ಕೊಟ್ಟಿಗೆಯಲ್ಲಿ(Cow Shed) ಏನೇ ಸಮಸ್ಯೆ ಬಂದರೂ ನನ್ನನ್ನೇ ಸಂಪರ್ಕಿಸುತ್ತಿದ್ದ ಕೃಷಿಕ ಮಿತ್ರರೊಬ್ಬರು ಒಂದಿನ ಬೆಳಿಗ್ಗೆ ಆಕಳಿನ(Cow) ವೀಡಿಯೊವನ್ನು ನನ್ನ ಮೊಬೈಲ್ ಗೆ ಕಳಿಸಿದ್ದರು. ಆತಂಕದಿಂದ ಫೋನ್ ಮಾಡಿ ತಕ್ಷಣ ಬರುವಂತೆ ಒತ್ತಾಯಿಸಿದರು. ಅವರ ಗಾಬರಿ ಏನೆಂದರೆ, ಕೆಚ್ಚಲಿನಿಂದ(udder) ಹಾಲು(Milk), ಕೀವು ಮತ್ತು ರಕ್ತ(Blood) ಬರುವುದನ್ನು ನೋಡಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಕೆಚ್ಚಲಿನಿಂದ ನೀರಿನಂತೆ ತೆಳ್ಳಗಿನ ದ್ರವ ನಿರಂತರವಾಗಿ ತೊಟ್ಟಿಕ್ಕುತ್ತಿದೆ ಎಂದು ಭಯದಿಂದ ವಿವರಿಸಿದ್ದರು.
ಟಾರ್ಚ ಬೆಳಕಿನಿಂದ ಸರಿಯಾಗಿ ನೋಡಿದಾಗ ಕೆಚ್ಚಲಿನ ಮೇಲೆ ಎರಡು ಗಾಯದ ಗುರುತುಗಳು ಕಂಡಿದೆ. ಒಂದು ಗಾಯ ಸ್ವಲ್ಪ ಆಳವಾಗಿದ್ದು ಅದರಿಂದ ನೀರಿನಂತಹ ದ್ರವ ಹೊರಗೆ ಬರುತ್ತಿದೆ. ಆಕಳಿನ ವಿವರ ಪಡೆದ ನಂತರ, ಹೋಮಿಯೊಪತಿ ಔಷಧಿ ಹಾಕಿದ ಒಂದೇ ದಿನದಲ್ಲಿ ದ್ರವ ಬರುವುದು ನಿಂತಿತು. ಗಾಯ ಒಣಗಲು ಶುರುವಾಯಿತು. ಆ ಆಕಳು ಗರ್ಭ ಧರಿಸಿ ಒಂಬತ್ತು ತಿಂಗಳಾಗಿತ್ತು. ಮಾಲೀಕರಿಗೆ ಈ ವಿಷಯ ತಿಳಿದಿರಲಿಲ್ಲ. ಆಕಳು ಹೊರಗೆ ಮೇಯಲು ಹೋದಾಗ ಹೋರಿಯಿಂದ ಗರ್ಭ ಧರಿಸಿತ್ತು. ಆದ್ದರಿಂದ ಕರು ಹಾಕುವ ದಿನಾಂಕದ ಮಾಹಿತಿ ಇರಲಿಲ್ಲ. ಅಲ್ಲಿ ಕೊಟ್ಟಿಗೆ ಸಣ್ಣದಿದ್ದು, ಐದಾರು ಜಾನುವಾರುಗಳನ್ನು ಒಟ್ಟಿಗೆ ಕಟ್ಟುತ್ತಿದ್ದರು. ಜಾನುವಾರುಗಳನ್ನುಬಹಳ ಪ್ರೀತಿಯಿಂದ ಸಾಕುತ್ತಿದ್ದರು.
ಕೊಟ್ಟಿಗೆ ಕೂಡ ಸ್ವಚ್ಛವಾಗಿ ವ್ಯವಸ್ಥಿತವಾಗಿ ಇಟ್ಟುಕೊಂಡಿದ್ದರು. ಆದರೆ ಗಬ್ಬದ ಆಕಳಿಗೆ ಮಲಗಲು ಏಳಲು ಸಾಕಾಗುವಷ್ಟು ಜಾಗ ಇರಲಿಲ್ಲ. ಕಲ್ಲು ಹಾಸಿನ ನೆಲ ಆಗಿದ್ದರಿಂದ ಕಾಲು ( ಗೊರಸು ) ಜಾರುತ್ತಿತ್ತು. ಆಕಳಿಗೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಎಡಿಮಾ(Edema)ಆಗಿತ್ತು. ಹಿಂದಿನ ಎರಡು ಕಾಲನ್ನು ನೆಲಕ್ಕೆ ಸರಿಯಾಗಿ ಒತ್ತಿ ಮೇಲೇಳಲಾರದಷ್ಟು ದೊಡ್ಡದಾಗಿ ಕೆಚ್ಚಲು ಊದಿಕೊಂಡಿತ್ತು. ಕಷ್ಟಪಟ್ಟು ಮೇಲೇಳುವ ಸಂದರ್ಭದಲ್ಲಿ ಕಾಲಿನ ಗೊರಸಿನ ಮೇಲಿರುವ ಉಗುರು ಕೆಚ್ಚಲಿಗೆ ತಾಗಿ ಗಾಯ ಆಗಿದೆ.
ಎಡಿಮಾ, ಇದು ನೋಡಲು ಕೆಚ್ಚಲು ಬಾವಿನಂತೆ ಕಂಡರೂ ಕೆಚ್ಚಲು ಬಾವು ಅಲ್ಲ. ಬಹಳಷ್ಟು ಜನರು ಎಡಿಮಾ ಮತ್ತು ಕೆಚ್ಚಲುಬಾವು ಇವುಗಳ ನಡುವಿನ ವ್ಯತ್ಯಾಸ ಗುರುತಿಸಲಾಗದೆ ಗೊಂದಲಕ್ಕೊಳಗಾಗುತ್ತಾರೆ. ಆಕಳು ಗಬ್ಬ ಕಟ್ಟಿದ ಎಂಟು ತಿಂಗಳಿನಿಂದ ಕರು ಹಾಕಿದ ಒಂದು ತಿಂಗಳವರೆಗೆ ಈ ತೋಂದರೆ ಕಾಣಿಸಿಕೊಳ್ಳುತ್ತದೆ. ಇಲ್ಲಿ ನಾವು ಮುಖ್ಯವಾಗಿ ಗುರುತಿಸಬೇಕಾಗಿದ್ದು ಕೆಚ್ಚಲಿನ ನಾಲ್ಕೂ ಭಾಗ ದಪ್ಪ ಆಗಿದೆಯಾ ಎಂದು ಪರೀಕ್ಷಿಸಬೇಕು. ಆರಂಭದಲ್ಲಿ ಒಂದೇ ಭಾಗ ದಪ್ಪ ಆದರೂ ನಂತರದ ಒಂದೆರಡು ದಿನದಲ್ಲಿ ನಾಲ್ಕೂ ಭಾಗಗಳಿಗೆ ಹರಡಿಕೊಳ್ಳುತ್ತದೆ. ನಾವು ಬೆರಳಿನಿಂದ ಒತ್ತಿದಾಗ ಅಲ್ಲಿ ಬೆರಳಿನ ಗುರುತು ಗುಳಿ ಮೂಡುತ್ತದೆ. ಅದೇ ಸಮಯದಲ್ಲಿ ಆಕಳಿಗೆ ನೋವು ಆಗುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.
ಕೆಚ್ಚಲು ಬಿಸಿ ಇರುವುದಲ್ಲ ಅಲ್ಲದೇ ಜ್ವರದ ಯಾವುದೇ ಲಕ್ಷಣಗಳೂ ಆಕಳಿಗೆ ಇರುವುದಿಲ್ಲ. ಎಂದಿನಂತೆ ಹುಲ್ಲು, ಹಿಂಡಿ, ನೀರು ಸೇವಿಸುತ್ತಿರುತ್ತದೆ. ಕೆಚ್ಚಲಿನ ಭಾರದಿಂದಾಗಿ ಆರಾಮವಾಗಿ ನಿಲ್ಲಲು ಕಷ್ಟಪಡುತ್ತದೆ. ಗುರುತ್ವಾಕರ್ಷಣೆಯಿಂದಾಗಿ ದ್ರವವು ದೇಹದ ಕೆಳಭಾಗದಲ್ಲಿ ಸಂಗ್ರಹವಾಗಿ ಹೊಕ್ಕಳು ಮತ್ತು ಕುತ್ತಿಗೆವರೆಗೆ ವ್ಯಾಪಿಸುತ್ತದೆ. ಕೆಚ್ಚಲು ಮತ್ತು ಮೊಲೆ ಕೆಂಪಗೆ ಊದಿಕೊಂಡು ಹೊಳೆಯುತ್ತದೆ. ಮೊಲೆಗಳು ದಪ್ಪಗಾಗಿ, ಗಿಡ್ಡದಾಗಿ, ಬಿಗುವಿನಿಂದ ಹೊರಕ್ಕೆ ಚಾಚಿಕೊಂಡಿರುತ್ತದೆ. ಸರಾಗವಾಗಿ ಹಾಲನ್ನು ಹಿಂಡಲು ಸಾಧ್ಯವಾಗುವುದಿಲ್ಲ. ಸಣ್ಣ ಪ್ರಮಾಣದ ಎಡಿಮಾ ಆದರೆ ಏನೂ ಹೆಚ್ಚಿನ ಅಪಾಯ ಇಲ್ಲ. ಇದು ಕಡಿಮೆ ಆಗಲು ಹತ್ತರಿಂದ ಹದಿನೈದು ದಿನಗಳು ಬೇಕು. ಇಲ್ಲಿ ಮುಖ್ಯವಾಗಿ ಗಬ್ಬದ ಆಕಳನ್ನು ಪ್ರತ್ಯೇಕವಾಗಿ ಕಟ್ಟಬೇಕು. ಮಲಗಿ ಏಳಲು ಸಾಕಷ್ಟು ಸ್ಥಳ ಇರಬೇಕು. ರಬ್ಬರ್ ಮ್ಯಾಟ್ ಹಾಕಿದರೆ ಉತ್ತಮ. ಏಳುವಾಗ ಕಾಲು ಜಾರುವಂತಿರಬಾರದು.
ದೂರದ ಊರಿನವರು ಮಾಹಿತಿ ನೀಡಿದರೆ ಪೋಸ್ಟನಲ್ಲಿ ಮೆಡಿಸಿನ್ ಕಳುಹಿಸುವ ವ್ಯವಸ್ಥೆ ಇದೆ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…