ಸುಳ್ಯ ತಾಲೂಕು ಹಾಗೂ ಕೊಡಗು-ಸಂಪಾಜೆಯಲ್ಲಿ ಗುರುವಾರ ತಡರಾತ್ರಿ ಸುಮಾರು 1.19 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಇದರ ತೀವ್ರತೆ 3.0 ಇತ್ತು ಎಂದು ಖಾಸಗಿ ಸಂಸ್ಥೆಯೊಂದು ಮಾಹಿತಿ ನೀಡಿದೆ.ಆದರೆ 1.8 ರಷ್ಟು ತೀವ್ರತೆ ದಾಖಲಾಗಿದೆ ಎಂದು KSNDM ಮಾಹಿತಿ ನೀಡಿದೆ.ಸಂಪಾಜೆ, ಕಲ್ಲುಗುಂಡಿ , ಚೆಂಬು ಪ್ರದೇಶ ಕೇಂದ್ರಿತವಾಗಿದೆ. ಭೂಮಿಯ 10 ಕಿಮೀ ತಳಭಾಗದಲ್ಲಿ ಕಂಪನವಾಗಿದೆ ಎಂದು ಅದು ವರದಿ ಮಾಡಿದೆ.1.15 ಸೆಕೆಂಡ್ ಕಾಲ ಭೂಮಿ ಕಂಪಿಸಿದೆ ಎಂದು ವರದಿ ಮಾಡಿದೆ.
ಜೂ.25 ರಂದು ಮೊದಲ ಬಾರಿಗೆ ಬೆಳಗ್ಗೆ 9.10-9.15 ಸುಮಾರಿಗೆ ಭೂಮಿ ಕಂಪಿಸಿತ್ತು, ಆ ಸಮಯದಲ್ಲಿ 2.3 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು, ಅದಾದ ನಂತರ ಜೂ.28 ರಂದು ಎರಡನೇ ಬಾರಿ ಬೆಳಗ್ಗೆ ಭೂಮಿ ಕಂಪಿಸಿದಾಗ 3 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು, ಸಂಜೆ 1.8 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಅದಾದ ಬಳಿಕ ಸಂಪಾಜೆ ಪ್ರದೇಶದಲ್ಲಿಯೇ ರಿಕ್ಟರ್ ಮಾಪಕ ಇಡಲಾಗಿದೆ. ಇದೀಗ ಜೂ.30 ತಡರಾತ್ರಿ ಮತ್ತೊಮ್ಮೆ ಭೂಮಿ ಕಂಪನವಾಗಿದೆ. ಭೂಕಂಪನದ ನಂತರ ಪಶ್ಚಾತ್ ಕಂಪನ ಇರುತ್ತದೆ. ಆದರೆ ಈಗ ಜನರು ಭಯಗೊಳ್ಳುವಂತಾಗಿದೆ.