ಹಿಮಾಚಲ ಪ್ರದೇಶದ ಕುಲುವಿನಲ್ಲಿ ಅಂತಾರಾಷ್ಟ್ರೀಯ ದಸರಾ ಹಬ್ಬ, ಸಾಂಪ್ರದಾಯಿಕ ಪದ್ಧತಿಗಳೊಂದಿಗೆ ಆರಂಭವಾಗಿದೆ.ಈ ಸಂದರ್ಭದಲ್ಲಿ, ಐತಿಹಾಸಿಕ ಧಾಲ್‌ಪುರ ಮೈದಾನದಲ್ಲಿ ,ಭಗವಾನ್ ರಘುನಾಥನ ಭವ್ಯ ರಥೋತ್ಸವವನ್ನು ನಡೆಸಲಾಯಿತು, ಇದರಲ್ಲಿ ಸಾವಿರಾರು ಜನರು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿದ್ದರು. ನೂರಕ್ಕೂ ಹೆಚ್ಚು ದೇವತೆಗಳು ರಥೋತ್ಸವದಲ್ಲಿ ಕಾಣಸಿಗುತ್ತದೆ. ದಸರಾ ಹಬ್ಬದ ಸಂದರ್ಭದಲ್ಲಿ 25 ದೇಶಗಳ ಸಾಂಸ್ಕೃತಿಕ ತಂಡಗಳು ತಮ್ಮ ಪ್ರದರ್ಶನಗಳನ್ನು ಪ್ರಸ್ತುತಪಡಿಸಲಿವೆ ಮತ್ತು ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗುತ್ತದೆ.
ಕಾರ್ಯಕ್ರಮವನ್ನು ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಕಾರ್ಯಕ್ರಮ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಸೇರಿದಂತೆ, ಸಾವಿರಾರು ಜನರು ಸಾಂಪ್ರದಾಯಿಕ ಉಡುಗೆಯಲ್ಲಿ ಉಪಸ್ಥಿತರಿದ್ದರು. ಇದೇ 19 ರಂದು, ಕುಲು ಕಾರ್ನಿವಲ್ ಅಂತರರಾಷ್ಟ್ರೀಯ ದಸರಾ ಉತ್ಸವ ಜರುಗಲಿದೆ. ಇದರಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಕಾರ್ಯಕ್ರಮಗಳು ಮತ್ತು ಸಾಧನೆಗಳನ್ನು ಎತ್ತಿ ತೋರಿಸುವ ಪ್ರದರ್ಶನಗಳು ಒಳಗೊಂಡಿರುತ್ತದೆ.