ಹಾವೇರಿ ಜಿಲ್ಲೆಗೆ ಬರಗಾಲದ ಛಾಯೆ | ಈಗಲೇ ಬತ್ತಿದ ಜೀವನಾಡಿ ವರದಾ ನದಿ | ನೀರಿಲ್ಲದೆ ಜನ-ಜಾನುವಾರುಗಳ ಪರದಾಟ |

March 4, 2024
8:58 PM
ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಿದ್ದಂತೆಯೇ ನೀರಿನ ಕೊರತೆ ಎಲ್ಲೆಡೆ ಕಾಡಲು ಆರಂಭವಾಗಿದೆ.

ರಾಜ್ಯಕ್ಕೆ ಈ ಬಾರಿ ತೀವ್ರಮಟ್ಟದ ಬರಗಾಲ(Drought) ಕಾಡುವ ಭೀತಿ ಎದುರಾಗಿದೆ. ಮಳೆಗಾಲಕ್ಕೆ(Rain Season) ಇನ್ನು ಮೂರರಿಂದ ನಾಲ್ಕು ತಿಂಗಳುಗಳು ಬಾಕಿ ಇವೆ. ಆದರೆ ನೀರಿನ ಕೊರತೆ(Water Scarcity) ಈಗಾಗಗಲೇ ಹೈರಣಾಗಿಸಿದೆ. ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಿಂದಾಗಿ ಹಲವಾರು ಜಿಲ್ಲೆಗಳಲ್ಲಿ ಬರಗಾಲದ ಛಾಯೆ ಆವರಿಸಿದೆ. ಇನ್ನೂ ಹಾವೇರಿ (Haveri) ಜಿಲ್ಲೆಯ ಜೀವನದಿ ವರದಾ ನದಿಯ (Varada River) ಒಡಲು ಬರಿದಾಗುತ್ತಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೇ ಪರದಾಡುವ (Drinking Water Problem) ಪರಿಸ್ಥಿತಿ ನಿರ್ಮಾಣವಾಗಿದೆ.

ವರದಾ ನದಿಗೆ ನಿರ್ಮಿಸಲಾಗಿದ್ದ ಚೆಕ್ ಡ್ಯಾಂಗಳಲ್ಲೂ ನೀರು ಖಾಲಿಯಾಗಿದೆ. ಜಿಲ್ಲೆಯ 15 ಕ್ಕೂ ಅಧಿಕ ಚೆಕ್ ಡ್ಯಾಂಗಳು ನೀರಿಲ್ಲದೆ ಬರಿದಾಗಿವೆ. ವರದಾ ನದಿಯಿಂದ ದೇವಗಿರಿ, ಯಲ್ಲಾಪುರ ಮನ್ನಂಗಿ ಮತ್ತು ಮೇಳಗಟ್ಟಿಗೆ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆ ಮೂಲಕ ನೀರನ್ನು ಗ್ರಾಮಗಳಿಗೆ ಒದಗಿಸಲಾಗುತ್ತಿತ್ತು. ಈಗ ವರದಾ ನದಿ ಸಂಪೂರ್ಣವಾಗಿ ಖಾಲಿಯಾಗಿದ್ದು ಜನರು ಸಂಕಷ್ಟಕ್ಕೀಡಾಗಿದ್ದಾರೆ.

ಇನ್ನೂ ರೈತರು ಕೃಷಿಗಾಗಿ ಪಂಪ್‍ಗಳನ್ನು ಬಳಸಿ ಇರುವ ನೀರನ್ನೂ ಖಾಲಿ ಮಾಡುತ್ತಿದ್ದಾರೆ. ಈಗಾಗಲೇ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಹನಿ ನೀರಿಗೂ ಪದದಾಡುವ ಪರಸ್ಥಿತಿ ನಿರ್ಮಾಣವಾಗುವ ಭೀತಿ ಕಾಡುತ್ತಿದೆ.

  • ಅಂತರ್ಜಾಲ ಮಾಹಿತಿ

Due to the lack of rain in the state this time, many districts are under the shadow of drought. Still Varada River is draining the life of Haveri district and people and cattle are facing drinking water problem.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ
January 9, 2026
10:26 PM
by: ದ ರೂರಲ್ ಮಿರರ್.ಕಾಂ
ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ
January 9, 2026
10:16 PM
by: ದ ರೂರಲ್ ಮಿರರ್.ಕಾಂ
ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?
January 9, 2026
10:08 PM
by: ದ ರೂರಲ್ ಮಿರರ್.ಕಾಂ
ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ
January 9, 2026
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror