ರೈತನ ಮಿತ್ರನಾಗಿರುವ ಎರೆಹುಳು ಮತ್ತು ಅದರ ಪ್ರಯೋಜನಗಳು |

January 6, 2024
11:58 AM

ಎರೆಹುಳುವನ್ನು(earthworm) ರೈತರ ಮಿತ್ರ(farmer Friend), ರೈತ(farmer) ಬಂಧು ಎಂದು ಕರೆಯಲಾಗುತ್ತದೆ. ರೈತನಂತೆ ಭೂಮಿಯಲ್ಲಿ(earth) ನಿರಂತರವಾಗಿ ಕೆಲಸ ಮಾಡುವ ಹುಳುಗಳು(creature) ನೈಸರ್ಗಿವಾಗಿ ಪೋಷಕಾಂಶಯುಕ್ತ(natural nutrition) ಗೊಬ್ಬರವನ್ನು(manure) ರೈತರಿಗೆ ಒದಗಿಸುತ್ತವೆ. ಎರೆಹುಳು ಗೊಬ್ಬರವು(earthworm manure) ರೈತರಿಗೆ ಸಹಾಯಕವಾಗಿದೆ. ಎಲ್ಲಾ ಸಾವಯವ ಬೆಳೆಗಳ ಕಸಕಡ್ಡಿ ಮಿಗಿಲು ಪದಾರ್ಥಗಳನ್ನು ಬಳಸಿಕೊಂಡು ಎರೆಹುಳು ಸಹಾಯದಿಂದ ಒಳ್ಳೆಯ ಗೊಬ್ಬರ ತಯಾರಿಸಬಹುದು. ಮಣ್ಣಿನ ಫಲವತ್ತತೆ(soil fertility) ಹೆಚ್ಚಿಸಲು ಈ ಗೊಬ್ಬರ ಉಪಯುಕ್ತವಾಗಿದೆ.

Advertisement
Advertisement
Advertisement

ಎರೆಹುಳದ ಗೊಬ್ಬರವನ್ನು ಬೆಳೆಯ ಯಾವುದೇ ಸಮಯದಲ್ಲಿ ಕೃಷಿ, ತೋಟಗಾರಿಕೆ, ಹೂವುಗಳು ಮತ್ತು ತರಕಾರಿಯಲ್ಲಿ ಉಪಯೋಗ ಮಾಡಬಹುದು. ಕೃಷಿ/ತೋಟಗಾರಿಕೆ ಬೆಳೆಗಳಿಗೆ ಉಪಯೋಗಿಸುವ ಕ್ರಮ: ಎರೆಹುಳು ಗೊಬ್ಬರವನ್ನು ಬೆಳೆದು 12-15 ಸೆಂ.ಮೀ. ಎತ್ತರದಲ್ಲಿದ್ದಾಗ ಭೂಮಿಯ ಮೇಲ್ಗಡೆ ಹರಡಬೇಕು ಮತ್ತು ಸಾಧ್ಯವಿದ್ದರೆ ನೀರನ್ನು ಹರಿಸಬೇಕು. ಹೂವಿನ ಹಾಗೂ ತರಕಾರಿ ಮತ್ತು ಹಣ್ಣಿನ ಗಿಡಗಳಿಗೆ ಎರೆಹುಳದ ಗೊಬ್ಬರವನ್ನು ಗಿಡದ ಸುತ್ತು ಹಾಕಿ ಮಣ್ಣಿನಿಂದ ಮುಚ್ಚಬೇಕು ಮತ್ತು ನೀರನ್ನು ಕೊಡಬೇಕು.

Advertisement

ಉಪಯೋಗ: ಈ ಗೊಬ್ಬರ ಅತಿ ಮುಖ್ಯವಾದ ಪೋಷಕಾಂಶ ಹೊಂದಿರುತ್ತದೆ (1-1.5% ಸಾರಜನಕ, 0.8% ರಂಜಕ, 0.7% ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುತ್ತದೆ). ಬೆಳೆಯ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಇಳುವರಿಯನ್ನು ಕೊಡುತ್ತದೆ.

ರೈತರಿಗೆ ಲಾಭಗಳು:

Advertisement
  • ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ.
  • ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.
  • ಕೀಟಗಳ ಬಾಧೆಯಿಂದ ರಕ್ಷಣೆ ಹಾಗೂ ಬೆಳೆಗಳಿಗೆ ನಷ್ಟವನ್ನು ಕಡಿಮೆ ಮಾಡುತ್ತದೆ.
  • ಬೆಳೆಗಳ ಉತ್ಪನ್ನಗಳು ಅತೀ ಉತ್ತಮ ಹಾಗೂ ಯೋಗ್ಯವಾಗಿದ್ದು, ಹೆಚ್ಚಿನ ರುಚಿ ಹೊಂದಿರುತ್ತವೆ.
  • ಬೆಳೆಗಳು ಉತ್ತಮವಾಗಿದ್ದು, ಹೆಚ್ಚಿನ ಬೆಲೆ ಪಡೆಯುತ್ತವೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror