ಭಾರತದಲ್ಲೂ ಕೃಷಿ ಬಳಕೆಗೆ ಬರಲಿದೆ ಡ್ರೋನ್‌ ತಂತ್ರಜ್ಞಾನ | ಭಾರತದ ಜೊತೆ ಇಸ್ರೇಲ್‌ ಸಹಯೋಗ | ಕರಾಗಿರುವ ರೈತರು

February 3, 2022
9:33 PM

ಡ್ರೋನ್ ತಂತ್ರಜ್ಞಾನದ ಮೂಲಕ  ಕೃಷಿಯಲ್ಲಿನ ನಿಖರತೆಗೆ ಬೆಂಬಲ ಮತ್ತು ಸುಸ್ಥಿರ ಕೃಷಿ ಬೆಳವಣಿಗೆಯಲ್ಲಿ ಇಸ್ರೇಲ್ ಮತ್ತು ಭಾರತದ ನಡುವಿನ ಸಹಯೋಗಕ್ಕೆ ಚಾಲನೆ ದೊರೆತಿದೆ. ಹೀಗಾಗಿ ಭಾರತದಲ್ಲೂ ಡ್ರೋನ್‌ ತಂತ್ರಜ್ಞಾನದ ಮೂಲಕ ಕೃಷಿ ಅಭಿವೃದ್ಧಿಯ ಕನಸು ನನಸಾಗಲಿದೆ.

ಡ್ರೋನ್‌ ಮೂಲಕ ಮ್ಯಾಪಿಂಗ್ ಮಾಡುವುದು, ವಿವರವಾದ ಸಮೀಕ್ಷೆ, ಮಣ್ಣಿನ ಮ್ಯಾಪಿಂಗ್, ರೋಗ ಗುರುತಿಸುವಿಕೆ, ಸಸ್ಯದ ಒತ್ತಡ, ನೀರಿನ ನಿಯಂತ್ರಣ, ಸಸ್ಯದ ಶರೀರ ಶಾಸ್ತ್ರದ ಅಧ್ಯಯನ, ಸಸ್ಯದ ಸಂವೇದಕಗಳನ್ನು ಗುರುತಿಸುವುದು, ನ್ಯಾನೊ ತಂತ್ರಜ್ಞಾನದ ಬಳಕೆ ಇತ್ಯಾದಿಯಲ್ಲಿ ಇದು ರೈತರಿಗೆ ನೆರವಾಗುತ್ತದೆ.

ಈ ನಿಟ್ಟಿನಲ್ಲಿ ಪರಷ್ಕೃತ ಮಾರ್ಗಸೂಚಿಗಳ ಮೂಲಕ ಡ್ರೋನ್ ಖರೀದಿಗೆ ಸಬ್ಸಿಡಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಇದೀಗ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಡ್ರೋನ್‌ಗಳನ್ನು ಖರೀದಿಸಲು ಮತ್ತು ಬಳಸಲು ಕೃಷಿಕರಲ್ಲಿ ಆಸಕ್ತಿಯನ್ನು  ಹುಟ್ಟುಹಾಕಿದೆ.

ಇಸ್ರೇಲ್ ಡ್ರೋನ್‌ಗಳ ಬಳಕೆಯಿಂದ ಪ್ರಯೋಜನ ಪಡೆದ ಪ್ರಮುಖ ರಾಷ್ಟಗಳಲ್ಲಿ ಒಂದಾಗಿದೆ. ಕರ್ನಾಟಕ ಸುಮಾರು 12.3 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿದ್ದು,  ಡ್ರೋನ್ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸಲು ರೈತರಿಗೆ ಸಾಕಷ್ಟು ಸಹಾಯ ಮಾಡುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ
March 23, 2026
9:12 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?
March 23, 2026
8:55 PM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror