ಮಣ್ಣು ಕೊರೆಯುವ ಜೀವಿಗಳು | ನಮ್ಮ ಜಮೀನಿನಲ್ಲಿ ಇವುಗಳಿದ್ದರೆ ಆಗುವ ಪ್ರಯೋಜನಗಳೇನು..?

August 10, 2024
5:19 PM

ಮಣ್ಣು(Soil) ಭೂಮಿಯ(Earth)ಪರಿಸರದ(Environment) ಒಂದು ಪ್ರಮುಖ ಅಂಶ.  ಇದು ಜೀವಂತ ಜೀವಿಗಳಿಗೆ ಆವಾಸಸ್ಥಾನವನ್ನು ಒದಗಿಸುತ್ತದೆ. ಇದು ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಎರೆಹುಳುಗಳಂತಹ ಸಣ್ಣ ಪ್ರಾಣಿಗಳನ್ನು ಒಳಗೊಂಡಂತೆ ಸೂಕ್ಷ್ಮಜೀವಿಗಳ ಜೀವನದಿಂದ ತುಂಬಿದೆ. ಈ ಜೀವಿಗಳು ಮಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ಕಾರ್ಬನ್ ಮತ್ತು ಇತರ ವಸ್ತುಗಳ ಸೈಕ್ಲಿಂಗ್ನಲ್ಲಿ ಸಹಾಯ ಮಾಡುತ್ತವೆ. ಈ ಎಲ್ಲಾ ಜೀವಿಗಳು ಆಶ್ರಯ, ಆಹಾರ ಮತ್ತು ಸಂತಾನೋತ್ಪತ್ತಿಗೆ ಸ್ಥಳವನ್ನು ಒದಗಿಸಲು ಮಣ್ಣಿನ ಮೇಲೆ ಅವಲಂಬಿತವಾಗಿವೆ. ಮಣ್ಣು ಪರಿಸರದ ಅತ್ಯಗತ್ಯ ಭಾಗವಾಗಿದೆ. ಮಣ್ಣು ಕೊರೆಯುವ ಜೀವಿಗಳು ಮಣ್ಣೊಳಗಿನ ಮತ್ತು ಮಣ್ಣು ಮೇಲಿನ ಪ್ರಾಕೃತಿಕ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ವ್ಯವಸ್ಥೆಯಲ್ಲಿ ಎರೆಹುಳುಗಳು ಪ್ರಮುಖ ಪಾತ್ರ ವಹಿಸುತ್ತವೆ.

Advertisement
Advertisement
Advertisement
Advertisement

ನಮ್ಮ ಹೊಲದ ಮಣ್ಣುಗಳಲ್ಲಿ ಎರೆಹುಳುಗಳಿದ್ದರೆ ಆಗುವ ಲಾಭವೇನು ಗೊತ್ತೇ? :

Advertisement
  •  ಮಣ್ಣಲ್ಲಿ ಗಾಳಿಯಾಡುವಿಕೆ: ಎರೆಹುಳುಗಳು ಮಣ್ಣಲ್ಲಿ ಓಡಾಡುವಲ್ಲೆಲ್ಲಾ ಸಣ್ಣ ಸುರಂಗ ನಿರ್ಮಾಣವಾಗುತ್ತದೆ. ಈ ಸುರಂಗದೊಳಗೆ ಗಾಳಿಯಾಡುತ್ತದೆ. ಜೊತೆಗೆ ಮಳೆನೀರು ಕೂಡಾ ಮಣ್ಣೊಳಗೆ ಸುರಂಗದ ಮೂಲಕ ಮಣ್ಣೊಳಗೆ ಹರಿಯುತ್ತಾ ಮಣ್ಣಿನಾಳಕ್ಕೆ ಇಳಿಯುತ್ತದೆ. ಇದರಿಂದ ಗಟ್ಟಿ ಪದರವಿರುವ ಮಣ್ಣು ಸಡಿಲವಾಗುತ್ತದೆ. ಇಂತಹ ಸಡಿಲ ಮಣ್ಣೊಳಗೆ ಗಿಡದ ಬೇರುಗಳು ಇಳಿಯಲು ಬೆಳೆಯಲು ಸಹಕಾರಿ.
  •  ಮಣ್ಣಲ್ಲಿ ಪೋಷಕಾಂಶಗಳ ಸೃಷ್ಟಿ: ಎರೆಹುಳುಗಳು ಒಣವಸ್ತುಗಳನ್ನು ಮೆಲ್ಲುತ್ತಾ ನಿಧಾನವಾಗಿ ಅವುಗಳನ್ನು ವಿಘಟಿಸುತ್ತದೆ. ಹೀಗೆ ಚೂರುಚೂರಾಗುವ ಸಾವಯವ ಒಣವಸ್ತುಗಳು ಕ್ರಮೇಣ ಮಣ್ಣಲ್ಲಿ ಬೆರೆತು ಕರಗಿ ಗೊಬ್ಬರವಾಗುತ್ತದೆ. ಈ ಗೊಬ್ಬರದಲ್ಲಿ ಹಲವು ಬಗೆಯ ಪೋಷಕಾಂಶಗಳು ಸೃಷ್ಟಿಯಾಗುತ್ತವೆ. ಮಣ್ಣಲ್ಲಿರುವ ಈ ಪೋಷಕಾಂಶಗಳನ್ನು ಗಿಡದ ಬೇರುಗಳು ಹೀರಿ ಗಿಡದ ಮೇಲ್ಭಾಗಕ್ಕೆ ರವಾನಿಸುತ್ತವೆ.
  •  ಮಣ್ಣಿನ ರಚನೆ: ಎರೆಹುಳುಗಳು ಮಣ್ಣಿನ ರಚನೆಯನ್ನು ಸುಧಾರಿಸುತ್ತವೆ ಹಾಗೂ ಮಣ್ಣಲ್ಲಿ ನೀರು ಹೀರುವ ಹಾಗೂ ದೀರ್ಘಕಾಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಲು ಸಹಕರಿಸುತ್ತವೆ. ಈ ಬೆಳವಣಿಗೆಗಳ ಕಾರಣದಿಂದ ಮಣ್ಣು ಫಲವತ್ತಾಗುತ್ತದೆ. ಅದರ ಉತ್ಪಾದನಾ ಶಕ್ತಿ ಹೆಚ್ಚುತ್ತದೆ.
  •  ಮಣ್ಣಲ್ಲಿ ಸಿಂಗಾರದ ಮನೆಯ ನಿರ್ಮಾಣ: ಎರೆಹುಳುಗಳು ತಾವಿರುವ ತಾಣವನ್ನು ಉತ್ತಮವಾಗಿ ಹಾಗೂ ತಂಪಾಗಿರಿಸುವದರ ಮೂಲಕ ಇನ್ನಿತರ ಮಣ್ಣು ಜೀವಿಗಳೂ ಸಹ ತಾನಿರುವ ಮಣ್ಣಲ್ಲೇ ನೆಲೆಯೂರುವಂತೆ ಮಣ್ಣನ್ನು ಸಿಂಗರಿಸುತ್ತವೆ.
  •  ಜೀವಿವೈವಿಧ್ಯತೆ: ಎರೆಹುಳುಗಳು ಮಣ್ಣಲ್ಲಿ ಗುಣಮಟ್ಟದ ಆಹಾರಚಕ್ರವನ್ನು ಸೃಷ್ಟಿಸುವ ಮೂಲಕ ಮಣ್ಣಲ್ಲಿ ವೈವಿಧ್ಯಮಯ ಜೀವಿಗಳು ನೆಲೆಯೂರುವಂತೆ ಮಾಡುತ್ತವೆ.
  •  ಬೇಸಾಯ: ಎರೆಹುಳುಗಳನ್ನು ಗೊಬ್ಬರದ ಉತ್ಪಾದನೆಗಾಗಿ ಬೆಳೆಸಲಾಗುತ್ತಿದೆ. ಎರೆಹುಳುಗಳು ಸೃಷ್ಟಿಸುವ ಗೊಬ್ಬರದ ಗುಣಮಟ್ಟ ಅತ್ಯುತ್ತಮ ಎಂದು ಹೆಸರು ಪಡೆದಿದೆ.

ಮಣ್ಣಿನ ಅರೋಗ್ಯ ಸ್ಥಿತಿಯನ್ನು ಪರಿಶೀಲಿಸುವಾಗ, ತಜ್ಞರು ಮಣ್ಣಲ್ಲಿ ಎರೆತಜ್ಞರು ಮಣ್ಣಿನ ಸ್ಥಿತಿಗತಿಯನ್ನು ಪರಿಶೀಲಿಸುವಾಗ, ಮಣ್ಣಲ್ಲಿ ಎರೆಹುಳುಗಳಿವೆಯೇ ಎಂದು ಮೊದಲು ಗಮನಿಸುತ್ತಾರೆ. ಮಣ್ಣಲ್ಲಿ ಎರೆಹುಳುಗಳಿದ್ದಲ್ಲಿ, ಆ ಮಣ್ಣಿನ ಗುಣಮಟ್ಟ ಚೆನ್ನಾಗಿದೆ ಎಂದೇ ಅರ್ಥ.

Source: Teacher Michael Gold

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಒಂದು ಸಮೂಹದ ಅನಿವಾರ್ಯತೆ ಮತ್ತು ಬದುಕು
January 31, 2025
8:14 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
Weather Updates | ಕರಾವಳಿ ಭಾಗದಲ್ಲಿ ಮಳೆಯ ಸಾಧ್ಯತೆ ಕ್ಷೀಣ |
January 30, 2025
11:47 AM
by: ಸಾಯಿಶೇಖರ್ ಕರಿಕಳ
ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗೆ ಕ್ರಮ | ರೈತರ ಜತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚರ್ಚೆ
January 30, 2025
7:28 AM
by: The Rural Mirror ಸುದ್ದಿಜಾಲ
5 ಲಕ್ಷ ರಸ್ತೆ ಅಪಘಾತ, 1.80 ಲಕ್ಷ ಮಂದಿ ಬಲಿ |
January 30, 2025
7:24 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror