ಕೊರೋನಾ ನಂತರ ದೇಶದಲ್ಲಿ ಇ ಕಾಮರ್ಸ್ ವಿಸ್ತರಣೆಯಾಗಿದೆ. ನಗರ ಪ್ರದೇಶದಲ್ಲಿ ಇ ಕಾಮರ್ಸ್ ವಿಸ್ತಾರಗೊಂಡಿರುವ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೇ ವಿವಿಧ ಸಂಸ್ಥೆಗಳು ಎಲ್ಲಾ ವಸ್ತುಗಳನ್ನೂ ತಂದೊಪ್ಪಿಸುತ್ತವೆ. ಆಪ್ ಮೂಲಕ ಬುಕ್ ಮಾಡಿದರೆ ಸಾಕು. ಮನೆ ಬಾಗಿಲಿಗೆ ಬರುತ್ತವೆ. ಹೀಗಾಗಿ ಅನೇಕ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಸಂಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಬದಿಯ ಎಳನೀರು ವ್ಯಾಪಾರಿಯೊಬ್ಬರು ಮಾಡಿರುವ ಟೆಕ್ನಿಕ್ ಭಾರೀ ವೈರಲ್ ಆಗಿದೆ. ಚರ್ಚೆಗೆ ಕಾರಣವಾಗಿದೆ.…..ಮುಂದೆ ಓದಿ….
ಇ-ಕಾಮರ್ಸ್ ಯುಗದಲ್ಲಿ ಸ್ಥಳೀಯ ಮಾರಾಟಗಾರರು ಸ್ಫರ್ಧೆ ಮಾಡಬಹುದದೇ..? ಅವರ ಜೊತೆ ಬೆಲೆಯೊಂದಿಗೆ ಸ್ಪರ್ಧಿಸಬಹುದೇ..? ಎನ್ನುವ ಚರ್ಚೆ ಕೆಲವು ಸಮಯಗಳಿಂದ ಇದೆ. ಈ ನಡುವೆ ಬೆಂಗಳೂರಿನ ರಸ್ತೆ ಬದಿಯ ಎಳನೀರು ಮಾರಾಟಗಾರರ ಪೋಸ್ಟರ್ ವೈರಲ್ ಆಗಿದೆ . ಅವರು ಗ್ರಾಹಕರಿಗೆ ಎಳನೀರನ್ನು ಕೇವಲ 55 ರೂ.ಗೆ ನೀಡುವುದಾಗಿ ಹೇಳಿದ್ದಾರೆ. ಬೆಲೆಗಳ ವ್ಯತ್ಯಾಸವನ್ನು ಕಾಣಿಸಿದ್ದಾರೆ. ಈ ಪೋಸ್ಟರ್‌ನಲ್ಲಿ ಝೆಪ್ಟೋ, ಬ್ಲಿಂಕಿಟ್, ಬಿಗ್‌ಬಾಸ್ಕೆಟ್‌ಗಳಲ್ಲಿ 70 ರೂಪಾಯಿ – 80 ರೂಪಾಯಿ ಆಸುಪಾಸಿನಲ್ಲಿದೆ ತೆಂಗಿನಕಾಯಿ ದರ. ಆದರೆ ನಮ್ಮ ಅಂಗಡಿಯಲ್ಲಿ ಕೇವಲ 55 ರೂಪಾಯಿ ಎಂದು ದಾಖಲಿಸಿದ್ದರು ಆ ಪೋಸ್ಟರ್‌ನಲ್ಲಿ. ಇದು ವೈರಲ್ ಆಗಿತ್ತು ಹಾಗೂ ಸಾಕಷ್ಟು ಚರ್ಚೆಯೂ ಆಗಿತ್ತು. ಈ ಪೋಸ್ಟರ್ ಗಮನಿಸಿದ ಗ್ರಾಹಕರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದನ್ನು ಪೀಕ್ ಬೆಂಗಳೂರು ಎನ್ನುವ ಹ್ಯಾಂಡಲ್ ಮೂಲಕ ಶೇರ್ ಮಾಡಲಾಗಿತ್ತು, ಇದು ವೈರಲ್ ಆಗಿದ್ದು, ಚರ್ಚೆಯಾಗಿದೆ. ಅನೇಕರು ಪ್ರಶಂಸಿದರೆ, ಇನ್ನೂ ಕೆಲವು ಮನೆ ಬಾಗಿಲಿಗೆ ತಂದು ನೀಡುತ್ತಾರೆಯೇ, ಗುಣಮಟ್ಟ ನೀಡುತ್ತಾರೆಯೇ ಇತ್ಯಾದಿ ಪ್ರಶ್ನೆಗಳನ್ನೂ ಕೇಳಿದ್ದಾರೆ. ಕೆಲವರು ಅವರನ್ನು ಬೆಂಬಲಿಸುವ ಅಗತ್ಯತೆಯನ್ನು ಹೇಳಿದ್ದಾರೆ, ಇನ್ನೂ ಕೆಲವರು ಆನ್‌ಲೈನ್ ವಿತರಣೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ತಂದು ನೀಡುವ ಕಾರಣದಿಂದ ಹೆಚ್ಚಿನ ಶುಲ್ಕ ಇದೆ ಎಂದು ಹೇಳಿದ್ದಾರೆ.
ಈಚೆಗೆ ನಡೆದ ಸಮೀಕ್ಷೆಯೊಂದರ ಪ್ರಕಾರ ಇ ಮಾರುಕಟ್ಟೆಯ ಕಾರಣದಿಂದ ಹಾಗೂ ಈಚೆಗೆ ವಿಸ್ತರಣೆಯ ವೇಗದ ಕಾರಣದಿಂದ ಸುಮಾರು 25 ರಿಂದ 30% ಸ್ಥಳೀಯ ಅಂಗಡಿಗಳ ನಷ್ಟವಾಗಬಹುದು ಎಂದು ವರದಿ ಉಲ್ಲೇಖಿಸಿದೆ. ಇಂತಹ ಸಂದರ್ಭದಲ್ಲಿ ರಸ್ತೆ ಬದಿಯ ಸಣ್ಣ ವ್ಯಾಪಾರಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು, ವ್ಯವಹಾರದಲ್ಲಿ ಯಶಸ್ಸು ಕಾಣಲು ಇಂತಹ ತಲನಾತ್ಮಕ ಅಂಶಗಳೂ ಇಂದು ಮುಖ್ಯವಾಗಿದೆ. ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ನಾನಾ ರೀತಿಯ ಕಸರತ್ತು ಮಾಡಬೇಕಾಗಿದೆ. ವ್ಯಾಪಾರಿಯ ಸೃಜನಶೀಲತೆಯ ಆಧಾರದಲ್ಲಿಯೇ ಇಂದು ಸ್ಥಳೀಯ ಮಾರುಕಟ್ಟೆಗಳು ಉಳಿದುಕೊಂಡಿದೆ.
ಗ್ರಾಹಕರು ಹಣವನ್ನು ಉಳಿಸಲು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಾರೆ. ನಾಲ್ಕೈದು ವೆಬ್ ಸೈಟ್ ಚೆಕ್ ಮಾಡಿ ಕಡಿಮೆ ಬೆಲೆ ಎಲ್ಲಿದೆ ಅಲ್ಲಿಂದ ಆರ್ಡರ್ ಮಾಡುತ್ತಾರೆ. ಆದರೆ ರಸ್ತೆ ಬದಿ ವ್ಯಾಪಾರಿ ತನ್ನ ಗ್ರಾಹಕರಿಗೆ ಹೆಚ್ಚಿನ ಹೊರೆ ನೀಡದೆ ಕಡಿಮೆ ಬೆಲೆಯಲ್ಲಿ ಹೇಗೆ ನೀಡುತ್ತಾರೆ ಎನ್ನುವ ಅಂಶವನ್ನು ಇಲ್ಲಿ ಉಲ್ಲೇಖಿಸಿರುವುದು ಗಮನ ಸೆಳೆದಿದೆ.
ಇದೇ ಮಾದರಿ ತೆಂಗು ಬೆಳೆಗಾರರಿಗೆ ಏಕೆ ಸಾಧ್ಯವಾಗುತ್ತಿಲ್ಲ..?. ಇ ಮಾರುಕಟ್ಟೆ ಮೂಲಕ ತೆಂಗಿನಕಾಯಿ ಅಥವಾ ಎಳನೀರು 70-90 ರೂಪಾಯಿವರೆಗೂ ಮಾರಾಟವಾಗುವುದಾದರೆ, ತೆಂಗು ಬೆಳೆಗಾರರಿಗೆ ಏಕೆ ಲಭ್ಯವಾಗುತ್ತಿಲ್ಲ?. ಇಡೀ ವರ್ಷದ ಬೆಳೆ ಬೆಳೆದು ಅದಕ್ಕೆ ಲಭ್ಯವಾಗುವ ಹಣ 30-40 ರೂಪಾಯಿ..!. ಉಳಿದ ಶೇ.50 ರಷ್ಟು ಹಣ ಮಾರುಕಟ್ಟೆಯಲ್ಲಿ ಕರಗುತ್ತದೆಯಾದರೆ ರೈತರೇ ಇಂತಹ ಮಾರುಕಟ್ಟೆಯನ್ನು ಏಕೆ ಕಂಡುಕೊಳ್ಳಬಾರದು..?.