ಸುಲಭವಾಗಿ ನಿಮ್ಮ ಮನೆಯಲ್ಲೇ ತಯಾರಿಸಿ ಎರೆಜಲ | ಸುಲಭ ಹಾಗೂ ಕಡಿಮೆ ಖರ್ಚಿನಲ್ಲಿ ಸಾವಯವ ಗೊಬ್ಬರ

March 22, 2024
11:16 PM

ತಿಂಗಳ ಹಿಂದೆ ಮಳವಳ್ಳಿ ಸಮೀಪದ ಮಿಕ್ಕಿರೆ ಶಿವಣ್ಣ ಅವರ “ಕನಕ ಶ್ರೀ” ಎರೆಹುಳು ಗೊಬ್ಬರ ಘಟಕದಿಂದ(vermi compost unit) ಒಂದು ಕೆಜಿ ಎರೆಹುಳು ಖರೀದಿಸಿ ನಮ್ಮ ತೋಟದಲ್ಲೂ ಎರೆಜಲ ಘಟಕ(vermiwash unit)  ಪ್ರಾರಂಭಿಸಿದೆವು.  ಶಿವಣ್ಣ ಮತ್ತು ಹೇಮಲತಾ ದಂಪತಿಗಳ ಮಾರ್ಗದರ್ಶನದಿಂದ ನಮ್ಮ ತೋಟದಲ್ಲೂ ಸಣ್ಣ ಪ್ರಮಾಣದಲ್ಲಿ ಎರೆ ಜಲ ಉತ್ಪಾದಿಸಲಾಗುತ್ತಿದೆ.

Advertisement
Advertisement

ಇದಕ್ಕೆ ನಾವು ಖರ್ಚು ಮಾಡಿದ್ದು 1500ರೂ. 200ಲೀ ಡ್ರಮ್ ಗೆ 950, ಕೆಳಭಾಗದಲ್ಲಿ ಒಂದು ರಂಧ್ರ ಕೊರೆದು ಪೈಪ್ ಫಿಟ್ ಮಾಡಲು 50ರೂ, ಒಂದು ಕೆಜಿ ಎರೆ ಹುಳು ವಿಗೆ 500ರೂ.

Advertisement

ಎರೆ ಜಲ ತಯಾರಿಸುವ ವಿಧಾನ: ಡ್ರಮ್ ಕೆಳಭಾಗದಲ್ಲಿ ಸಣ್ಣ ರಂಧ್ರ ಕೊರೆದು ಅದಕ್ಕೊಂದು ಸಣ್ಣ ಪೈಪ್ ಕೂರಿಸುವುದು. ಡ್ರಮ್ ಒಳಗೆ ಒಂದು ಅಡಿಯಷ್ಟು ತೆಂಗಿನ ಮೊಟ್ಟೆ ಜೋಡಿಸುವುದು. ಜೋಡಿಸುವಾಗ ನಾರಿನ ಭಾಗ ಒಳಮುಖವಾಗಿರಬೇಕು. ಇದರ ಮೇಲೊಂದು ತೆಳುವಾದ ಗೋಣಿ ಚೀಲ ಹಾಸಬೇಕು. ನಂತರ ಅರ್ಧ ಅಡಿ ಕೃಷಿ ತ್ಯಾಜ್ಯ ಮತ್ತು ಇದರ ಮೇಲೆ ಸಗಣಿ ಬಗ್ಗಡ ಹೀಗೆ ಡ್ರಮ್ ತುಂಬುವ ತನಕ ಪದರ ಪದರವಾಗಿ ಕೃಷಿ ತ್ಯಾಜ್ಯ ಮತ್ತು ಸಗಣಿ ಹಾಕಬೇಕು. ನಂತರ ಪ್ರತಿ ನಿತ್ಯ ಒಂದೆರಡು ಲೀ ನೀರು ಹಾಕಿ ತೇವಾಂಶ ಕಾಪಾಡಬೇಕು. ಮೂರು ನಾಲ್ಕು ದಿನಗಳ ನಂತರ ಪದರದೊಳಗೆ ಕೈಹಾಕಿ ಉಷ್ಣಾಂಶ ಪರೀಕ್ಷಿಸಬೇಕು. ತಣ್ಣಗಾಗಿದ್ದರೆ ಒಂದು ಡ್ರಮ್ ಗೆ ಒಂದು ಕೆಜಿ ಎರೆಹುಳು ಬಿಡಬಹುದು. ಇದಾದಮೇಲೂ ತೇವಾಂಶ ಕಾಪಾಡಿಕೊಂಡು ದಿನಕ್ಕೆ 1-2ಲೀ ನೀರು ಚಿಮುಕಿಸಬೇಕು.

ಮನ್ನೆಚ್ಚರಿಕೆಗಳು: ಡ್ರಮ್ ಅನ್ನು ನೆರಳಿನಲ್ಲಿ ಮತ್ತು ಮಳೆ ನೀರು ಬೀಳದ ಹಾಗೆ ಇಡಬೇಕು. ಡ್ರಮ್ ಮೇಲ್ಭಾಗ ಗಾಳಿ ಆಡುವ ಹಾಗೆ ತೆರೆದಿಡಬೇಕು. ಇರುವೆ ಹೋಗದಹಾಗೆ ನೋಡಿಕೊಳ್ಳಬೇಕು. ಕೃಷಿ ತ್ಯಾಜ್ಯಗಳು ಆದಷ್ಟು ವೈವಿಧ್ಯಮಯವಾಗಿರಬೇಕು. ಬಾಳೆ ದಿಂಡು (ಪೋಟಾಶ್ ಅಂಶ) ಹೊಂಗೆ, ಬೇವು, ಗ್ಲಿರಿಸಿಡಿಯಾ, ಎಕ್ಕದ ಎಲೆಗಳನ್ನು ಹಾಕಿದರೆ ಹೆಚ್ಚು ಸಾರವತ್ತಾದ ಗೊಬ್ಬರ ಸಿಗುತ್ತದೆ. ಕೆಳಭಾಗದಲ್ಲಿ ಸಣ್ಣ ರಂಧ್ರಕೊರೆಯಬೇಕು. ಈ ರಂಧ್ರವು ಆದಷ್ಟು ಡ್ರಮ್ ನ ಕೆಳಭಾಗದಲ್ಲಿರಲಿ. ಇದಕ್ಕೆ ಪೈಪ್ ಕೂರಿಸುವಾಗ ಒಂದು ಕಾಲರ್ ಹಾಕಿ ಎರೆ ಜಲ ಸಂಗ್ರಹಿಸುವಾಗ ಲೀಕ್ ಆಗದಂತೆ ಎಚ್ಚರವಹಿಸಬೇಕು. ಎರೆ ಜಲವನ್ನು 3ತಿಂಗಳು ಸಂಗ್ರಹಿಸಿಟ್ಟುಕೊಳ್ಳಬಹುದು.

Advertisement

ಉಪಯೋಗಗಳು: 1kg ಎರೆ ಹುಳು ಒಂದು ದಿವಸದಲ್ಲಿ 1.5ಕೆಜಿಯಷ್ಟು ತ್ಯಾಜ್ಯತಿಂದು ಗೊಬ್ಬರವಾಗಿ ಪರಿವರ್ತಿಸುತ್ತದೆ. ಹೀಗೆ ಒಂದೆರಡು ತಿಂಗಳಲ್ಲಿ ನಾವು ಹಾಕಿದ ತ್ಯಾಜ್ಯವನ್ನು ಸಂಪೂರ್ಣ ಗೊಬ್ಬರವಾಗಿಸುತ್ತದೆ. ಇದರ ಜೊತೆಗೆ ಪ್ರತಿ ನಿತ್ಯ 1-2ಲೀ ಎರೆಜಲವೂ ಸಿಗುತ್ತದೆ. ಎರೆ ಜಲವು ಸೂಕ್ಷ್ಮ ಪೋಷಕಾಂಶಗಳ ಆಗರವಾಗಿದ್ದು ಬೆಳೆಪ್ರಚೋದಕವಾಗಿಯೂ ಕಾರ್ಯನಿರ್ವಹಿಸುತ್ತದೆ. 1ಲೀ ಎರೆಜಲವನ್ನು 10ಲೀ ನೀರಿಗೆ ಬೆರೆಸಿ ಬೆಳೆಗಳಿಗೆ ಸಿಂಪಡಿಸಬಹುದು. ಹೂವು ಆಗುವ ಕಾಲದಲ್ಲಿ ಸಿಂಪಡಿಸಿದರೆ ಹೂವು ಉದುರುವುದು ಕಡಿಮೆಯಾಗುತ್ತದೆ. ಪ್ರತಿ ರೈತರೂ ತಮ್ಮ ಮನೆಯಲ್ಲಿ ಈ ರೀತಿ ಒಂದೆಯಡು ಡ್ರಮ್ ಇಟ್ಟುಕೊಂಡು ಎರೆಜಲ ತಯಾರಿಸಿಕೊಳ್ಳಬಹುದಲ್ಲವೇ? ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 6361-562597, +91 94800 43257

ಬರಹ :
ಸಂದೀಪ್ ಮಂಜುನಾಥ್
ಎಂ.ಎಸ್ಸಿ ಕೃಷಿ ಹುಣಸೂರು.

Advertisement

Vermicomposting is a natural process whereby earthworms convert waste material with rigid structures into compost. The compost produced in this green process is traditionally and popularly used as a natural fertilizer for enhancing plant growth.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ
ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ

You cannot copy content of this page - Copyright -The Rural Mirror