ಗದಗ ಜಿಮ್ಸ್ ಆಸ್ಪತ್ರೆಗೆ ತಟ್ಟಿದ ಬರದ ಬಿಸಿ | ನೀರಿಲ್ಲದೆ ರೋಗಿಗಳ ಪರದಾಟ | ದಾರಿಕಾಣದಾದ ಸಿಬ್ಬಂದಿಗಳು

May 17, 2024
2:55 PM

ರಾಜ್ಯದ ಕೆಲ ಭಾಗಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿದೆ(Heavy Rain). ನೀರಿಲ್ಲದೆ ಬೇಸತ್ತಿದ್ದ ಜನ ಜಾನುವಾರುಗಳು ಉಸಿರಾಡುವಂತಾಗಿದೆ. ಆದರೆ ಇನ್ನುಳಿದೆ ಕೆಲವೆಡೆ ಇನ್ನು ವರುಣದೇವ ಕೃಪೆ ತೋರಿಲ್ಲ. ನೀರಿಗಾಗಿ(Water Scarcity) ಪರದಾಡುವ ಸ್ಥಿತಿ ಬಂದೊದಗಿದೆ. ಅದರಲ್ಲೂ ಗದಗ ಜಿಲ್ಲೆಯ ಜಿಮ್ಸ್ ಆಸ್ಪತ್ರೆಯಲ್ಲಿ (Gims Hospital Gadag)  ಬರದ ಬಿಸಿ ರೋಗಿಗಳಿಗೂ ತಟ್ಟಿದೆ. ಆಸ್ಪತ್ರೆಗೆ ನೀರಿನ ಅಭಾವ ಕಾಡುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳು, ಸಿಬ್ಬಂದಿಗಳು ಹಾಗೂ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆನಲ್ಲೂ ನೀರಿಗಾಗಿ ಪರದಾಡುವಂತಾಗಿದೆ.

Advertisement
Advertisement
Advertisement
ಆಸ್ಪತ್ರೆಯಲ್ಲಿ ನೀರಿಲ್ಲದಕ್ಕೆ ರೋಗಿಗಳು, ಬಾಣಂತಿಯತು, ಶಿಶುಗಳು ಪರಿಪಾಟು ಕೇಳ ತೀರದಾಗಿದೆ. ಬಾಣಂತಿ ಹಾಗೂ ಶಿಶುಗಳಿಗೆ ಬಿಸಿ ನೀರು ಅವಶ್ಯಕ. ಆದ್ರೆ ಅಲ್ಲಿ ಲೀಟರ್ ತನ್ನಿರು ಸಹ ಸಿಗ್ತಿಲ್ಲ. 1 ಲೀಟರ್ ನಿಂದ ಹಿಡಿದು 20 ಲೀಟರ್ ಕ್ಯಾನ್ ನಲ್ಲಿ ನೀರು ಹಣ ಕೊಟ್ಟು ತರುತ್ತಿದ್ದಾರೆ. ಹೊಟೆಲ್ ಗಳಲ್ಲಿ ಹಣ ಕೊಟ್ಟು ನೀರು ತರುವ ಸ್ಥಿತಿ ರೋಗಿಗಳಿಗೆ ಎದುರಾಗಿದೆ. ಆಸ್ಪತ್ರೆಯಲ್ಲಿ ಮಿತವ್ಯಯವಾಗಿ ನೀರು ಬಿಡ್ತಿದ್ದಾರೆ. ಇತ್ತ ಕಾಲೇಜ್ ನಲ್ಲೂ ನೀರಿಲ್ಲ. ಜಿಮ್ಸ್ ಗೆ ಸಪ್ಲಾಯ್ ಆಗುವ 24/7 ನೀರು ಪೂರೈಕೆ ಆಗ್ತಿಲ್ಲ. ಜಿಮ್ಸ್ ವ್ಯಾಪ್ತಿಯ 6 ಬೋರವೆಲ್ ಪೈಕಿ 4 ಬೋರವೆಲ್ ಬಂದ್ ಬಂದ್ ಆಗಿವೆ. ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗ್ತಿದೆ. ಅದು ಕೂಡಾ ಸರಿಯಾಗಿ ಆಗ್ತಿಲ್ಲ. ಈ ಎಲ್ಲದರಿಂದ ರೋಗಿಗಳು ಪರದಾಡುತ್ತಿದ್ದಾರೆ, ಅಧಿಕಾರಿಗಳು ಮಾತ್ರ ಕೈ ಚೆಲ್ಲಿ ಕೂತಂತಿದೆ.

ಕುಡಿಯುವ ನೀರಿಗಾಗಿ ಜನಾಕ್ರೋಶ: ಇಷ್ಟು ಮಾತ್ರವಲ್ಲದೇ ಕುಡಿಯುವ ನೀರಿಗಾಗಿ ಜನಾಕ್ರೋಶ ಎದ್ದಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿಯಲ್ಲಿರುವ ಗ್ರಾಮ ಪಂಚಾಯತ್‍ಗೆ ಮುತ್ತಿಗೆ ಹಾಕಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸವಡಿ ಗ್ರಾಮ ಪಂಚಾಯತ್ ಕಳೆದ 20 ದಿನಗಳಿಂದ ನೀರು ಪೂರೈಸಿಲ್ಲ. ಹೀಗಾಗಿ ಪಿಡಿಓ, ಸಿಬ್ಬಂದಿ, ಜನಪ್ರತಿನಿಧಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆಯರು, ಮಕ್ಕಳು, ಪುರುಷರು ಖಾಲಿ ಕೊಡಗಳೊಂದಿಗೆ ಗ್ರಾ.ಪಂ ಗೆ ಮುತ್ತಿಗೆ ಹಾಕಿದ್ದಾರೆ.

Advertisement

ಮೊದಲು ಇತರೆ ಬಳಕೆಗೆ ಫ್ಲೋರೈಡ್ ಹಾಗೂ ಗಡಸು ನೀರನ್ನಾದ್ರೂ ಬಿಡುತ್ತಿದ್ದರು. ಈಗ ಯಾವ ಕಲುಷಿತ ನೀರೂ ಸಹ ಪೂರೈಸುತ್ತಿಲ್ಲ ಅಂತ ಜನ ಆರೋಪ ಮಾಡುತ್ತಿದ್ದಾರೆ. ಜೊತೆಗೆ ಸಮರ್ಪಕ ನೀರು ಪೂರೈಸದಕ್ಕೆ ಖಾಲಿ ಕೊಡಗಳು ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಡಿಸಿ, ಜಿ.ಪಂ ಸಿ.ಇ.ಓ, ತಹಶೀಲ್ದಾರ್ ಬರುವಂತೆ ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror