“ಕ್ಷುದ್ರಗ್ರಹ 2023” ಎಂದು ಕರೆಯಲ್ಪಡುವ ಭಾರೀ ಗಾತ್ರದ ಕ್ಷುದ್ರಗ್ರಹವು ಈ ವಾರ ಭೂಮಿಗೆ ಅತ್ಯಂತ ಸಮೀಪವಾಗಿ ಎದುರಾಗಲಿದೆ ಎಂದು ನಾಸಾ ಭವಿಷ್ಯ ನುಡಿದಿದೆ. ಕ್ಷುದ್ರಗ್ರಹ 2023 ಎಂದು ಕರೆಯಲ್ಪಡುವ ಈ ಕ್ಷುದ್ರಗ್ರಹವು ದಕ್ಷಿಣ ಅಮೆರಿಕಾದಲ್ಲಿ ಗೋಚರಿಸುವ ನಿರೀಕ್ಷೆಯಿದೆ. ಆ ಸಮಯದಲ್ಲಿ, ಕ್ಷುದ್ರಗ್ರಹವು ಭೂಮಿಯ ಮೇಲ್ಮೈಯಿಂದ ಕೇವಲ 2,200 ಮೈಲುಗಳಷ್ಟು ಎತ್ತರದಲ್ಲಿರುತ್ತದೆ ಎಂದು ಊಹಿಸಲಾಗಿದೆ, ಇದು ದಾಖಲಾದ ಇತಿಹಾಸದಲ್ಲಿ, ಭೂಮಿಗೆ ಅತ್ಯಂತ ಹತ್ತಿರದಲ್ಲಿ ಕಾಣಿಸಿಕೊಳ್ಳಲಿದೆ ಎಂದು ನಾಸಾ ತಿಳಿಸಿದೆ.
ದಕ್ಷಿಣ ಅಮೆರಿಕಾದಲ್ಲಿ ಈ ಗ್ರಹ ಕಾಣಿಸುವ ನಿರೀಕ್ಷೆಯಿದೆ. ಅದರ ಹಾರಾಟದ ಸಮಯದಲ್ಲಿ, ಕ್ಷುದ್ರಗ್ರಹವು ಭೂಮಿಯ ಮೇಲ್ಮೈಯಿಂದ ಕೇವಲ 2,200 ಮೈಲುಗಳಷ್ಟು ಎತ್ತರದಲ್ಲಿರುತ್ತದೆ ಎಂದು ಊಹಿಸಲಾಗಿದೆ, ಇದು ಇಷ್ಟರವರೆಗೆ ದಾಖಲಾದ ಇತಿಹಾಸದಲ್ಲಿ ಅತ್ಯಂತ ಸಮೀಪ ಎಂದು ನಾಸಾ ತಿಳಿಸಿದೆ.
ಕ್ಷುದ್ರಗ್ರಹವು ಭೂಮಿಯ ಮೇಲೆ ಯಾವುದೇ ಪ್ರಭಾವ ಬೀರುವ ಅಪಾಯವಿಲ್ಲ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. 11.5 ರಿಂದ 28 ಅಡಿ (3.5 ರಿಂದ 8.5 ಮೀಟರ್) ಇರುವ ಸಣ್ಣ ಕ್ಷುದ್ರಗ್ರಹವು ವಾತಾವರಣದಲ್ಲಿ ವಿಭಜನೆಯಾಗುತ್ತದೆ. ಹಲವು ದೊಡ್ಡ ಶಿಲಾಖಂಡರಾಶಿಗಳಾಗಿ ನಂತರ ಸಣ್ಣ ಉಲ್ಕೆಗಳಾಗಿ ಬೀಳುತ್ತವೆ.
ಕ್ಷುದ್ರಗ್ರಹವನ್ನು ಆರಂಭದಲ್ಲಿ ಹವ್ಯಾಸಿ ಖಗೋಳಶಾಸ್ತ್ರಜ್ಞ ಗೆನ್ನಡಿ ಬೊರಿಸೊವ್ ಶನಿವಾರ ಗುರುತಿಸಿದರು ಮತ್ತು ಮೈನರ್ ಪ್ಲಾನೆಟ್ ಸೆಂಟರ್ (ಎಂಪಿಸಿ) ಗೆ ವರದಿ ಮಾಡಿದ್ದರು.ಈ ಕ್ಷುದ್ರಗ್ರಹವು ಭೂಮಿಗೆ ಯಾವುದೇ ಅಪಾಯವನ್ನುಂಟುಮಾಡದಿದ್ದರೂ, ನಾಸಾ ಅವುಗಳ ಮೇಲೆ ನಿಗಾ ವಹಿಸಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel