ಪದೇ ಪದೇ ಭೂಮಿ ಕಂಪನ | ಮತ್ತೆ ಆತಂಕಕ್ಕೆ ಒಳಗಾಗುವ ಜನ | ಕಲ್ಮಕಾರು-ಸಂಪಾಜೆ ಪ್ರದೇಶದಲ್ಲಿ ಮತ್ತೆ ಆತಂಕ | ಭೂಮಿ ಕಂಪನದ ಕಾರಣ ಇದುವರೆಗೂ ನಿಗೂಢ…! |

Advertisement

ವಾರದ ಹಿಂದೆ ದ ಕ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು, ಸಂಪಾಜೆ ಪ್ರದೇಶದಲ್ಲಿ ಭೂಕುಸಿತ, ಪ್ರವಾಹ, ಭಾರೀ ಮಳೆಯ ಸದ್ದಿನ ಬಳಿಕ ಇದೀಗ ಮತ್ತೆ ಭೂಕಂಪನದ ಸುದ್ದಿ ಕೇಳಿದೆ. ಭಾನುವಾರ ಸಂಜೆ ಕಲ್ಮಕಾರು, ಸಂಪಾಜೆ, ದೊಡ್ಡತೋಟ, ಮರ್ಕಂಜ, ಗುತ್ತಿಗಾರು, ದೇವಚಳ್ಳ ಸೇರಿದಂತೆ ವಿವಿದೆಡೆ ಭೂಮಿ ಕಂಪಿಸಿದ ಅನುಭವವಾಗಿದೆ, ಅದರ ಜೊತೆಗೆ ಗುಡುಗು ಮಾದರಿಯ ಸದ್ದು ಕೂಡಾ ಜನರಿಗೆ ಕೇಳಿದೆ. ಹೀಗಾಗಿ ಮತ್ತೆ ಆತಂಕಕ್ಕೆ ಕಾರಣವಾಗಿದೆ. 

Advertisement

ಎರಡು ವಾರದ ಹಿಂದೆ ಭಾರೀ ಪ್ರವಾಹದಿಂದ ಕಲ್ಮಕಾರು, ಸಂಪಾಜೆ ಪ್ರದೇಶದ ಜನರನ್ನು ಅಕ್ಷರಶ: ಆತಂಕಕ್ಕೆ ತಳ್ಳಿತ್ತು ಭಾರೀ ಮಳೆ, ಜಲಸ್ಫೋಟ, ಮೇಘಸ್ಫೋಟ. ಅದಕ್ಕೂ ಎರಡು ವಾರದ ಹಿಂದೆ ಇದೇ ಪ್ರದೇಶದಲ್ಲಿ ಸತತವಾಗಿ ಭೂಕಂಪನದ ಮಾದರಿಯ ಸದ್ದುಗಳು ಕೇಳಿತ್ತು, ಭೂಮಿ ನಡುಗಿದ ಅನುಭವವಾಗಿತ್ತು. ಇದೆರಡೂ ಘಟನೆಗಳ ನಂತರ ಜನರು ಆತಂಕ್ಕೆ ಒಳಗಾಗಿದ್ದರು. ಇದೀಗ ಮತ್ತೆ ಭೂಮಿ ಕಂಪಿಸಿದ ಅನುಭವವಾದಂತೆಯೇ ಮತ್ತೆ ಆತಂಕ ಶುರುವಾಗಿದೆ. ನಿಜಕ್ಕೂ ಈ ಕಂಪನಕ್ಕೆ ಕಾರಣವೇನು ? ಎಂಬುದೇ ನಿಗೂಢ , ಯಕ್ಷ ಪ್ರಶ್ನೆ.

