ಬಿಸಿಲ ಬೇಗೆಗೆ ಬಸವಳಿದ ವನ್ಯ ಜೀವಿಗಳು| ಪ್ರಾಣಿ-ಪಕ್ಷಿಗಳಿಗಾಗಿ ನೀರಿನ ತೊಟ್ಟಿ ನಿರ್ಮಿಸಿದ ಯುವಕರು | ಯುವಕರಿಂದ ಮಾದರಿ ಕೆಲಸ

May 30, 2023
9:15 PM

ಬಿಸಿಲ ಬೇಗೆಗೆ ವನ್ಯ ಜೀವಿಗಳು ಪರಿತಪಿಸುತ್ತಿವೆ. ಬಿಸಿಲ ನಾಡು ಬೀದರ್, ಗುಲ್ಬಾರ್ಗಾ, ಯಾದಗಿರಿ, ಬಿಜಾಪುರ ಜಿಲ್ಲೆಗಳಲ್ಲಿ ಈವರೆಗೆ ಮಳೆಯಾಗಿಲ್ಲ. ಜನತೆ ಹೇಗೂ ಮಾಡಿ ಅಲ್ಲಿ ಇಲ್ಲಿ ಹುಡುಕಿ ನೀರು ತಂದು ಜೀವಿಸುತ್ತಾರೆ. ಆದರೆ ಕಾಡು ಪ್ರಾಣಿಗಳ ಕಥೆ ಹೇಳತೀರದು. ಪ್ರಾಣಿಗಳ ವಾಸ ಸ್ಥಾನಕ್ಕೆ ಸಂಚಕಾರ ತಂದ ಮನುಜನೇ ಇದಕ್ಕೆ ಪರಿಹಾರ ಒದಗಿಸಬೇಕು.  ಬೀದರ್ ನ ಕೆಲ ಯುವಕರ ತಂಡ ಇಂತಹ ಒಳ್ಳೆ ಕೆಲಸಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.

Advertisement

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಬಿಸಿಲ ಆರ್ಭಟ  ಜಾಸ್ತಿ ಏರುತ್ತಲೇ ಇದೆ.  ಈ ಬಿಸಿಲಿನ ಬೇಗೆಗೆ ಕೇವಲ ಜನ ಮಾತ್ರವಲ್ಲ ಪ್ರಾಣೀ-ಪಕ್ಷಿಗಳು ಸಹ ಇದರಿಂದ ಸಮಸ್ಯೆ ಅನುಭವಿಸುತ್ತಿವೆ. ಅದರಲ್ಲೂ ಗಡಿ ನಾಡಿನ ಜಿಲ್ಲೆಗಳಲ್ಲಿ ಜನ ಹಾಗೂ ಜಾನುವಾರುಗಳು ಪರದಾಡುತ್ತಿವೆ.

ಗಡಿಜಿಲ್ಲೆ ಬೀದರ್‌ನಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಜನರಂತೂ ಯಾವಾಗ ಈ ಬೇಸಿಗೆ ಮುಗಿಯುತ್ತದೆ ಎಂದು  ಕಾದು ಕುಳಿತಿದ್ದಾರೆ.  ಹಾಗೆಯೇ, ಅವರು ತಮ್ಮ ಕೈಲಾದಷ್ಟು ಬೇಸಿಗೆಯ ಬೇಗಿಯಿಂದ ತಪ್ಪಿಸಿಕೊಳ್ಳಲು ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಪ್ರಾಣಿ-ಪಕ್ಷಿಗಳೇನು ಮಾಡಲು ಸಾಧ್ಯ?.

ಪ್ರಾಣಿ-ಪಕ್ಷಿಗಳು ಕಾಡಿನಲ್ಲಿ ಸಂಚಾರ ಮಾಡುವಾಗ ನೀರಿನ ಸಮಸ್ಯೆ ಆಗಬಾರದು ಎಂಬ ಉತ್ತಮ ಉದ್ದೇಶದೊಂದಿಗೆ ಈ ಕೆಲಸವನ್ನು ಮಾಡಿದ್ದು, ಜಿಲ್ಲೆಯ ಶಹಾಪುರ, ಅಮಲಾಪುರ, ನಾಗೂರ, ನಿರ್ಣಾ ಗ್ರಾಮದ ಬಳಿ‌ ಇರುವ ಮೀಸಲು ಅರಣ್ಯ ಪ್ರದೇಶದಲ್ಲಿ ತೊಟ್ಟಿ ನಿರ್ಮಾಣ ಮಾಡಲಾಗಿದೆ.

ಈ ತಂಡದ ಯುವಕರ ಪ್ರಕಾರ ಈ ಕಾಡಿನಲ್ಲಿ ಕೋತಿ, ಜಿಂಕೆ, ನವಿಲು, ಹಾವು, ಮುಂಗುಸಿ ಸೇರಿದಂತೆ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳು ಇರುತ್ತವೆ. ಬೇಸಿಗೆಯಲ್ಲಿ ಅವುಗಳು ನೀರಿನ ಸಮಸ್ಯೆಯನ್ನು ಅನುಭವಿಸುತ್ತವೆ. ಅವುಗಳ ಈ ಸಮಸ್ಯೆ ಹೋಗಲಾಡಿಸುವುದು ನಮ್ಮ ಕರ್ತವ್ಯ. ಹಾಗಾಗಿ ಪ್ರತಿನಿತ್ಯ ತೊಟ್ಟಿಗೆ ನೀರು ಹಾಕುತ್ತಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |
April 16, 2025
8:14 AM
by: The Rural Mirror ಸುದ್ದಿಜಾಲ
ಹೊಸರುಚಿ| ಗುಜ್ಜೆ ರೋಲ್
April 16, 2025
8:00 AM
by: ದಿವ್ಯ ಮಹೇಶ್
ಅಮರನಾಥ ಯಾತ್ರೆಗೆ ನೋಂದಣಿ ಪ್ರಕ್ರಿಯೆ ಆರಂಭ | ಜೂನ್‌ 29 ರಿಂದ ಯಾತ್ರೆ ಆರಂಭ |
April 16, 2025
7:52 AM
by: The Rural Mirror ಸುದ್ದಿಜಾಲ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವದಿ ಲಾರಿ ಮುಷ್ಕರ | ಸಂಧಾನ ಮಾತುಕತೆಯೂ ವಿಫಲ |
April 16, 2025
7:46 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group