ಆರೋಗ್ಯಕ್ಕೆ ಒಳ್ಳೆಯದೆಂದು ತರಕಾರಿ ತಿಂದಿರಿ ಜೋಕೆ…! | ಹೊಟ್ಟೆಯೊಳಗೆ ಸೇರುತ್ತಿದೆ ಹೆಚ್ಚು ವಿಷ…! |

October 26, 2023
8:09 PM
ತರಕಾರಿಗಳು ಇಂದು ಹೆಚ್ಚು ವಿಪೂರಿತವಾಗುತ್ತಿದೆ. ಇದಕ್ಕೆ ಹಲವು ಕಾರಣಗಳು. ಇದೀಗ ನೀರು ಕೂಡಾ ಒಂದು ಮುಖ್ಯ ಕಾರಣ ಎಂದು ಇದೀಗ ಬೆಳಕಿಗೆ ಬಂದಿದೆ.

ಮುಟ್ಟಿದ್ದೆಲ್ಲಾ ಚಿನ್ನವಾಗುವ ವರ ಪಡೆದ ಕತೆಯನ್ನು ಕೇಳಿದ್ದೀರಲ್ಲಾ? ಕತೆಯಲ್ಲಿ ಆ ವರವೇ ಶಾಪವಾಗಿ ಅವನ ನಾಶಕ್ಕೆ ಕಾರಣವಾಗುವುದೂ ತಮಗೆ ಗೊತ್ತಿದೆ…!. ಇಂದು ಮನುಷ್ಯನ ಕತೆಯೂ ಅದೇ ಆಗಿದೆ. ಮುಟ್ಟಿದ್ದು ಚಿನ್ನವಾಗದೆ ವಿಷವಾಗಿ(poison) ಅವನ ಹೊಟ್ಟೆ ಸೇರುತ್ತಿದೆ. ರಕ್ತ ಹೀನತೆಯೇ? ಹೆಚ್ಚು , ಹೆಚ್ಚು ತರಕಾರಿ(vegetables) ತಿನ್ನಿ ಎನ್ನುವ ಕಾಲವೂ ಹೋಯಿತು. ಡೆಕ್ಕನ್ ಹೆರಾಲ್ಡ್‌ ಈ ಬಗ್ಗೆ ವರದಿಯೊಂದನ್ನು ಪ್ರಕಟಿಸಿದೆ…  

Advertisement

ಬೆಂಗಳೂರಿನಲ್ಲಿ  ದೊರಕುವ ಹೆಚ್ಚಿನ ತರಕಾರಿಗಳಲ್ಲಿ ಮಿತಿಯನ್ನು ಮೀರಿ ಭಾರ ಲೋಹಗಳು ಇರುವುದನ್ನು ಗುರುತಿಸಲಾಗಿದೆ. ಇದಕ್ಕೆ ಕಾರಣ? ತರಕಾರಿ ಬೆಳೆಯಲು ಬಳಸುತ್ತಿರುವ ನೀರಿನಲ್ಲಿನ ಸಮಸ್ಯೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳು ಬೆಂಗಳೂರು ನಗರಕ್ಕೆ ತರಕಾರಿಯನ್ನು ಸರಬರಾಜು ಮಾಡುತ್ತವೆ. ಈ ತರಕಾರಿ ಬೆಳೆಯಲು ನೀರು? ನಗರಸಾರ ತುಂಬಿದ ಬೆಂಗಳೂರು ನಗರದ ಕೊಳಚೆ ನೀರು .

ಬೆಂಗಳೂರಿನ Environment Management and Policy Research Institute  20 ಮಳಿಗೆಗಳಿಂದ 400 ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಐದು ಉನ್ನತ  ಸೂಪರ್‌ಮಾರ್ಕೆಟ್‌ಗಳು, ಐದು ಸ್ಥಳೀಯ ಮಾರುಕಟ್ಟೆಗಳಿಂದ ಸಂಗ್ರಹಿಸಿ ಮಾಡಿದ ಪರೀಕ್ಷೆಯಲ್ಲಿ ಇದು ಕಂಡಿದೆ. ಈ ತರಕಾರಿಗಳನ್ನು ಸೂಪರ್ ಮಾರ್ಕೆಟ್ ಗಳಿಂದ ಹಿಡಿದು ತಳ್ಳುವ ಗಾಡಿಯವರಗೆ , ಸಾವಯವ ಮಳಿಗೆಗಳು, ಹಾಪ್‌ ಕಾಮ್‌ ಮಳಿಗೆಗಳು ಹೀಗೆ ವಿವಿದೆಡೆಯಿಂದ ಸಂಗ್ರಹಿಸಲಾಗಿದೆ. ಫಲಿತಾಂಶದಲ್ಲಿ ಕಂಡುಬಂದ ಮಾಹಿತಿ  ಗಾಬರಿ ಮತ್ತು ಭಯವನ್ನು ಉಂಟುಮಾಡುತ್ತದೆ.  ಇದರಲ್ಲಿ 10 ತರಕಾರಿ ಮಿತಿಗಿಂತ ಹೆಚ್ಚು ವಿಷದ ಅಂಶ ಕಂಡುಬಂದಿದೆ. ಅಂದರೆ ವಿಷವನ್ನೇ ತಿನ್ನುತ್ತಿದ್ದೀವೇನೋ ! ಕ್ಯಾಡ್ಮಿಯಂ ಅತ್ಯಂತ ವಿಷಕಾರಿ ಲೋಹ 0.2 ಎಂಜಿ ಇರಬಹುದಾದ ಕಡೆ ಸುಮಾರು 50 ಎಂಜಿ ಇದ್ದು ಅಂದರೆ 25,000 ಪಟ್ಟು ಹೆಚ್ಚಿದೆ.

ಹಾಗೆಯೇ ನಮಗೆಲ್ಲರಿಗೂ ತಿಳಿದಿರುವಂತೆ ಸೀಸ ಕೂಡ ಅಪಾಯಕಾರಿ ಮತ್ತು ವಿಷಕಾರಿ ಅದು 4000 ಪಟ್ಟು ಹೆಚ್ಚಿದೆ. ಸೊಪ್ಪುಗಳು ಈ ಭಾರದ ಲೋಹಗಳನ್ನು ಹೆಚ್ಚು ಹಿಡಿದಿಡುತ್ತವೆ , ಎಂಬುದು ಪರೀಕ್ಷೆಯಿಂದ ಕಂಡುಬಂದಿದೆ.ಹಾಗಾಗಿ ಆರೋಗ್ಯಕ್ಕಾಗಿ ಸೊಪ್ಪನ್ನು ಬಳಸುವ ಮುಂಚೆ ಒಮ್ಮೆ ಯೋಚಿಸಿ, ಇದು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದೆ ಇರುತ್ತದೆಯೇ? ನಾವು ನೋಡ ನೋಡುತ್ತಿದ್ದಂತೆ ಕ್ಯಾನ್ಸರ್ ರೋಗದ ಪ್ರಮಾಣ ಎಷ್ಟೊಂದು ಹೆಚ್ಚಾಗಿ ಹೋಯಿತು… ಎಲ್ಲೋ ಅಪರೂಪಕ್ಕೆ ಕೇಳಿ ಬರುತ್ತಿದ್ದ ಕಾಯಿಲೆ ಇಂದು ಸರ್ವೇಸಾಮಾನ್ಯವಾಗಿ ಹೋಗಿದೆ. ಅದು ರೋಗಿಗೆ ಮತ್ತು ಕುಟುಂಬಕ್ಕೆ ತರುತ್ತಿರುವ ಹಿಂಸೆ ಅಷ್ಟಿಷ್ಟಲ್ಲ.

(ಮೂಲಮಾಹಿತಿ –  ಸಂತೋಷ, ಕೌಲಗಿ ಹಾಗೂ ಡೆಕ್ಕನ್‌ ಹೆರಾಲ್ಡ್)

Most of the vegetables available in Bangalore have been found to contain heavy metals beyond the limit. The reason for this? Problem with water used to grow vegetables. Bengaluru, Kolar, Chikkaballapur, Ramanagara districts supply vegetables to Bangalore city. Water to grow this vegetable? Sewage water of Bangalore city full of city sap.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”
April 17, 2025
10:44 AM
by: ದ ರೂರಲ್ ಮಿರರ್.ಕಾಂ
ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ
April 17, 2025
5:27 AM
by: ದ ರೂರಲ್ ಮಿರರ್.ಕಾಂ
ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ
April 16, 2025
9:41 PM
by: ಡಾ.ಚಂದ್ರಶೇಖರ ದಾಮ್ಲೆ
ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group