ಇನ್ನು ಪ್ರವೇಶಿಸದ ಮುಂಗಾರು | ಕರಾವಳಿ ಜಿಲ್ಲೆಯಲ್ಲಿ ನೀರಿನ ಅಭಾವ, ಶಾಲಾ-ಕಾಲೇಜುಗಳಿಗೆ ರಜೆ

June 7, 2023
11:59 AM

ಈ ಬಾರಿ ವರುಣ ಬಹಳ ವಿಳಂಬವಾಗಿ ಎಂಟ್ರಿ ಕೊಡುವ ಮುನ್ಸೂಚನೆ ಕಾಣಿಸುತ್ತಿದೆ. ಜೂನ್ 4 ಕ್ಕೆ ಕೇರಳಕ್ಕೆ ಪ್ರವೇಶವಾಗಬೇಕಿದ್ದ ಮುಂಗಾರು ಇನ್ನು ಪತ್ತೆಯಾಗಿಲ್ಲ. ಆದರೆ ಮುಂಗಾರು ಪೂರ್ವ ಮಳೆ ಕರಾವಳಿಯ ಕೆಲ ಭಾಗಗಳಲ್ಲಿ ಸುರಿದರು, ಸೆಕೆ ಹೆಚ್ಚಿಸಿದ್ದು ಬಿಟ್ಟರೆ ಹೆಚ್ಚಿನ ಪ್ರಯೋಜನವೇನು ಆಗಿಲ್ಲ. ಈಗ ರಾಜ್ಯಕ್ಕೆ ಮುಂಗಾರು ಆಗಮನ ವಿಳಂಬವಾದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಬವಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆ, ಕಚೇರಿ, ಶಾಲಾ-ಕಾಲೇಜುಗಳಲ್ಲಿ ನೀರಿನ ಕೊರತೆ ಉಂಟಾಗಿ ತೊಂದರೆಯಾಗಿದೆ.

Advertisement

ಇನ್ನು ಈಗಷ್ಟೇ ಶಾಲಾ-ಕಾಲೇಜುಗಳು ಆರಂಭವಾಗಿದ್ದು ನೀರಿನ ಕೊರತೆಯಿಂದ ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ನೀರಿನ ಸಮಸ್ಯೆ ಉದ್ಭವವಾದುದರಿಂದ ಜಿಲ್ಲೆಯ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿವೆ. ಇನ್ನು ಕೆಲವೆಡೆ ಶಿಕ್ಷಣ ಸಂಸ್ಥೆಗಳು ಅರ್ಧ ದಿನ ತರಗತಿ ನಡೆಸುತ್ತಿವೆ. ಕಾಲೇಜು ವಿದ್ಯರ್ಥಿಗಳಿಗೆ ಆನ್​ ಲೈನ್​ ಮೂಲಕ ಪಾಠಗಳನ್ನು ಮಾಡಲಾಗುತ್ತಿದೆ.

ವಿಶೇಷವಾಗಿ ಮಂಗಳೂರು ಉತ್ತರ ಹಾಗೂ ದಕ್ಷಿಣ ವಲಯದ ಶಾಲೆಗಳಿಗೂ ನೀರಿನ ಕೊರೆತೆ ಕಾಣಿಸಿಕೊಂಡಿದ್ದು, ಇಲಾಖೆಯ ಪ್ರಕಾರ ಮೂಲ್ಕಿ ಮೂರು ಶಾಲೆಗಳಿಗೆ ಮತ್ತು ವಿಟ್ಲದ ಒಂದು ಶಾಲೆಯಲ್ಲಿ ವಾರಕ್ಕೊಂದು ಬಾರಿ ಮಾತ್ರ ನೀರು ಪೂರೈಕೆಯಾಗುತ್ತಿದೆ. ಇದರಿಂದ ಮಕ್ಕಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಇನ್ನೊಂದಡೆ ಪಿಯುಸಿ ಹಾಗೂ ಪದವಿ ತರಗತಿಗಳು ಕೂಡ ಆರಂಭವಾಗಿದ್ದು, ಪ್ರಮುಖ ಹಾಸ್ಟೆಲ್‌ಗಳಲ್ಲಿ ನೀರಿನ ಸಮಸ್ಯೆಗಳು ಕಾಣಿಸಿಕೊಂಡಿದೆ. ನಗರದ ಪ್ರಮುಖ ವಿದ್ಯಾಸಂಸ್ಥೆಯಲ್ಲಿ ದಿನವೊಂದಕ್ಕೆ 10 ಟ್ಯಾಂಕರ್‌ ನೀರನ್ನು ಪೂರೈಕೆ ಮಾಡಿಕೊಂಡು ಪರಿಸ್ಥಿತಿ ಸುಧಾರಣೆ ಮಾಡುವ ಕಾರ‍್ಯವಾಗುತ್ತಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು
April 10, 2025
9:58 AM
by: The Rural Mirror ಸುದ್ದಿಜಾಲ
ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |
April 10, 2025
8:13 AM
by: ದ ರೂರಲ್ ಮಿರರ್.ಕಾಂ
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ
April 10, 2025
7:46 AM
by: ದ ರೂರಲ್ ಮಿರರ್.ಕಾಂ
ರೆಪೋ ದರದಲ್ಲಿ ಶೇಕಡ  0.25ರಷ್ಟು  ಕಡಿತ | ಶೇಕಡ 6.25ರಿಂದ ಶೇಕಡ 6ಕ್ಕೆ  ಇಳಿಕೆ
April 10, 2025
7:35 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group