ಕೆಲಸ ಜಾಸ್ತಿ ಎಂದು ಅನೇಕರು ಆಹಾರ ತ್ಯಜಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದು ದೇಹದಲ್ಲಿ ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ಕಾರ್ಯಕ್ಷಮತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
Advertisement
ಇವು ದುಷ್ಪರಿಣಾಮಗಳು:
Advertisement
- ತಲೆತಿರುಗುವಿಕೆ: ಹಸಿವು ಹೆಚ್ಚಾಗಿ ದೌರ್ಬಲ್ಯ ಮತ್ತು ತಲೆತಿರುಗುವಿಕೆಗೆ ಕಾರಣವಾಗುತ್ತದೆ.
- ಉದ್ವೇಗ-ಉತ್ಕರ್ಷ: ಹಸಿದ ಸ್ಥಿತಿಯಲ್ಲಿ, ದೇಹವು ಕಾರ್ಟಿಸೋಲ್ ಅನ್ನು ಉತ್ಪಾದಿಸುತ್ತದೆಹಾರ್ಮೋನುಗಳು ಹೆಚ್ಚಾಗುತ್ತವೆ. ಇದು ಒತ್ತಡಕ್ಕೆ ಕಾರಣವಾಗುತ್ತದೆ.
- ಬೊಜ್ಜು ಹೆಚ್ಚಾಗುತ್ತದೆ: ಹಸಿವಾದಾಗ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿದ್ದರೆ ಆಗಾಗ ತಿಂದರೆ ತೂಕ ಹೆಚ್ಚುತ್ತದೆ ಅಂದರೆ ಸ್ಥೂಲಕಾಯ… ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇದ್ದರೆ ಚಯಾಪಚಯ ಕ್ರಿಯೆಯಲ್ಲಿ ತೊಂದರೆಯಾಗಿ ಕೊಬ್ಬು ಶೇಖರಣೆಯಾಗುತ್ತದೆ. ಆದ್ದರಿಂದ ನೀವು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸಿದರೆ, ನಿಮಗೆ ಹಸಿವಾದಾಗ ಸಮಯಕ್ಕೆ ಪೌಷ್ಟಿಕಾಂಶದ ಆಹಾರವನ್ನು ಸೇವಿಸಿ ಮತ್ತು ಕನಿಷ್ಠ 20 ನಿಮಿಷಗಳ ಕಾಲ ವ್ಯಾಯಾಮ ಮಾಡಿ…
- ಮೆದುಳಿನ ಕಾರ್ಯವು ಹದಗೆಡುತ್ತದೆ: ಮೆದುಳು ಗ್ಲೂಕೋಸ್ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಸರಿಯಾದ ಸಮಯಕ್ಕೆ ಯೋಗ್ಯ ಪ್ರಮಾಣದಲ್ಲಿ ತಿನ್ನಿರಿ. ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆಯಾಗುತ್ತದೆ. ಏಕಾಗ್ರತೆಯ ಸಾಮರ್ಥ್ಯ ಕಡಿಮೆಯಾಗುತ್ತದೆ.
- ಸಿಡುಕುತನ : ಹಸಿವು ಹೆಚ್ಚು ಕಿರಿಕಿರಿಯನ್ನು ಉಂಟುಮಾಡುತ್ತದೆ. ರಕ್ತದ ಸಕ್ಕರೆಯ ಕುಸಿತವು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ, ಮೆದುಳಿನಂತೆಯೇ…
ದಿನಕ್ಕೆ ಮೂರಕ್ಕಿಂತಲೂ ಹೆಚ್ಚು ಬಾರಿ ಹಸಿವು ಆಗುತ್ತಿದ್ದರೆ ಇದು ಅನೈಸರ್ಗಿಕ ಹಸಿವಿನ ಲಕ್ಷಣವಾಗಿರಬಹುದು. ಬೊಜ್ಜು ಪ್ರಕೃತಿ, ಮಧುಮೇಹ, ಥೈರಾಯಿಡ್ ಗಳಂತಹ ಕೆಲವು ಕಾಯಿಲೆಗಳು ಅಥವಾ ಇನ್ನಿತರ ಸಮಸ್ಯೆಗಳಿಂದ ಪದೇಪದೇ ಹಸಿವಾಗಬಹುದು. ಆದ್ದರಿಂದ, ಹೆಚ್ಚು ