ಬದುಕೊಂದು “ಪಾಕ”ಶಾಲೆ | ಹೆಸರು ಮಾಡಿಕೊಳ್ಳುವುದು ಸುಲಭ-ಉಳಿಸುವುದು ಕಷ್ಟ |

June 15, 2024
7:00 AM
ಬದುಕಿನ ಅನುಭವಗಳ ಬಗ್ಗೆ "ಮನೋವಿಲಾಸ" ಅವರು ಬರೆಯಲು ಆರಂಭಿಸಿದ್ದಾರೆ.

ತುಂಬಾ ಸಲ ಅನಿಸಿತ್ತು. ಈ ಜಗತ್ತು ಏನು , ಏಕೆ ಹೀಗೆ ಅಂತ. ಕೆಲ ಸಮಯದ ಹಿಂದೆ ಎಂ ಶ್ರೀ ಅವರ ಪುಸ್ತಕ ಓದುತ್ತಿದೆ. ಹಿಮಾಲಯದ ಸುತ್ತಲಿನ ಕತೆಗಳನ್ನು ಹೇಳುತ್ತಾ ಹೋಗುತ್ತಿದ್ದರು. ಓದುತ್ತಿದ್ದ ನಾನು ಒಂದು ಕ್ಷಣ ಓದು ನಿಲ್ಲಿಸಿದೆ.ಈ ಜಗದ ಸುತ್ತದ ಬೆಳವಣಿಗೆ ಗಮನಿಸಿದೆ… ಹೌದಲ್ಲಾ…!, ಈ ಜಗವು ಯಾಕೆ ಹೀಗೆ..?

Advertisement
Advertisement
Advertisement
Advertisement

ಗೆಳೆಯ ಮಹೇಶ ನನಗೆ ಸುಮಾರು 15 ವರ್ಷಗಳಿಂದ ಪರಿಚಯ. ಆತ ಏನು ಅಂತ ನನಗೆ ಅರ್ಥವಾಗಲು ಅನೇಕ ವರ್ಷ ಬೇಕಾಯಿತು. ನನಗೆ ಪರಿಚಯವಾಗುವ ವೇಳೆಗೆ ಆತ ಕನ್ನಡದ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ. ಆರಂಭದಿಂದಲೂ ಅಷ್ಟಕಷ್ಟೇ ಸ್ನೇಹ. ನಂತರ ಅವನು ಏನು ಅಂತ ಅರಿವಾದ ಬಳಿಕ ಸ್ನೇಹ ಗಟ್ಟಿಯಾಯಿತು. ಈಗಲೂ ಸ್ನೇಹ ಇದೆ. ಯಾವಾಗಲಾದರೊಮ್ಮೆ ಮಾತನಾಡುತ್ತೇವೆ, ಸಿಗುತ್ತೇವೆ. ಈಗಂತೂ ಸೋಶಿಯಲ್‌ ಮೀಡಿಯಾ ಇದೆ, ಚಾಟುತ್ತೇವೆ. ವಿಷಯ ಅದಲ್ಲ, ಆತನಿಗೆ ನಾನು ಕೆಲವು ಸಂಗತಿಗಳ ಬಗ್ಗೆ ಮಾತನಾಡುವುದು ಗೊತ್ತು. ಬರೆಯುವುದು ಕೂಡಾ ಗೊತ್ತು. ಆದರೆ ಯಾವ ಪತ್ರಿಕೆಗೂ ಬರೆದವನಲ್ಲ. ಹಾಗಂತ ಬರಹಗಳ ಬಗ್ಗೆ ಮಾತುಕತೆ, ಚರ್ಚೆ ಮಾಡುತ್ತಿದ್ದೆ. ಈಚೆಗೆ ಮಾತನಾಡುವ ವೇಳೆ ಮಹೇಶ ಹೇಳಿದ, ನನ್ನ ಡಿಜಿಟಲ್‌ ಮೀಡಿಯಾ ರೂರಲ್‌ ಮಿರರಿಗೆ ಏನಾದರೊಂದು ಬರೆದುಕೊಡು ಅಂದಿದ್ದ. ಪ್ರಯತ್ನ ಮಾಡ್ತೇನೆ. ಆದರೆ ನನ್ನದೊಂದು ಕಂಡೀಶನ್‌ ಇದೆ. ನನ್ನ ಹೆಸರು ಹಾಕಬಾರದು, ಫೋಟೊ ಹಾಕಬಾರದು, ನನ್ನನ್ನು ಎಲ್ಲೂ ಕರೆಯಬಾರದು ಎಂದು ಹೇಳಿದ್ದೆ.  ಸಾಧ್ಯವಿಲ್ಲ, ಹೆಸರು ಹಾಕಬೇಕು ಅಂತ ಹೇಳಿದ್ದ. ಕೊನೆಗೆ ಒಪ್ಪಿದ, ಆದರೆ ಹೆಸರನ್ನು ನಾನು ಕಾವ್ಯನಾಮವನ್ನು ಬರೆಯಬೇಕು ಎಂದು ಮೊದಲ ಕಾವ್ಯನಾಮ ಇರಿಸಿ ಬರೆದುಕೊಟ್ಟಿದ್ದೇನೆ. ನಾನು ಈ ಜಗದಲ್ಲಿ ನಮ್ಮ ನಿತ್ಯ ಬದುಕಿನ ಬಗ್ಗೆ, ಅದರ ಅನುಭವಗಳ ಬಗ್ಗೆ ಬರೆಯಬೇಕು ಎಂದು ಅಂದುಕೊಂಡಿದ್ದೇನೆ.

Advertisement

ಕಳೆದ ಒಂದು ವಾರದಿಂದ ಟಿವಿಯಲ್ಲಿ ಜೋರಾದ ಚರ್ಚೆ. ಒಂದೊಂದು ದಿನ ಒಬ್ಬೊಬ್ಬರು ಹೀರೋಗಳದು. ಇಡೀ ದಿನ ಅದೇ ಚರ್ಚೆ ನಡೆಯುತ್ತಿತ್ತು. ಕೆಲವು ನಟ-ನಟಿಯರದು ವಿಚ್ಛೇದನದ ಬಗ್ಗೆ  ಚರ್ಚೆ ನಡೆಯುತ್ತಿತ್ತು. ಏಕೆ ವಿಚ್ಛೇದನವಾಗಲು ಕಾರಣ, ಏನಾಗಿತ್ತು.? ಹೀಗೇ ಚರ್ಚೆ ನಡೆಯುತ್ತಿತ್ತು. ಒಬ್ಬಳಂತೂ “ನನಗೆ ವಿಚ್ಛೇದನ ಪುಳಕ ನೀಡುತ್ತದೆ” ಎನ್ನುವ ಅರ್ಥದಲ್ಲಿ ಹೇಳಿಕೊಳ್ಳುತ್ತಿದ್ದಳು. ಇದೆಲ್ಲಾ ಹೀರೋ ಎನ್ನುವ ಕಾರಣದಿಂದ ನಡೆಯುತ್ತಿದ್ದ ಚರ್ಚೆಗಳು. ಅಂದರೆ ಈ ಜಗತ್ತಿನಲ್ಲಿ ಹೀರೋಗಳೇ ಮಾದರಿಗಳು. ಅಂದರೆ ಹೆಸರು ಮಾಡಿಕೊಂಡವರ ನಡೆ-ನುಡಿ ಎಲ್ಲವೂ ಸಾಮಾನ್ಯ ಜನರಿಗೂ ಮಾದರಿಯೋ..? ಇದು ಈ ಜಗದ ಒಳಗೆ ಇರುವ ಜನರ ಬದುಕಿನ “ಪಾಕ”ಶಾಲೆ. ಹಲವು ಮನೆಗಳಲ್ಲಿ ಇಂತಹ ಘಟನೆಗಳು ನಡೆದಿರುತ್ತದೆ, ನಡೆಯುತ್ತಿರುತ್ತದೆ. ಇದರ ಪ್ರತಿಫಲನವೋ ಅದು..?