Advertisement
Advertisement
Advertisement

ಕಳೆದ ಸುಮಾರು ಒಂದು ತಿಂಗಳಿನಿಂದ ಭೂಮಿ ಕಂಪನದ ಸುದ್ದಿ ಇದೆ. ಸಂಪಾಜೆ ಪ್ರದೇಶದಲ್ಲಿ 8 ಕ್ಕೂ ಅಧಿಕ ಬಾರಿ ಭೂಮಿ ಕಂಪಿಸಿದೆ. ಅದಾದ ನಂತರ ಜನರೂ ಒತ್ತಾಯಿಸಿದರು. ಭೂಮಿ ಕಂಪನಕ್ಕೆ ಅಧ್ಯಯನಗಳು ನಡೆದವು. ಆದರೆ ಇದುವರೆಗೂ ಕಂಪನಕ್ಕೆ ಕಾರಣ ತಿಳಿದಿಲ್ಲ. ಕಂಪನವಾದ ಪ್ರದೇಶದಲ್ಲಿಯೇ ಭೂಕುಸಿತ, ಜಲಸ್ಫೋಟ, ಮೇಘಸ್ಫೋಟ ನಡೆಯಿತು. ಆದರೆ ಭೂಮಿ ಕಂಪನಕ್ಕೆ ಕಾರಣ ತಿಳಿದಿಲ್ಲ. ಒಬ್ಬೊಬ್ಬರು ಒಂದೊಂದು ಹೇಳಿದರು, ಕೆಲವರು ಪರಿಸರ ನಾಶದಿಂದ ಭೂಮಿ ಕಂಪನ ಎಂದರೆ ಇನ್ನೂ ಕೆಲವರು ಕೊಳವೆಬಾವಿ ಕಾರಣ ಎಂದರು. ಇನ್ನೂ ಕೆಲವರು ಗಣಿಗಾರಿಕೆ, ರೆಸಾರ್ಟ್‌ ಗಳು ಕಾರಣ ಎಂದೂ ಹೇಳಿದರು. ಅವರವರ ವಿಶ್ಲೇಷಣೆಗೆ ತಕ್ಕಂತೆ ಕಾರಣಗಳನ್ನು ಹೇಳಿದರು. ವೈಜ್ಞಾನಿಕವಾಗಿ ಕಲ್ಮಕಾರು, ಸಂಪಾಜೆ ಪ್ರದೇಶವೇ ಕೇಂದ್ರೀಕರಿಸಿ ನಡೆಯುತ್ತಿರುವ ಭೂಕಂಪನಕ್ಕೆ , ಭಾರೀ ಮಳೆಗೆ ನಿಖರ ಕಾರಣ  ತಿಳಿದಿಲ್ಲ. ವಿಜ್ಞಾನಿಗಳು, ತಜ್ಞರು ಭೇಟಿ ನೀಡಿದರೂ ಅಧಿಕೃತ ಕಾರಣ ಇನ್ನೂ ಹೊರಬಂದಿಲ್ಲ. 2018 ರಲ್ಲೂ ಇದೇ ಮಾದರಿ ಆಗಿತ್ತು. ಸಂಪಾಜೆ ಪ್ರದೇಶದಲ್ಲಿ ಭೂಕುಸಿತವಾದ ಬಳಿಕ ತಜ್ಞರ ಅಧ್ಯಯನ ವರದಿಯಲ್ಲಿ ನಿಖರವಾದ ಕಾರಣಿವನ್ನೂ ತಿಳಿಸಿಲ್ಲ. ಈ ವರ್ಷವೂ ಅದೇ ಮಾದರಿಯ ಘಟನೆಗಳು ನಡೆದಿವೆ. ಸಂಬಂಧಿತರು ಈ ಬಗ್ಗೆ ಜಾಗೃತಿ ಮೂಡಿಸುವುದು  ಹಾಗೂ ಕಂಪನಕ್ಕೆ ಸೂಕ್ತ ಕಾರಣ ಪತ್ತೆ ಮಾಡಬೇಕಿದೆ.

 

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಪದೇ ಪದೇ ಭೂಮಿ ಕಂಪನ | ಮತ್ತೆ ಆತಂಕಕ್ಕೆ ಒಳಗಾಗುವ ಜನ | ಕಲ್ಮಕಾರು-ಸಂಪಾಜೆ ಪ್ರದೇಶದಲ್ಲಿ ಮತ್ತೆ ಆತಂಕ | ಭೂಮಿ ಕಂಪನದ ಕಾರಣ ಇದುವರೆಗೂ ನಿಗೂಢ…! |"

Leave a comment

Your email address will not be published.


*