ಮತ್ತೆ ಭೂಕಂಪನ | 2.1 ರಷ್ಟು ತೀವ್ರತೆ | ಏನಿದು ಸದ್ದು ? ಯಾಕೆ ಕಂಪನ ? | ಜನರ ಪ್ರಶ್ನೆ |

July 1, 2022
12:18 PM

ಸುಳ್ಯ ತಾಲೂಕಿನ ವಿವಿದೆಡೆ ಜೂ.30 ತಡರಾತ್ರಿ ಭೂಕಂಪನದ ಬಳಿಕ  ಇದೀಗ ಮತ್ತೆ 10.45 ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದೆ ಎಂದು ಜನತೆ ಹೇಳಿದ್ದಾರೆ. ಸುಳ್ಯ ತಾಲೂಕಿನ ಉಬರಡ್ಕ, ಚೆಂಬು, ಗೂನಡ್ಕದಲ್ಲಿ ಭೂಮಿ ಕಂಪನದ ಅನುಭವವಾಗಿದೆ ಎಂದು ಜನರು ಹೇಳಿದ್ದಾರೆ. ಬೆಳಗಿನ ಭೂಕಂಪನವು 2.1 ರಷ್ಟು ತೀವ್ರತೆ ಇತ್ತು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಮತ್ತೆ ಮತ್ತೆ ಭೂಕಂಪನಕ್ಕೆ  ಕಾರಣ ಏನು ಹಾಗೂ ಏಕೆ ಕಂಪನವಾಗುತ್ತಿದೆ. ಇದುವರೆಗೆ ಒಟ್ಟು 5 ನೇ ಬಾರಿ ಭೂಮಿ ಕಂಪನವಾಗಿದೆ. ಇದು ಏಕೆ ಎಂಬುದು ಈಗ ಜನರ ಪ್ರಶ್ನೆಯಾಗಿದೆ.

ಜೂ.30 ತಡರಾತ್ರಿ 1.15 ಕ್ಕೆ ಭೂಕಂಪನದ ತೀವ್ರತೆ 2.5 ಮ್ಯಾಗ್ನಿಟ್ಯೂಡ್‌ ಇತ್ತು ಎಂದು ಕೇಂದ್ರ ಸರ್ಕಾರದ ಭೂಗರ್ಭ ಇಲಾಖೆ ಅಧಿಕೃತವಾಗಿ ತಿಳಿಸಿದೆ.  ಬೆಳಗಿನ ಭೂಕಂಪನವು 2.1 ರಷ್ಟು ತೀವ್ರತೆ ಇತ್ತು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಇಲಾಖೆಯ ಚೆಂಬು ಪ್ರದೇಶದಲ್ಲಿ ಭೂಕಂಪನವನ್ನು ತಿಳಿಯುವ ಸಾಧನವನ್ನು ಇರಿಸಿದೆ. ಕಳೆದ 24 ಗಂಟೆಯಲ್ಲಿ 32 ಬಾರಿ ಲಘುಪ್ರಮಾಣದಲ್ಲಿ ಭೂಮಿ ಕಂಪಿಸಿದೆಯೇ ಎನ್ನುವ ಪ್ರಶ್ನೆ ಇದೆ. ಆದರೆ 2 ಬಾರಿ ಮಾತ್ರಾ ಅನುಭವವಾಗಿದೆಯೇ ? ಈ ಬಗ್ಗೆ ಅಧಿಕೃತವಾಗಿ ಇಲಾಖೆಗಳು ಸ್ಪಷ್ಟಪಡಿಸಬೇಕಿದೆ. ಸಂಪಾಜೆ, ಚೆಂಬು ಸೇರಿದಂತೆ ಆಸುಪಾಸಿನ ಪ್ರದೇಶದ ಈ ಕಂಪನಗಳು ಜನರನ್ನು ಆತಂಕಕ್ಕೀಡು ಮಾಡಿದೆ. 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 18-03-2026 | ಗುಡುಗು-ಆಲಿಕಲ್ಲು ಮಳೆ ಅಲರ್ಟ್‌ | ರಾಜ್ಯಾದ್ಯಂತ ಹವಾಮಾನ ಬದಲಾವಣೆ..!
March 18, 2026
1:40 PM
by: ಸಾಯಿಶೇಖರ್ ಕರಿಕಳ
ದಕ್ಷಿಣ ಕನ್ನಡ–ಉಡುಪಿ ಭಾಗದಲ್ಲಿ 8–10% ಎಳೆ ಅಡಿಕೆ ಉದುರಿದೆ…!, ರಾಜ್ಯದಲ್ಲಿ ಎಲೆಚುಕ್ಕೆ ರೋಗದಿಂದ 88,559 ಹೆಕ್ಟೇರ್ ಹಾನಿ
March 18, 2026
7:15 AM
by: ದ ರೂರಲ್ ಮಿರರ್.ಕಾಂ
ಚಾಮರಾಜನಗರ–ಬೆಳಗಾವಿಯಲ್ಲಿ ಭಾರೀ ಆಲಿಕಲ್ಲು ಮಳೆ | ಬಿಸಿಲಿನ ನಡುವೆ ಇಳೆ ತಂಪು, ರೈತರಿಗೆ ಆತಂಕ
March 18, 2026
6:51 AM
by: ಮಿರರ್‌ ಡೆಸ್ಕ್
ವಿದ್ಯುತ್ ಕೊರತೆಯ ನಿರ್ಣಾಯಕ ಸಮಸ್ಯೆಗೆ ಪರಿಹಾರ : ದೇಶದ ಸ್ಥಾಪಿತ ಸಾಮರ್ಥ್ಯ 520 ಗಿಗಾ ವ್ಯಾಟ್‌ ದಾಟಿತು
March 18, 2026
6:44 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror