ರೈತರು ತಮ್ಮ ಪೂರ್ವಜರ ಹೆಸರಿನಲ್ಲಿರುವ ಜಮೀನನ್ನು ತಮ್ಮ ಹೆಸರಿಗೆ ಸುಲಭವಾಗಿ ವರ್ಗಾಯಿಸಿಕೊಳ್ಳಲು ಕಂದಾಯ ಇಲಾಖೆಯು ಇ-ಪೌತಿ ಎಂಬ ವಿಶೇಷ ಅಭಿಯಾನವನ್ನು ನವೆಂಬರ್ 5,2025ರಿಂದ ನವೆಂಬರ್ 22,2025ರವರೆಗೆ ನಡೆಯಲಿದ್ದು, ಈ ಅಭಿಯಾನದ ಮೂಲಕ ತ್ವರಿತ, ಪಾರದರ್ಶಕ ಮತ್ತು ಡಿಜಿಟಲ್ ಆಧಾರಿತ ಖಾತೆ ಬದಲಾವಣೆ ಸಹಾಯಕವಾಗಲಿದೆ.
ಮರಣ ಹೊಂದಿದ ಹೆಸರಿನಲ್ಲಿ ಜಮೀನನ್ನು ಅವರ ಕಾನೂನುಬದ್ಧ ವಾರಸುದಾರರ ಹೆಸರಿಗೆ ವರ್ಗಾಯಿಸುವ ಪ್ರಕ್ರಿಯೆ ಸಂಕೀರ್ಣವಾಗಿದ್ದು, ದೀರ್ಘಕಾಲ ತೆಗೆದುಕೊಳ್ಳುತ್ತಿತ್ತು ಮತ್ತು ರೈತರಿಗೆ ತೊಂದರೆಯಾಗುತ್ತಿರುವ ಮತ್ತು ರೈತರ ಈ ಸಮಸ್ಯೆಯನ್ನು ನಿವಾರಿಸುವುದೇ ಈ ಅಭಿಯನದ ಮುಖ್ಯ ಉದ್ದೇಶ.
ಇ-ಪೌತಿಗೆ ಅರ್ಜಿ ಸಲ್ಲಿಸುವುದು ಹೇಗೆ ಮೃತ ರೈತರ ಕಾನೂನುಬದ್ಧ ವಾರಸುದಾರರನ್ನು ಖಚಿತಪಡಿಸುವ ದಾಖಲೆ. ಎರಡು ಮರಣ ಪ್ರಮಾಣಪತ್ರ- ಜಮೀನಿನ ಮೂಲ ಮಾಲೀಕರ ಮರಣ ಪ್ರಮಾಣಪತ್ರ, ಮೂರು ಆಧಾರ್ ಕಾರ್ಡ್- ಮೃತ ವ್ಯಕ್ತಿ ಮತ್ತು ಎಲ್ಲಾ ವಾರಸುದಾರರ ಆಧಾರ್ ಕಾರ್ಡ್ ಪ್ರತಿಗಳು. ನಾಲ್ಕು ಗಣಕೀಕೃತ ಪಹಣಿ- ಜಮೀನಿಗೆ ಸಂಬಂಧೀಸಿದ ಪ್ರಸ್ತುತ ಪಹಣಿ ದಾಖಲೆ. ಈ ದಾಖಲೆಗಳು ಸಂಪೂರ್ಣವಾಗಿರುವುದು ಅಗತ್ಯ. ಇನ್ನು ಈ ದಾಖಲೆಗಳನ್ನು ಸಮೀಪದ ನಾಡಕಚೇರಿ, ತಾಲ್ಲೂಕು ಕಚೇರಿ ಅಥವಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಎಲ್ಲಾ ವಾರಸುದಾರರ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಪ್ರತ್ಯೇಕವಾಗಿ ಒಟಿಪಿ ಕಳುಹಿಸಲಾಗುತ್ತದೆ. ಖಾತೆ ಬದಲಾವಣೆಗೆ ತಮ್ಮ ಸಂಪೂರ್ಣ ಸಮ್ಮತಿ ಇದೆ ಎಂದು ಖಚಿತಪಡಿಸಲು ಪ್ರತಿ ವಾರಸುದಾರರು ತಮ್ಮ ಒಟಿಪಿಯನ್ನು ಅಧಿಕಾರಿಗಳಿಗೆ ತಿಳಿಸಬೇಕು. ಎಲ್ಲಾ ವಾರಸುದಾರರು ಒಪ್ಪಿಗೆ ದೊರೆತ ತಕ್ಷಣ ಪೌತಿ ಖಾತೆಯನ್ನು ಯಶಸ್ವಿಯಾಗಿ ದಾಖಲಿಸಲಾಗುವುದು.

