ಮಲೆನಾಡು ಗಿಡ್ಡ ಹಸುಗಳ ಸೆಗಣಿ ಗೊಬ್ಬರ ಅಮೂಲ್ಯ ಪೋಷಕಾಂಶಗಳ ಆಗರ | ಆದರೆ ಈ ಗೊಬ್ಬರಕ್ಕೆ ನ್ಯಾಯಯುತ ಬೆಲೆ ಕೊಡುವವರಾರು…?

December 6, 2023
11:16 AM
ದೇಸೀ ಗೋವುಗಳು ಉಳಿಯಲು ಅವುಗಳ ಉತ್ಪನ್ನಗಳಿಗೆ ನ್ಯಾಯಯುತವಾದ ದರ ನೀಡಿ ಖರೀದಿ ಮಾಡಬೇಕಿದೆ.

ಹೆಚ್ಚು ಹಾಲು(Milk) ನೀಡದ ಮಲೆನಾಡು ಗಿಡ್ಡ ತಳಿಯಂತಹ(Desi cow) ಹಸುಗಳು ಇವತ್ತಿನ ಲೆಕ್ಕಾಚಾರದ ವ್ಯವಹಾರಿಕ ಜಗತ್ತಿನಲ್ಲಿ ಅನುತ್ಪಾದಕ ಜೀವಿಗಳಾಗಿವೆ. ಈ ಹಸುಗಳು ಒಂದೊಮ್ಮೆ ಮೇಯ್ದು ಸ್ವಾವಲಂಬನೆಯಿಂದ(self-reliance) ಬದುಕುತ್ತಿದ್ದವು. ಇದೀಗ ಮನುಷ್ಯನ(Human) “ಒತ್ತುವರಿ ರೋಗಕ್ಕೆ'(Occupy) ಗೋವುಗಳ ಆಹಾರದ ಮೂಲವಾದ ಗೋಮಾಳ(Pasture)ನಾಶವಾಯಿತು. ಮೇಯ್ದು ಬರುವ ಹಸುಗಳಿಗೀಗ ಮೇವಿನ ತಾಣ ಗೋಮಾಳ ಇಲ್ಲ…!! ಗದ್ದೆ ಮಾಡೋಲ್ಲ ಅಥವಾ ಗದ್ದೆ ಗಳೆಲ್ಲಾ ತೋಟಗಳಾಗಿವೆ…!! ಮಲೆನಾಡಿನ ಗುಡ್ಡಗಳಲ್ಲಿ ಅಕೇಶಿಯ ರಾಕ್ಷಸ ನೆಲೆಸಿದ್ದಾನೆ.  ಹಾಗಾದರೆ ಈ ದೇಸಿ ಹಸುಗಳಿಗೆ ಮೇವು ಎಲ್ಲಿದೆ…?

Advertisement

ಇವತ್ತಿನ ಮುನ್ನೂರು-ನಾಲ್ಕು ನೂರು ರೂಪಾಯಿಯ ಒಣ ಹುಲ್ಲು, ಕೆಜಿ ಹಿಂಡಿಗೆ ನಲವತ್ತು ರೂಪಾಯಿ, ಕಾರ್ಮಿಕರ ಸಂಬಳ ಎಂಟನೂರು ರೂಪಾಯಿ. ವೈದ್ಯಕೀಯ ವೆಚ್ಚ. ಕರೆಂಟು ‌ನೀರು ಇತರೆ ಸವಲತ್ತುಗಳನ್ನು ಒದಗಿಸಿ ಈ ದೇಸಿ ಹಸುಗಳ ಸಾಕುವ ನಮ್ಮಂಥವರಿಗೆ ಈ ದೇಸಿ ಹಸುಗಳ “ಸಗಣಿ ಗೋಮೂತ್ರ” ವೇ ಅವುಗಳ ನಿರ್ವಹಣೆ ಗೆ ಕಿಂಚಿತ್ತು ಆದಾಯ‌.‌ ದುರಂತ ಏನೆಂದರೆ ಈ ನಿಟ್ಟಿನಲ್ಲಿ ಸಗಣಿ ಗೋಮೂತ್ರಗಳ ಮೌಲ್ಯವರ್ಧನೆಯ ನಮ್ಮಂಥ ಗೋಪಾಲಕರ ಪ್ರಯತ್ನಕ್ಕೆ ರೈತ ಬಾಂಧವರ ಪ್ರೋತ್ಸಾಹ ತೀರಾ ನೀರಸ‌‌‌…!?

ಬೆಲೆಯೇ ಇಲ್ಲದೇ ಸಕ್ಕರೆ ಕಾರ್ಖಾನೆಯವರು ಇಟ್ಟಿಗೆ ಮಾಡುತ್ತಿದ್ದ ಫ್ಲೈ ಆಶ್ ಬೂದಿಯನ್ನು ಅದ್ಯಾರೋ ಕೃಷಿ ವಿಜ್ಞಾನಿಗಳು ಗೊಬ್ಬರವಾಗಿ ಬಳಸಬಹುದು ಎಂದು ಕಂಡು ಹಿಡಿದರು. ಆ ನಂತರ ಸಕ್ಕರೆ ಕಾರ್ಖಾನೆಯವರು ಕಿಲೋಗೆ ಒಂದೋ ಎರಡೋ ರೂಪಾಯಿಗೆ ಗೊಬ್ಬರ ತಯಾರಿಕಾ ಕಂಪನಿಯವರಿಗೆ ಬಣ್ಣ ಬಣ್ಣದ ಚೀಲದಲ್ಲಿ ಆ ಕಂಪನಿಯವರು ಮುದ್ರಿಸಿಕೊಟ್ಟ ಹೆಸರು ಮತ್ತು ಪೋಷಕಾಂಶಗಳ ಪಟ್ಟಿಯನ್ನು ಬೆನ್ನಿಗಂಟಿಸಿಕೊಂಡು ಮಾರುಕಟ್ಟೆಗೆ ಕೊಡುತ್ತಿದ್ದಾರೆ.

ನಮ್ಮ ರೈತರು ಬೆಲೆಯೇ ಇಲ್ಲದ ಬೂದಿಯನ್ನು ಎಂಟು ರೂಪಾಯಿ ಕೊಟ್ಟು ಖರೀದಿಸಿ ಬಳಸುತ್ತಾರೆ. ಅತ್ಯಂತ ನೋವಿನ ವಿಷಾದದ ಸಂಗತಿ ಎಂದರೆ ಕಿಲೋಗೆ “ಹದಿನೆಂಟು ರೂಪಾಯಿ” ಯ ಸಗಣಿ ಗೋಮೂತ್ರದ ಆಧಾರದ ಮೌಲ್ಯವರ್ಧಿತ ಗೊಬ್ಬರವನ್ನು ” ಕಿಲೋಗೆ ಹನ್ನೆರಡು ರೂಪಾಯಿಗೆ” ಮಾರಾಟ ಮಾಡುತ್ತೇವೆಂದರೆ ರೈತರು ಸಗಣಿ ಗೊಬ್ಬರ ಕೊಂಡು ಪ್ರೋತ್ಸಾಹಿಸಲು ಮನಸು ಮಾಡುತ್ತಿಲ್ಲ..‌‌.‌‌!! ಹೀಗಾದರೆ ಕಡಿಮೆ ಹಾಲಿನ ಇಳುವರಿಯ ದೇಸಿ ಹಸುಗಳು ಹೇಗೆ ಉಳಿಯಲು ಸಾಧ್ಯ ‌‌‌?
ಗೋವಿನ ಗೊಬ್ಬರ ನ್ಯಾಯಯುತ ಬೆಲೆಗೆ ಖರೀದಿ ಯಾದರೆ ಮಾತ್ರ ಗೋಪಾಲಕರು ಗೋವು ಸಾಕಬಲ್ಲರು. ಗೋವು ಉಳಿಸಲು ಗೋ ಪ್ರೇಮಿಗಳು ಗೋಶಾಲೆಗೆ ದೇಣಿಗೆ ನೀಡುವುದಕ್ಕಿಂತ ಗವ್ಯೋತ್ಪನ್ನಗಳಿಗೆ ನ್ಯಾಯಯುತ ಬೆಲೆ ಕೊಟ್ಟು ಖರೀದಿಸಿದರೆ ಗೋವು ತಾನಾಗೇ ಗೋಪಾಲಕರ ಕೊಟ್ಟಿಗೆಯಲ್ಲಿ ಉಳಿತದೆ…

ಕಳೆದ ಬಾರಿ ಒಂದೇ ಒಂದು ಜಾನುವಾರು ಸಾಕದ ದೊಡ್ಡ ಜಮೀನ್ದಾರರೊಬ್ಬರ ಬಳಿ ನಾನು ” ನನ್ನ ಬಳಿ ಸಗಣಿ ಗೊಬ್ಬರ ಇದೆ ಖರೀದಿಸಿ “… ಎಂದರೆ ಅವರು ನಿಮ್ಮ ಮನೆಗೆ ಬಂದು ಗೊಬ್ಬರ ನೋಡ್ತೀನಿ ಎಂದರು. ಅವರು ಖಾಯಂ ಆಗಿ ಕೊಳ್ಳುವ ಗೊಬ್ಬರದಲ್ಲಿ ಸಗಣಿ ಅಂಶವೇ ಇರೋಲ್ಲ. ನಮ್ಮ ಮನೆಯ “ಅದ್ಭುತವಾದ ಗೊಬ್ಬರನ” ನ್ಯಾಯಯುತ ಬೆಲೆಗೆ ಕೊಂಡು ಗೋ ಉಳಿಸಲು ಅವರಿಗೆ ಮನಸಿಲ್ಲ…!! ಇದು ನಮ್ಮ ಕೆಲ ರೈತರ ಮನಸ್ಥಿತಿ. ಅವರಿಗೆ ಗೊಬ್ಬರ ಬೇಕು. ಅದು ಅತ್ಯಂತ “ಕನಿಷ್ಠ ಬೆಲೆಗೆ ಬೇಕು” ಎಂಬ ಅಪೇಕ್ಷೆ ಅವರದ್ದು. ಹೀಗಾದರೆ ಗೋವುಗಳ ಅಮೂಲ್ಯ ಅತ್ಯಂತ ಪೋಷಕಾಂಶಯುಕ್ತ ಸಗಣಿ ಗೊಬ್ಬರಕ್ಕೆ ಬೆಲೆ ಕೊಡುವ ಮನಸು ಮಾಡದಿದ್ದರೆ ಗೋಪಾಲಕರಿಗೆ ಗೋಪಾಲನೆಗೆ “ಚೈತನ್ಯ'” ಎಲ್ಲಿಂದ ಬರುತ್ತದೆ…?

ನಮ್ಮ ಸುತ್ತ ಮುತ್ತಲಿನ ರೈತರು ಮನಸು ಮಾಡಿದರೆ ಈಗ ಅಳಿದುಳಿದ ಗೋವುಗಳು ಮೇವುಂಡು ನೆಮ್ಮದಿಯಾಗಿರುತ್ತವೆ. ಜನ “ಪೊಕ್ಕು ಸತ್ವ ಪೋಷಕಾಂಶಗಳು ಇಲ್ಲದ ಪ್ರೆಸ್ ಮಡ್ ಗೊಬ್ಬರ ” ಕೊಳ್ಳುವುದನ್ನ ಕಡಿಮೆ ಮಾಡಿ ಸ್ಥಳೀಯ ದೇಸಿ ಹಸುಗಳ ಸಾಕುವ ಗೋಪಾಲಕರ ಬಳಿ ಕೊಟ್ಟಿಗೆ ಗೊಬ್ಬರವನ್ನು ಉತ್ತಮ ಬೆಲೆಗೆ ಕೊಂಡರೆ ದೇಸಿ ತಳಿ ತನ್ನಂತಾನೇ ಉಳಿದು ಕೊಳ್ಳುತ್ತದೆ. ನಿಜಕ್ಕೂ ಇವತ್ತು ಕಡಿಮೆ ಹಾಲಿನಿಳುವರಿಯ ದೇಸಿ ಹಸು ಮಲೆನಾಡು ಗಿಡ್ಡ ತಳಿ ಹಸುಗಳು ರಸ್ತೆಯ ಮೇಲೆ ಜೋಲು ಮುಖ ಹಾಕಿಕೊಂಡು ಹಸಿವಿನಿಂದ ಮೇವು ಹುಡುಕಿಕೊಂಡು ಹೋಗುವುದನ್ನು ನೋಡಿದರೆ ಅತೀವ ಸಂಕಟವಾಗುತ್ತದೆ. ಹೆಚ್ಚಿನ ಯಾವ ದೇಸಿ ಹಸುಗಳೂ ಸಟಾಸುಟಿ ಯಲ್ಲಿರುವುದಿಲ್ಲ.

ಸ್ವಾಭಾವಿಕ ಮೇವಿಲ್ಲದೆ ಗೋಪಾಲಕನೂ ದುಡ್ಡು ಕೊಟ್ಟು ಹುಲ್ಲು ತಂದು ಅವಕ್ಕೆ ಹಾಕದೇ ಅವು ಅರೆ ಹೊಟ್ಟೆಯಲ್ಲಿ ಸೋತಗಂಡು ಕಡೆಯ ದಿನಗಳನ್ನು ಎಣಿಸುತ್ತಾ ಮುಂದೆ ಎಲ್ಲಾದರೂ ಹಸಿರು ಮೇವು ಸಿಗುತ್ತದಾ ಎಂಬ ಆಶೆಯಲ್ಲಿ ಮುಂದೆ ಸಾಗುತ್ತವೆ. ದೇಸಿ ತಳಿ ಹಸುಗಳನ್ನು ಸರ್ಕಾರ ಉಳಿಸುವುದಿಲ್ಲ. ಸಹೃದಯಿಗಳು ಅಂತಃಕರಣ ದಿಂದ ನೋಡಿದರೆ ಖಂಡಿತವಾಗಿಯೂ ಗೋವು ಉಳಿಸಬಹುದು. ದಯಮಾಡಿ ದೇಸಿ ಹಸುಗಳ ಗೋಪಾಲಕರ ಗವ್ಯೋತ್ಪನ್ನ ವನ್ನು ನ್ಯಾಯಯುತ ಬೆಲೆಗೆ ಕೊಂಡು ಪ್ರೋತ್ಸಾಹಿಸಿ ಗೋವು ಉಳಿಸಿ ಎಂದು ಎಲ್ಲ ರೈತ ಬಾಂಧವರಲ್ಲಿ ಬೇಡಿಕೊಳ್ತೇನೆ.

Cows like the Desi cow, which do not give much milk, are unproductive creatures in today’s calculated business world. These cows once grazed and lived self-reliance. Now the human’s “Occupy disease” has destroyed the pasture as the source of food for the cows. Now there is no pasture for the grazing cows… Don’t make fields or all the fields are gardens… Acacia demon resides in the hills of the highlands. So where is the fodder for these desi cows…?

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಒಂದು ವರ್ಷದಲ್ಲಿ 5600 ಕಿ.ಮೀ. ಹೆದ್ದಾರಿ ನಿರ್ಮಾಣ |
April 3, 2025
7:42 AM
by: The Rural Mirror ಸುದ್ದಿಜಾಲ
81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ
April 3, 2025
7:32 AM
by: The Rural Mirror ಸುದ್ದಿಜಾಲ
ಮೇಷ ರಾಶಿಯವರಿಗೆ ಬಹಳ ಶುಭ ದಿನ
April 3, 2025
7:05 AM
by: ದ ರೂರಲ್ ಮಿರರ್.ಕಾಂ
ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group