The Rural Mirror ವಾರದ ವಿಶೇಷ

ಯೋಚನೆಯೇ ಇಲ್ಲದ ಯೋಜನೆ ..! : 7 ವರ್ಷವಾದರೂ ಟ್ಯಾಂಕ್‌ ಗೆ ನೀರು ಬರುತ್ತಿಲ್ಲ…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

Advertisement

ಯಾವುದೇ ಯೋಜನೆ ತಯಾರು ಮಾಡುವ ಮುನ್ನ ಲೆಕ್ಕಾಚಾರ ನಡೆಯುತ್ತದೆ. ಅಂತಹ ಯೋಚನೆಯೇ ಇಲ್ಲದೆ ತಯಾರಾದ ಯೋಜನೆಗಳು ಏನಾಗುತ್ತವೆ ? ಮತ್ತಿನ್ನೇನು ಹಳ್ಳ ಹಡಿಯುತ್ತವೆ. ಅದಕ್ಕೊಂದು ಉದಾಹರಣೆ ಸುಳ್ಯ ತಾಲೂಕಿನ ಪಂಜದ ಬಳಿಯ ಅಳ್ಪೆ ಸಿಂಗಾಣಿ ಗುಡ್ಡೆಯ ನೀರಿನ ಟ್ಯಾಂಕ್.‌ 7 ವರ್ಷಗಳ ಹಿಂದೆ ರಚನೆಯಾದ ನೀರಿನ ಟ್ಯಾಂಕ್‌ ಗೆ ಇಂದಿಗೂ ನೀರು ಬಂದಿಲ್ಲ..!. 

ಸುಳ್ಯ ತಾಲೂಕಿನ ಪಂಜ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ  ಬರುವ ಅಳ್ಪೆ ಸಿಂಗಾಣಿ ಗುಡ್ಡೆಯಲ್ಲಿ  ನೀರಿನ ಸಮಸ್ಯೆ ಇತ್ತು. ಇದಕ್ಕಾಗಿ ಜಿಲ್ಲಾ ಪಂಚಾಯತ್‌ ಯೋಜನೆಯ ಮೂಲಕ ವಿಶ್ವ ಬ್ಯಾಂಕ್‌ ಯೋಜನೆಯಲ್ಲಿ  ನೀರಿನ ಟ್ಯಾಂಕ್‌ ರಚನೆ ಮಾಡಲಾಯಿತು. ಬಹುಗ್ರಾಮ ಕುಡಿಯುವ ನೀರು ಎಂಬ ಯೋಜನೆಯ ಅಡಿಯಲ್ಲಿ  ಬೃಹತ್‌ ಟ್ಯಾಂಕ್‌ ನಿರ್ಮಾಣವಾಗಿ  7  ವರ್ಷ ಕಳೆಯಿತು. ಇಂದಿಗೂ ಟ್ಯಾಂಕ್‌ ಗೆ ನೀರು ಬಂದಿಲ್ಲ, ಆಸುಪಾಸಿನ ಜನರಿಗೆ ನೀರಿನ ಭಾಗ್ಯವೇ ದಕ್ಕಿಲ್ಲ. ಅಂದ ಹಾಗೆ ಈ ಯೋಜನೆಗೆ ಸುಮಾರು  4.5 ಕಿಮೀ ದೂರದ ಕುಮಾರಧಾರಾ ನದಿಯಿಂದ 10 ಎಚ್‌ ಪಿ ಪಂಪ್‌ ಮೂಲಕ ನೀರು ಹಾಯಿಸಿ ಜನರಿಗೆ ನೀರು ನೀಡುವ ಯೋಜನೆ ಇದಾಗಿತ್ತು. ಆದರೆ ಯಾವುದೂ ಕೈಗೂಡಲಿಲ್ಲ.ಹಲವು ಬಾರಿ ಪ್ರಯತ್ನ ಮಾಡಿದರೂ ವಿಫಲವಾಗಿತ್ತು. ಕಾರಣ ಟ್ಯಾಂಕ್‌ ಗೆ ನೀರು ಬರುವುದಿಲ್ಲ…!. ಒಂದು ಯೋಜನೆ ಮಾಡುವ ವೇಳೆ ಇಂಜಿನಿಯರ್‌ ಇದ್ದು ಲೆಕ್ಕಾಚಾರ ನಡೆಯುತ್ತದೆ . ನೀರು ಟ್ಯಾಂಕ್ ಗೆ ಬರಬಹುದೇ ? ಬರದೇ ಇದ್ದರೆ ಏನು ವ್ಯವಸ್ಥೆ ಇತ್ಯಾದಿ. ಆದರೆ ಕೋಟಿ ಅನುದಾನ ಬಂದ ಕೂಡಲೇ ಟ್ಯಾಂಕ್‌ ರಚನೆಯಾಗಿ ಕುಳಿತಿದೆ, 7  ವರ್ಷ ಕಳೆಯುವ ಹೊತ್ತಿಗೆ ಟ್ಯಾಂಕ್‌ನಲ್ಲಿ ನೀರಿಲ್ಲದೆ ಟ್ಯಾಂಕ್‌ ಒಡೆಯಲು ಆರಂಭವಾಗಿದೆ. ಈಗ ನಷ್ಟ ಯಾರಿಗೆ ? ಹಣ ಎಲ್ಲಿಂದ ? ಈ ಪ್ರಶ್ನೆ ಕೇಳುವವರು ಯಾರು ? .

ಇದಕ್ಕಾಗಿಯೇ ಕಳೆದ ಬಾರಿ ಗ್ರಾ ಪಂ ಚುನಾವಣೆಯ ಸಂದರ್ಭ ಮತಬಹಿಷ್ಕಾರದ ಬದಲು ಸಾರ್ವಜನಿಕರೇ ಚುನಾವಣೆಗೂ ಸ್ಫರ್ಧೆ ಮಾಡಿದ್ದರು.  ಹೀಗಾದರೂ ಆಡಳಿತ ಪಕ್ಷಗಳು, ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡುತ್ತಿಲ್ಲ, ಸಮಸ್ಯೆ ಪರಿಹಾರದ ಕಡೆಗೆ ಮುಖ ಮಾಡುತ್ತಿಲ್ಲ.  ಪ್ರತಿಷ್ಟೆ ಹಾಗೂ ಚುನಾವಣೆಗೆ ಸ್ಫರ್ಧೆ ಮಾಡಿದವರೇ ಮಾಡಲಿ ಎನ್ನುವ ಅಹಂಭಾವವೇ ಹೆಚ್ಚಾಗುತ್ತಿದೆ ಎನ್ನುವ ಮಾತುಗಳು ಈಗ ಚರ್ಚೆಯಾಗುತ್ತಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅರ್ಧಕೇಂದ್ರ ಯೋಗದಿಂದ ಈ 3 ರಾಶಿಗೆ ಯಶಸ್ಸು | ಕೋಟ್ಯಾಧಿಪತಿ ಯೋಗ!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490

2 hours ago

ಹೊಸರುಚಿ | ಗುಜ್ಜೆ ಮೊಸರು ಗೊಜ್ಜು

ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು :  ಗುಜ್ಜೆ 1 ಕಪ್ ಬೇಯಿಸಿ…

3 hours ago

ಜಮ್ಮು- ಕಾಶ್ಮೀರ | ಪ್ರವಾಸಿಗರ ಮೇಲೆ ಉಗ್ರರ ದಾಳಿ | ಉಗ್ರರ ದಾಳಿಗೆ ಕನ್ನಡಿಗ ಸೇರಿ 20 ಕ್ಕೂ ಹೆಚ್ಚು ಜನರು ಬಲಿ

ಜಮ್ಮು- ಕಾಶ್ಮೀರದ  ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ  ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…

13 hours ago

ಹವಾಮಾನ ವರದಿ | 22.04.2025 | ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆ | ಎ.26ರಿಂದ ಮಳೆ ಹೆಚ್ಚಾಗುವ ನಿರೀಕ್ಷೆ

23.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

17 hours ago

ಭಾರತದ ತೋಟಗಾರಿಕಾ ಹಣ್ಣಿನ ಬೆಳೆಗಳತ್ತ ಚಿತ್ತ | ಜಾಗತಿಕ ಮಾರುಕಟ್ಟೆಗೆ ಭಾರತೀಯ ತಾಜಾ ಹಣ್ಣುಗಳ ಪರಿಚಯ |

ಮಹಾರಾಷ್ಟ್ರದ ಅಹಲ್ಯಾನಗರದಿಂದ ಅಮೆರಿಕದ ನ್ಯೂಯಾರ್ಕ್‌ಗೆ 14 ಟನ್‌ಗಳಷ್ಟು ಭಾರತೀಯ ದಾಳಿಂಬೆಯನ್ನು ರಫ್ತು ಮಾಡಲಾಗಿದೆ.…

1 day ago

ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಕುರಿತು ಹೆಚ್ಚು ತಿಳುವಳಿಕೆ ನೀಡಬೇಕಾದ ಅಗತ್ಯವಿದೆ

ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಮತ್ತು ಪ್ಲಾಸ್ಟಿಕ್ ಬಳಕೆ ಕುರಿತು ಹೆಚ್ಚು ತಿಳುವಳಿಕೆ…

1 day ago