್ತು ಶೇವ್ ಮಾಡುವಾಗ ನಲ್ಲಿಯನ್ನು ತೆರೆದಿಡಬೇಡಿ.
  • ಕುಡಿಯುವ ನೀರಿನ ಬಾಟಲಿಗಳಲ್ಲಿ ಅರ್ಧ ನೀರು ಪೋಲು ಮಾಡಿ ಬಿಸಾಕಬೇಡಿ.
  • ನಲ್ಲಿಯ ಲೀಕೇಜ್ ಗಳನ್ನು ಕೂಡಲೆ ಸರಿಪಡಿಸಿ.
  • ನೀರು ಬಂಗಾರಕ್ಕಿಂತ ಸಾವಿರ ಪಾಲು ಮಿಗಿಲು.‌ ನಿಮ್ಮ ಒಡವೆಗಳಿಗೆ ಕೊಡುವ ಗಮನ ನೀರಿಗೂ ಕೊಡಿ.
  • ಮಕ್ಕಳು ನೀರು ಪೋಲು‌ಮಾಡದಂತೆ, ಓವರ್ ಟ್ಯಾಂಕ್ ಗಳು ತುಂಬಿ ಹರಿಯದಂತೆ ಎಚ್ಚರ ವಹಿಸಿ. ನಾನೊಬ್ಬ ಮಿತ ಬಳಕೆ ಮಾಡಿದರಾಯಿತೆ ಎಂಬ ವಿತಂಡವಾದ ಬೇಡ. ಎಲ್ಲ ಬೆಂಗಳೂರಿಗರು ತಲೆಗೊಬ್ಬರಂತೆ ದಿನಕ್ಕೆ 2.5 ಲೀಟರ್ ನೀರು ಉಳಿಸಿದರೆ, 22 ದಿನಗಳಲ್ಲಿ ಒಂದು ಅಲಸೂರು ಕೆರೆಯನ್ನು ತುಂಬಿಸಬಲ್ಲುದು! ಯೋಚಿಸಿ, ನೀರು ಉಳಿಸಿ
  • ಕೃಷಿಕರೂ ಅಷ್ಟೇ, ಕೊಳವೆಬಾವಿಯಿಂದ ದಿನಕ್ಕೆ ಅಗತ್ಯವಾದರೆ ಮಾತ್ರಾ ತೋಟಕ್ಕೆ ನೀರುಣಿಸಿ
  • ಕೆರೆ, ಹೊಳೆಗಳು ಇದ್ದರೆ ಅದರಿಂದಲೇ ನೀರನ್ನು ಬಳಕೆ ಮಾಡಿ
  • ಅಂತರ್ಜಲಮಟ್ಟ ಕಾಪಾಡಿಕೊಂಡರೆ ಕೆರೆ, ಬಾವಿಗಳಲ್ಲೂ ನೀರು ಉಳಿಯಲು ಸಾಧ್ಯವಿದೆ.
  • ತೋಟಗಳಿಗೆ ಅಗತ್ಯಕ್ಕೆ ತಕ್ಕಷ್ಟೇ ಈಗ ನೀರು ಬಳಕೆ ಮಾಡಲು ಅಭ್ಯಾಸ ಮಾಡಿರಿ.
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Rain Alert: ದೇಶದಲ್ಲಿ ಹೆಚ್ಚುತ್ತಿದೆ ಹವಾಮಾನದಲ್ಲಿ ವೈಪರೀತ್ಯ : ಚಂಡಮಾರುತ, ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಮತ್ತು ಹಿಮಪಾತ ಮುನ್ಸೂಚನೆ : ದಕ್ಷಿಣದಲ್ಲಿ ಬಿಸಿ ಶಾಖ ಮುಂದುವರಿಕೆ
April 30, 2024
8:48 AM
by: The Rural Mirror ಸುದ್ದಿಜಾಲ
ಮೇ.2 | ಸಾಯಿನಿಕೇತನ ಸೇವಾಶ್ರಮದಲ್ಲಿ ಕಟ್ಟಡ ಉದ್ಘಾಟನೆ
April 29, 2024
11:12 PM
by: ದ ರೂರಲ್ ಮಿರರ್.ಕಾಂ
ಕೋವಿ ಠೇವಣಾತಿ | ಕೃಷಿ ರಕ್ಷಣೆಗಾಗಿ ಕೋವಿ ಹಿಂಪಡೆಯಲು ಆದೇಶ |
April 29, 2024
6:36 PM
by: ದ ರೂರಲ್ ಮಿರರ್.ಕಾಂ
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ | ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
April 29, 2024
5:50 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror