ಸಾಗರದೊಳಗೆ ಸಿಕ್ಕಿತು ಭೂಮಿ ತಂಪಾಗಿಸುವ ಪಾಚಿ | ಈ ಆಲ್ಗೆ ಕಂಡು ಹಿಡಿದ ವಿಜ್ಞಾನಿಗಳು ಏನು ಹೇಳ್ತಾರೆ..? | ಇದು ಭೂಮಿ ತಂಪಾಗಿಸುವುದಾದರೂ ಹೇಗೆ?

June 13, 2024
2:55 PM

ದಿನದಿಂದ ದಿನಕ್ಕೆ ಭೂಮಿ(Earth) ಕಾದ ಬಾಣಲೆಯಂತಾಗುತ್ತಿದೆ. ಇದಕ್ಕೆ ಕಾರಣ  ಹವಾಮಾನ ವೈಪರೀತ್ಯ(Climate Change). ಕಳೆದ ಮುಂಗಾರು ಕೈ ಕೊಟ್ಟ ಹಿನ್ನೆಲೆ  ಕಳೆದ ವರ್ಷವನ್ನು ಭೂಮಿಯ ಅತ್ಯಂತ ಶಾಖದ ವರ್ಷ ಎಂದು ಕೂಡ ದಾಖಲಾಗಿದೆ. ಪರಿಸರವನ್ನು ಕಾಪಾಡಿ, ಮರಗಳನ್ನು ಹೆಚ್ಚು ಹೆಚ್ಚು ನೆಡುವ ಕಾರ್ಯ ಆಗಬೇಕಿದೆ. ಹಾಗೆ  ಭೂಮಿಯನ್ನು ತಂಪಾಗಿಸುವ ನಿಟ್ಟಿನಲ್ಲಿ ಪರಿಹಾರದ ಕ್ರಮಗಳ ಕುರಿತು ಸಂಶೋಧಕರು ನಿರಂತರ ಸಂಶೋಧನಾ(Research) ಕಾರ್ಯಕ್ಕೆ ಮುಂದಾಗಿದ್ದಾರೆ. ಈ ನಡುವೆ ಭೂಮಿಯ ಹವಾಮಾನವನ್ನು ತಂಪು(cool Earths climate) ಮಾಡಲು ಸಹಾಯ ಮಾಡುವ ಹೊಸ ಪಾಚಿಯೊಂದನ್ನು(Algae) ಅಂತಾರಾಷ್ಟ್ರೀಯ ಸಂಶೋಧಕರ ತಂಡ ಪತ್ತೆ ಮಾಡಿದೆ.

Advertisement
Advertisement

ಸಾಗರದಾಳದಲ್ಲಿರುವ(ocean) ಈ ಆಲ್ಗೆಗಳು ಭೂಮಿಯ ಹವಾಮಾನವನ್ನು ತಂಪಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದು ಬೃಹತ್​ ಪ್ರಮಾಣದಲ್ಲಿ ಸಂಯುಕ್ತವನ್ನು ಉತ್ಪಾದಿಸುತ್ತಿದ್ದು, ಭೂಮಿ ತಂಪಾಗಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ಹೊಂದಿದೆ ಎಂದಿದ್ದಾರೆ ವಿಜ್ಞಾನಿಗಳು. ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯ (ಯುಇಎ) ಮತ್ತು ಓಷನ್ ಯೂನಿವರ್ಸಿಟಿ ಆಫ್ ಚೀನಾದ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಈ ಪಾಚಿಗಳು ರೂಪುಗೊಳ್ಳುವಾಗ ಪೆಲಾಗೋಫೈಸಿ ಪಾಚಿಗಳನ್ನು ಡೈಮಿಥೈಲ್ಸಲ್ಫೋನಿಯೋಪ್ರೊಪಿಯೋನೇಟ್ (ಡಿಎಂಎಸ್​ಪಿ) ಎಂಬ ಸಂಯುಕ್ತವನ್ನು ಹೆಚ್ಚಾಗಿ ಉತ್ತಾದಿಸುತ್ತದೆ. ಇದು ಭೂಮಿ ತಂಪಾಗಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ

ಭೂಮಿ ಮೇಲೆ ಪೆಲಗೊಪೂಸಿಯಾ ಎಂಬ ಪಾಚಿ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಆದರೆ, ಇವು ಡಿಎಂಎಸ್​ಪಿಯ ಪ್ರಮುಖ ಉತ್ಪಾದಕರು ಎಂದು ಹಿಂದೆ ತಿಳಿದಿರಲಿಲ್ಲ ಎಂದು ಯುಇಎ ಬಯೋಲಾಜಿಕಲ್ ಸೈನ್ಸಸ್‌ನ ಪ್ರೊಫೆಸರ್ ಜೊನಾಥನ್ ಟಾಡ್ ತಿಳಿಸಿದ್ದಾರೆ. ಈ ಆವಿಷ್ಕಾರವೂ ಉತ್ಸಾಹ ದಾಯಕವಾಗಿದ್ದು, ಡಿಎಂಎಸ್​ಪಿ ಹೇರಳವಾದ ಆಂಟಿಸ್ಟ್ರೆಸ್ ಸಂಯುಕ್ತವಾಗಿದೆ. ಇದು ಸೂಕ್ಷ್ಮಾಣುಜೀವಿಗಳಿಗೆ ಆಹಾರ ಮೂಲವಾಗಿದ್ದು, ಹವಾಮಾನ ತಂಪಾಗಿಸುವ ಅನಿಲಗಳ ಪ್ರಮುಖ ಮೂಲವಾಗಿದೆ. ಡಿಎಂಎಸ್​ಪಿ ಡಿಎಂಎಸ್​ ಎನ್ನುವ ಹವಾಮಾನದ ಸಕ್ರಿಯ ಅನಿಲದ ಮೂಲವಾಗಿದೆ. ಇದುನ್ನು ಕಡಲ ತೀರದ ವಾಸನೆ ಎಂದು ಕರೆಯಲಾಗುವುದು.

ಈ ಅಧ್ಯಯನವನ್ನು ನೇಚರ್ ಮೈಕ್ರೋಬಯಾಲಜಿಯಲ್ಲಿ ಪ್ರಕಟಿಸಲಾಗಿದೆ. ಡಿಎಂಎಸ್​ಪಿ ಉತ್ಪಾದಕತೆ ಮತ್ತು ಡಿಎಂಎಸ್​​ ಬಿಡುಗಡೆಯು ಊಹಿಸಿದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಜಾಗತಿಕ ಹವಾಮಾನ ನಿಯಂತ್ರಿಸುವಲ್ಲಿ ಸೂಕ್ಷ್ಮ ಜೀವಿಗಳ ಪಾತ್ರವನ್ನು ತಿಳಿಸಿದೆ. ಡಿಎಂಎಸ್​ ಆಕ್ಸಿಡೀಕರಣ ಉತ್ಪನ್ನಗಳು ಭೂಮಿಯಿಂದ ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಮೋಡಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಪರಿಣಾಮಕಾರಿಯಾಗಿ ಗ್ರಹವನ್ನು ತಂಪಾಗಿಸುತ್ತದೆ. ಈ ಅಲ್ಗೆಯ ನೈಸರ್ಗಿಕ ಪ್ರಕ್ರಿಯೆಯು ಭೂಮಿಯ ಹವಾಮಾನವನ್ನು ನಿಯಂತ್ರಿಸಲು ಅತ್ಯಗತ್ಯವಾಗಿದೆ. ಜಾಗತಿಕ ಸಲ್ಫರ್ ಚಕ್ರಕ್ಕೆ ಅವಶ್ಯವಾಗಿದೆ. ಸಾಗರಗಳಿಂದ ಸಲ್ಫರ್​ ಅನ್ನು ಭೂಮಿಗೆ ಹಿಂದಿರುಗಿಸುವ ಮುಖ್ಯ ಮಾರ್ಗವನ್ನು ಇದು ತಿಳಿಸುತ್ತದೆ.

Source : IANS

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬದುಕಿಗೆ ಧರ್ಮದ ತಳಹದಿ ಅಗತ್ಯ : ರಾಘವೇಶ್ವರ ಶ್ರೀ
July 26, 2025
2:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 26-07-2025 | ಜುಲೈ ಅಂತ್ಯದವರೆಗೂ ಸಾಮಾನ್ಯ ಮಳೆ | ಕಾರಣ ಏನು ?
July 26, 2025
11:18 AM
by: ಸಾಯಿಶೇಖರ್ ಕರಿಕಳ
ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ
July 26, 2025
8:18 AM
by: ದ ರೂರಲ್ ಮಿರರ್.ಕಾಂ
ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧ
July 26, 2025
7:38 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group