ಹೆಸರು ಮಾಡಿಕೊಂಡ ಹಲವರು ಖಾಸಗಿ ಬದುಕುಗಳು ಹೆಚ್ಚಿನ ಕಡೆ ಅಸ್ತವ್ಯಸ್ತವಾಗಿರುತ್ತದೆ. ಈಗಲೂ ಇಂತಹ ಮಂದಿಯ ವರ್ತನೆಗಳು ಹಲವರ ಮೇಲೆ ಪ್ರಭಾವ ಬೀರುತ್ತದೆ. ಅವರೇನು ಮಾಡಿದ್ದಾರೆ ಅದೇ ಸಾಮಾನ್ಯನೂ ಮಾಡುತ್ತಾನೆ. ಹೀಗಾಗಿ ಸಾಮಾನ್ಯನಾಗಿ ಇರುವುದು ಸುಲಭದ ಕೆಲಸ. ಅದೇ ಹೆಸರು ಮಾಡಿಕೊಳ್ಳುವ ಹಂಬಲ , ಆಸಕ್ತಿ ಅದರ ಖುಷಿ ಬದುಕಿನಲ್ಲಿ ಇರುವುದು ನಿಜ. ಆದರೆ ಅದನ್ನು ಉಳಿಸಿಕೊಳ್ಳುವುದು ಹಾಗೂ ಮುಂದಿನ ನಡೆ ಎಲ್ಲವೂ ಸುಲಭ ಅಲ್ಲ. ಹೆಸರು ಮಾಡಿಕೊಂಡ ಬಳಿಕ ಪ್ರತೀ ವ್ಯಕ್ತಿಯ ನಡೆ-ನುಡಿ ಎಲ್ಲವೂ ಗುರುತಿಸಲ್ಪಡುತ್ತದೆ.ಕೆಲವೊಮ್ಮೆ ಹೆಸರಿಗಾಗಿ ಯಾವ ಕೆಲಸವೂ ನಡೆದಿರುವುದಿಲ್ಲ, ಸಹಜವಾಗಿಯೇ ಉತ್ತಮ ಕಾರ್ಯದ ಜೊತೆಗೇ ವ್ಯಕ್ತಿಯೂ ಗುರುತಿಸಿಕೊಂಡು ಸ್ಥಾನಮಾನ ಸಿಗುತ್ತದೆ. ಇಂತಹ ಜನರು ಯಾವತ್ತೂ ಸಂಕಷ್ಟ ಪಡುತ್ತಾರೆ. ಸ್ಥಾನಕ್ಕಿಂತಲೂ ಮಾನಕ್ಕೆ , ಮಾನ ಉಳಿಸಿಕೊಳ್ಳಲು ಒದ್ದಾಡುತ್ತಾರೆ.

Advertisement

ಹೀಗಾಗಿ, ಇಂತಹ ಸಂದರ್ಭಗಳಲ್ಲಿ  ಸಜ್ಜನರು ಅನೇಕ ಬಾರಿ ಹೆಸರು ಗಳಿಸಿಕೊಂಡು ಬದುಕಿನ ಖಾಸಗೀ ಸಂಗತಿಗಳನ್ನೂ ಕೂಡಾ ಸಹಿಸಿಕೊಳ್ಳಬೇಕಾಗುತ್ತದೆ. ಕೆಲವು ಕಡೆ ತೀರಾ ಖಾಸಗಿ ಸಂಗತಿಗಳು ಕೂಡಾ ವ್ಯಕ್ತಿಯ ಮನಸ್ಸಿನ ಒಳಗೆ ಕೊರೆಯುತ್ತಿರುತ್ತದೆ. ಆದರೆ ಹೇಳುವ ಹಾಗಿಲ್ಲ, ಹೇಳಿಕೊಂಡರೆ ಜಗಜ್ಜಾಹೀರಾಗಿ ಅವಮಾನ ಎದುರಿಸಬೇಕಾದೀತು ಎನ್ನುವ ಭಯ ಕಾಡುತ್ತಿರುತ್ತದೆ. ಅನೇಕ ಆತ್ಮಹತ್ಯೆ ಪ್ರಕರಣಗಳ ಹಿಂದೆ ಇಂತಹ ಖಾಸಗಿ ಸಂಗತಿಗಳು ಇರುತ್ತವೆ. ಅದು ಎಲ್ಲಿಯೂ, ಯಾರಿಗೂ ತಿಳಿಯದೇ ಮಣ್ಣಾಗಿ ಹೋಗಿರುತ್ತದೆ.

ಇಂತಹ ಸಂದರ್ಭದಲ್ಲಿ ಅನೇಕ ಬಾರಿ ಎಲ್ಲಾ ಯಶಸ್ಸುಗಳೂ ನಾಶವಾಗಿ ಹೋಗುತ್ತವೆ. ಯಾರಲ್ಲೂ ಹೇಳಿಕೊಳ್ಳಲಾಗದ ಸಂಕಷ್ಟದಿಂದ ಮಾನಸಿಕವಾದ ಒತ್ತಡಗಳು ಹೆಚ್ಚಾಗುತ್ತವೆ, ಒಳಗೊಳಗೇ ಕೊರೆದುಕೊಳ್ಳುವುದು ಹೆಚ್ಚಾಗುತ್ತದೆ. ಯಾವ ಕೆಲಸಗಳೂ ಉತ್ಸಾಹದಿಂದ ನಡೆಸಲು ಕಷ್ಟವಾಗುತ್ತದೆ. ಬದುಕು ಸೋಲುವುದು ಕಣ್ಣ ಮುಂದೆಯೇ ಕಾಣುತ್ತದೆ. ಸೋಲು ಆವರಿಸಿಕೊಂಡು ಬಿಡುತ್ತದೆ.  ಸೋಲು ಕಣ್ಣ ಮುಂದೆ ಕಾಣುತ್ತಲೇ ಇರುತ್ತದೆ. ಪರಿಹಾರವೂ ಇರುತ್ತದೆ, ಆದರೆ ಪರಿಹರಿಸಿಕೊಳ್ಳಲು ಕಷ್ಟವಾಗುತ್ತದೆ. ಇಂತಹ ಸಂಕಷ್ಟದಲ್ಲಿ ಸಿಲುಕಿಕೊಂಡ ಹಲವರು ಬದುಕನ್ನು ಕಳೆದುಕೊಂಡಿದ್ದಾರೆ. ಕೆಲವು ಸಂದರ್ಭದಲ್ಲಿ ಇಂತಹ ಸೋಲನ್ನು ಯಾರೋ ಒಬ್ಬ ನಿರೀಕ್ಷೆ ಮಾಡಿರುತ್ತಾನೆ. ಅದಕ್ಕಾಗಿ ಆತ ಪ್ರಯತ್ನಿಸುತ್ತಲೇ ಇರುತ್ತಾನೆ. ಅಂದರೆ ಹಲವು ಅಡೆತಡೆಗಳು ಯಶಸ್ಸನ್ನು ಎಳೆಯುತ್ತವೆ. ಆರೋಗ್ಯದಿಂದ ತೊಡಗಿ ಸಾಮಾಜಿಕವಾಗಿಯೂ ಸಂಕಟಗಳನ್ನು ಬದುಕನ್ನು ಪಾಕಶಾಲೆಯಾಗಿಸುತ್ತದೆ. ಅದೂ ಇನ್ನೊಂದು ಪಾಠ ಕೊಡುತ್ತದೆ.

Advertisement

ಇಂತಹ ಸಂದರ್ಭದಲ್ಲಿ ಏನು ಮಾಡಬಹುದು..? ಈಗಿನ ವಾಹಿನಿಗಳಲ್ಲಿ ಬರುವ ಚಿತ್ರನಟ, ರಾಜಕಾರಣಿಗಳ ಬದುಕಿನ ಸಂದರ್ಭಗಳಂತೆಯೇ ನಿರ್ಧರಿಸಿಬಿಡುವುದೋ..? ಹಾಗಿದ್ದರೆ ನಂಬಿಕೊಂಡಿರುವ, ಮಾಡಿರುವ ಕೆಲಸಗಳಿಗೆ..? ಹೀಗೆಲ್ಲಾ ಪ್ರಶ್ನೆಗಳು ಸಹಜವೇ.

ಬದುಕು ಯಾವತ್ತೂ ಹಾಗೆಯೇ..ಹೆಸರು ಮಾಡುಕೊಳ್ಳುವುದು,ಯಶಸ್ಸು ಗಳಿಸಿಕೊಳ್ಳುವುದು ಸುಲಭ. ಅದನ್ನು ಸಜ್ಜನರಿಗೆ ಉಳಿಸಿಕೊಳ್ಳುವುದೂ ಕಷ್ಟದ ಕೆಲಸ. ಅದಕ್ಕಾಗಿ ಒಂದಷ್ಟು ಸಜ್ಜನ ಸ್ನೇಹಿತರ ನೆರವು ಯಾವತ್ತೂ ಅಗತ್ಯ ಇರುತ್ತದೆ. ತೀರಾ ಖಾಸಗಿ ಸಂಗತಿಗಳನ್ನು ಹಂಚಿಕೊಂಡು ಬದುಕಿನ ಹಳಿಯನ್ನು ಸರಿದಾರಿಗೆ ತರುವ ಕೆಲಸ ನಡೆಯಬೇಕು. ಆದರೆ , ಆ ಸ್ನೇಹಿತ ಇನ್ನೊಂದಷ್ಟು ಜನರಿಗೆ ಹೇಳಿಕೊಳ್ಳದವನೂ ಆಗಿರಬೇಕು. ಅಂತಹ ಸವಾಲು ದಾಟುವುದರಲ್ಲಿ ಬದುಕಿನ ಯಶಸ್ಸು ಇರುತ್ತದೆ. ಅದಕ್ಕಾಗಿಯೇ ಬದುಕು ಎಂದರೆ ಪಾಠಶಾಲೆ ಮಾತ್ರವಲ್ಲ ಅದು ಪಾಕಶಾಲೆಯೂ ಹೌದು.ಇಲ್ಲಿ ಎಲ್ಲಾ ರೀತಿಯಿಂದಲೂ ಯೋಚನೆ ಮಾಡಬೇಕು.

Advertisement

ಮುಂದಿನ ಬರಹದೊಂದಿಗೆ ಮತ್ತೆ ಸಿಗುವ. ಮುಂದೆ ನಾಲ್ಕು ಪ್ಯಾರಾದೊಂದಿಗೆ ಬದುಕೆಂಬ ಪಾಕಶಾಲೆಯ ಬಗ್ಗೆಯೇ ಬರೆಯುತ್ತೇನೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮನೋವಿಲಾಸ

ಮನೋವಿಲಾಸ ಇದು ಕಾವ್ಯನಾಮ. ಹಲವು ವರ್ಷಗಳ ಕಾಲ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿ ಸದ್ಯ ಪಿತ್ರಾರ್ಜಿತವಾದ ಕೃಷಿ ಮುನ್ನಡೆಸುವ ಕೆಲಸ. ಈ ನಡುವೆ ಮನೋವಿಕಾಸದ ಬಗ್ಗೆ ಅಧ್ಯಯನ.

ಇದನ್ನೂ ಓದಿ

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು
February 20, 2025
7:14 AM
by: ಡಾ.ಚಂದ್ರಶೇಖರ ದಾಮ್ಲೆ
ಸೀತೆ ಪುನೀತೆ | ಅಪೂರ್ಣ ರಾಮಾಯಣ
February 12, 2025
9:44 PM
by: ಡಾ.ಚಂದ್ರಶೇಖರ ದಾಮ್ಲೆ
ದೆಹಲಿ ಚುನಾವಣೆ “ರಾಜಕೀಯ ಅಹಂಕಾರ”ಕ್ಕೆ ಉತ್ತರ | ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡಬಹುದೇ ಎಎಪಿ..?
February 8, 2025
9:29 PM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆಯ ಹಳದಿ ಎಲೆ ರೋಗದ ಖಾಯಂ ನಿವಾರಣೆಗಾಗಿ ಯೋಜನೆ ಅನುಷ್ಟಾನಗೊಳ್ಳುತ್ತದೆ ಎಂಬ ಭರವಸೆ ಇರಲಿ
February 7, 2025
12:15 AM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror