ಮಧ್ಯ ಪ್ರದೇಶದ ರಾಜ್ಯದ ವಿದಿಶಾ ಮತ್ತು ರೈಸೇನ್‌ನಿಂದ ಬಿಡುಗಡೆಯಾದ ರಣಹದ್ದು ಎಂಟು ತಿಂಗಳ ನಂತರ ಭಾರತಕ್ಕೆ ಮರಳಿದ್ದು, ಈ ಪಕ್ಷಿ 15,000 ಕಿಲೋಮೀಟರ್ ಪ್ರಯಾಣಿಸಿದೆ. ಅರಣ್ಯ ಇಲಾಖೆಯು ರಣಹದ್ದಿಗೆ ಉಪಗ್ರಹ ರೇಡಿಯೋ ಕಾಲರ್ ಅಳವಡಿಸಿದ್ದು, ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿತ್ತು. ಈ ರಣಹದ್ದನ್ನು ಮಾರ್ಚ್ 29ರಂದು ವಿದಿಶಾ-ರೈಸೆನ್‍ನಲ್ಲಿರು ಹಲಾಲಿ ಅಣೆಕಟ್ಟಿನಲ್ಲಿ ಅರಣ್ಯ ಇಲಾಖೆಯು ಉಪಗ್ರಹ ರೇಡಿಯೋ ಕಾಲರ್ ಅಳವಡಿಸಿ ಬಿಡುಗಡೆ ಮಾಡಲಾಗಿದ್ದು, ಇದು ಎಂಟು ತಿಂಗಳ ನಂತರ ಅಂದರೆ ಸುಮಾರು 15,000 ಕಿಲೋಮೀಟರ್ ಪ್ರಯಾಣಿಸಿ ಇದೀಗ ಭಾರತಕ್ಕೆ ಮರಳಿದೆ.
ಹದ್ದು ತನ್ನ ಪ್ರಯಾಣದ ಸಮಯದಲ್ಲಿ ಪಾಕಿಸ್ತಾನ, ಅಫ್ಫಾನಿಸ್ತಾನ, ಉಜ್ಬೇಕಿಸ್ತಾನ್ ಮತ್ತು ಕಝಾಕಿಸ್ತಾನ್‍ಗೆ ಪ್ರಯಾಣಿಸಿದ್ದು, ಪ್ರಸ್ತುತ ಇದು ರಾಜಸ್ಥಾನದ ಧೋಲ್ಬುರ್ ಜಿಲ್ಲೆಯ ಬಳಿ ಇದೆ ಎಂದು ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಹಲಾಲಿ ಅಣೆಕಟ್ಟಿನಿಂದ ಬಿಡುಗಡೆಯಾದ ಒಂದು ತಿಂಗಳೊಳಗೆ ರಣಹದ್ದು ಕಜಕಿಸ್ತಾನ್ ತಲುಪಿದೆ. ಮೇ ತಿಂಗಳಲ್ಲಿ ಕಜಕಿಸ್ತಾನ್‌ಗೆ ಬಂದ ನಂತರ ಅದು ನಾಲ್ಕು ತಿಂಗಳು ಅಲ್ಲೇ ಇತ್ತು. ನಂತರ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನ್ ಮೂಲಕ ಭಾರತಕ್ಕೆ ಮರಳಿದೆ. ರಣಹದ್ದು ಪ್ರಸ್ತುತ ರಾಜಸ್ಥಾನದ ಬಳಿಯ ಧೋಲ್ಪುರದಲ್ಲಿ ಬೀಡುಬಿಟ್ಟಿದೆ ಎಂದು ವಿದಿಶಾ ಡಿಎಫ್‌ಒ ಹೇಮಂತ್ ಯಾದವ್ ಹೇಳಿದರು.

