ದುಬೈ ಭಾರೀ ಮಳೆಗೆ ಕಾರಣ ಏನು…? | ನೀರಿಗಾಗಿ ನಡೆದ “ಮೋಡ ಬಿತ್ತನೆ” ಕಾರಣವೇ..? ತಾಪಮಾನ ಏರಿಕೆ ಕಾರಣವೇ..? | ಚಿಂತಿಸುತ್ತಿದ್ದಾರೆ ಹವಾಮಾನ ತಜ್ಞರು |

April 17, 2024
10:44 PM
ದುಬೈಯಲ್ಲಿ ಭಾರೀ ಮಳೆಯಾಗುವುದಕ್ಕೆ ಕಾರಣವೇನು..? ಈ ಬಗ್ಗೆ ಈಗ ಚಿಂತನೆ ಆರಂಭವಾಗಿದೆ. ಮೋಡ ಬಿತ್ತನೆಯೇ ಪ್ರಮುಖ ಕಾರಣವೇ ?

ದುಬೈನಲ್ಲಿ ಸೋಮವಾರ ತಡರಾತ್ರಿ ಆರಂಭವಾದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ, ವಿಮಾನ ನಿಲ್ದಾಣಗಳು ಮತ್ತು ಪ್ರಮುಖ ಹೆದ್ದಾರಿಗಳು ಮುಳುಗಿವೆ. ನೆರೆಯ ಒಮಾನ್ ಮತ್ತು ಆಗ್ನೇಯ ಇರಾನ್‌ನಲ್ಲಿಯೂ ಭಾರೀ ಮಳೆಯಾಗಿದೆ ಎಂದು ವರದಿಯಾಗಿದೆ. ಇತ್ತೀಚೆಗೆ, ಒಮಾನ್‌ನಲ್ಲಿ ಭಾರೀ ಮಳೆಯು ಈ ಪ್ರದೇಶದಲ್ಲಿ ತೀವ್ರ ಪ್ರವಾಹವನ್ನು ಉಂಟುಮಾಡಿ 18  ಜನರು ಬಲಿಯಾಗಿದ್ದರು. ಇದೀಗ ಒಮ್ಮೆಲೇ ದುಬೈಯಲ್ಲಿ ಭಾರೀ ಮಳೆಗೆ ಕಾರಣವೇನು ಎಂದು ಹವಾಮಾನ ತಜ್ಞರು ಚಿಂತಿಸುತ್ತಿದ್ದಾರೆ. ಜಾಗತಿಕ ತಾಪಮಾನ ಏರಿಕೆ ಕಾರಣವೇ..? ಅಥವಾ ಮೋಡ ಬಿತ್ತನೆ ಕಾರಣವೇ..?

Advertisement
Advertisement
Advertisement
Advertisement

ಓಮನ್ ಮತ್ತು ದುಬೈನಲ್ಲಿ ಭಾರೀ ಮಳೆಯು ಹವಾಮಾನ ಬದಲಾವಣೆಯಿಂದಲೇ  ಸಾಧ್ಯತೆ ಹೆಚ್ಚು ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಆದರೆ ಬ್ಲೂಮ್‌ಬರ್ಗ್ ಮಾಧ್ಯಮ ವರದಿಯ ಪ್ರಕಾರ ಭಾರೀ ಮಳೆಗೆ ಮೋಡ ಬಿತ್ತನೆಗೆ ಕಾರಣವಾಗಿದೆ, ಈ ಪ್ರಕ್ರಿಯೆಯಲ್ಲಿ ರಾಸಾಯನಿಕಗಳನ್ನು ವಾತಾವರಣದಲ್ಲಿ ಬಿಡಲಾಗುತ್ತದೆ ಮತ್ತು ಅವುಗಳಿಂದಾಗಿ ಉಂಟಾಗುವ ಮೋಡಗಳಿಂದ ಹೆಚ್ಚು ಮಳೆಯಾಗುತ್ತದೆ. ದುಬೈಯಲ್ಲಿ 2002 ರಲ್ಲಿ ನೀರಿನ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ ಮೋಡ ಬಿತ್ತನೆ ತಂತ್ರವನ್ನು ಅನುಸರಿಸಿತ್ತು. ಈ ಬಾರಿಯೂ ಅದೇ ಕ್ರಮದತ್ತ ದುಬೈ ಮುಂದಾಗಿತ್ತು.

Advertisement

ಕೃತಕ ಮಳೆಯೇ…? ಹವಾಮಾನ ಬದಲಾವಣೆಯಿಂದ ಪ್ರವಾಹವೇ..? : ಹವಾಮಾನ  ಕೇಂದ್ರಗಳ ಪ್ರಕಾರ  ರಾಷ್ಟ್ರೀಯ ಹವಾಮಾನ ಕೇಂದ್ರವು ಸೋಮವಾರ ಮತ್ತು ಮಂಗಳವಾರದಂದು ಅಲ್ ಐನ್ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆ ವಿಮಾನಗಳನ್ನು ರವಾನಿಸಿದೆ ಎಂದು ಹೇಳುತ್ತಾರೆ. ಹೀಗಾಗಿ ಮರುಭೂಮಿಯ ನಗರ ದುಬೈ ಕೇವಲ 24 ಗಂಟೆಗಳಲ್ಲಿ ಮಳೆಯಲ್ಲಿ ತೋಯ್ದಿದೆ. ಇದು ವಾಸ್ತವವಾಗಿ ಸುಮಾರು ಎರಡು ವರ್ಷಗಳಲ್ಲಿ ಬೀಳುವ ಮಳೆಯ ಪ್ರಮಾಣವಾಗಿದೆ. ಯುಎಇಯ ರಾಷ್ಟ್ರೀಯ ಹವಾಮಾನ ಕೇಂದ್ರದ ಪ್ರಕಾರ, ಕಳೆದ 75 ವರ್ಷಗಳಲ್ಲಿ ಮೊದಲ ಬಾರಿಗೆ ಐತಿಹಾಸಿಕ ಮಳೆಯಾಗಿದೆ. ಅಂದರೆ ಈ ಪ್ರಮಾಣದ ಮಳೆ ಮೋಡ ಬಿತ್ತನೆಯಿಂದ ಮಾತ್ರವೇ ಸಾಧ್ಯ. ಮೋಡಗಳಲ್ಲಿ ಉಪ್ಪು ಮಿಶ್ರಣಗಳನ್ನು ಸಿಂಪಡಿಸುವ ಪ್ರಕ್ರಿಯೆಯು ಮೋಡದ ಘನೀಕರಣಕ್ಕೆ ಕಾರಣವಾಗುತ್ತದೆ ಮತ್ತು ಅದು ಮಳೆಯನ್ನು ಉಂಟುಮಾಡುತ್ತದೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror