#Annabhagya |ಹಣಭಾಗ್ಯದ ಮೂಲಕ ಅನ್ನಭಾಗ್ಯಕ್ಕೆ ಚಾಲನೆ | ಬಿಪಿಎಲ್ ಕಾರ್ಡ್‍ದಾರರ ಖಾತೆಗೆ ರೇಷನ್ ದುಡ್ಡು ಜಮೆ |

July 10, 2023
1:04 PM
ಅನ್ನಭಾಗ್ಯದ ಜೊತೆಗೆ ಕಾಂಗ್ರೆಸ್ ಸರ್ಕಾರವು ಹಣಭಾಗ್ಯ ಕಲ್ಪಿಸಿದೆ. ಇಂದಿನಿಂದ ಬಿಪಿಎಲ್ ಕಾರ್ಡ್‌ ದಾರರ ಖಾತೆಗೆ ಹಂತ ಹಂಂತವಾಗಿ ಜಮೆಯಾಗಲಿದೆ.

ಒಂದಷ್ಟು ಎಡರು ತೊಡರುಗಳ ಮೂಲಕ ಕಾಂಗ್ರೆಸ್ ಸರ್ಕಾರದ ಎರಡನೇ ಗ್ಯಾರಂಟಿ ಯೋಜನೆ ಅನ್ನಭಾಗ್ಯಕ್ಕೆ#AnnaBhagya ಯೋಜನೆಗೆ ಇಂದು ಚಾಲನೆ ಸಿಗಲಿದೆ. ಬಿಪಿಎಲ್ ಕಾರ್ಡ್‌ದಾರರ ಖಾತೆಗೆ ಹಣ ಹಾಕುವ ಮೂಲಕ ಚಾಲನೆ ಸಿಗಲಿದೆ. ಹಂತಹಂತವಾಗಿ ಖಾತೆಗೆ ಹಣ ಹಾಕುವ  ಯೋಜನೆಯನ್ನು ಆಹಾರ ಇಲಾಖೆ ಮಾಡಿಕೊಂಡಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ#GuaranteeScheme ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಅನ್ನಭಾಗ್ಯ. ಅನ್ನಭಾಗ್ಯ ಯೋಜನೆ ಜುಲೈ ಒಂದರಿಂದಲೇ ಜಾರಿ ಆಗಬೇಕಿತ್ತು. ಅಕ್ಕಿ ಸಿಗದ ಕಾರಣ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಯೊಂದಿಗೆ  5 ಕೆಜಿ ಅಕ್ಕಿಗೆ ಹಣ ಹಾಕಲು ಸರ್ಕಾರ ನಿರ್ಧಾರ ಮಾಡಿದೆ. ಈ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಸೋಮವಾರ ಕೋಲಾರ ಮತ್ತು ಮೈಸೂರು ಜಿಲ್ಲೆಯ ಬಿಪಿಎಲ್ ಕಾರ್ಡ್‍ದಾರರ ಅಕೌಂಟ್‍ಗೆ ಅಮೌಂಟ್ ಹಾಕಿ ಜಾರಿ ಮಾಡಲಿದ್ದಾರೆ. ನಂತರ ಮಂಗಳವಾರ ಉಳಿದ ಜಿಲ್ಲೆಯ ಬಿಪಿಎಲ್ ಕಾರ್ಡ್‍ದಾರರಿಗೆ ಹಣ ಹಾಕಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನಿರ್ಧರಿಸಿದೆ.

ರಾಜ್ಯದಲ್ಲಿ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್‍ದಾರರಿದ್ದಾರೆ. 1.28 ಕೋಟಿ ಪೈಕಿ 99.9% ಆಧಾರ್ ಲಿಂಕ್ ಆಗಿದ್ದು ಬ್ಯಾಂಕ್ ಅಕೌಂಟ್ ಲಿಂಕ್ ಕೂಡ ಆಗಿದೆ. ಬಾಕಿ ಉಳಿದಿರುವ 6 ಲಕ್ಷ ಕಾರ್ಡ್‍ಗಳು ಆಧಾರ್ ಲಿಂಕ್ ಆಗಬೇಕಿದೆ. ಪ್ರತಿ ಕೆಜಿಗೆ 34 ರೂಪಾಯಿ ಲೆಕ್ಕದಲ್ಲಿ ತಲಾ ಒಬ್ಬರಿಗೆ 5 ಕೆಜಿಗೆ 170 ರೂಪಾಯಿ ಅಕೌಂಟ್‍ಗೆ ಬೀಳಲಿದೆ.

ಹಣ ಭಾಗ್ಯ ಹೇಗೆ?  ನೀವು ಬಿಪಿಎಲ್ ಪಡಿತರ ಕಾರ್ಡ್‍ದಾರರಾಗಿರಬೇಕು. ರೇಷನ್ ಕಾರ್ಡ್‍ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಆಧಾರ್ – ಬ್ಯಾಂಕ್ ಖಾತೆ ಲಿಂಕ್ ಆಗದೇ ಇದ್ದರೆ ದುಡ್ಡು ಬರುವುದಿಲ್ಲ. ಕಾರ್ಡ್‌ನಲ್ಲಿ ಯಜಮಾನರಾಗಿರುವವರ ಖಾತೆಗೆ ಡಿಬಿಟಿ ಮೂಲಕ ಹಣ. ಅನ್ನಭಾಗ್ಯದ ಯೋಜನೆಗೆ ಯಾವುದೇ ಅರ್ಜಿ ಸಲ್ಲಿಕೆ ಅಗತ್ಯವಿಲ್ಲ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ
October 7, 2026
7:02 AM
by: ದ ರೂರಲ್ ಮಿರರ್.ಕಾಂ
ಯಾದಗಿರಿಯಲ್ಲಿ ಹೆಸರುಕಾಳು, ಸೋಯಾಬೀನ್, ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ
October 7, 2026
6:55 AM
by: ದ ರೂರಲ್ ಮಿರರ್.ಕಾಂ
ಕರಾವಳಿ–ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ; ಉದ್ಯೋಗ ಸೃಷ್ಟಿಗೆ ಸರ್ಕಾರದ ಒತ್ತು
October 7, 2026
6:50 AM
by: ದ ರೂರಲ್ ಮಿರರ್.ಕಾಂ
ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ; ಪರಿಷತ್ ಚುನಾವಣೆ ಬಳಿಕ ಅಂತಿಮ ಘೋಷಣೆ
October 7, 2026
6:45 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror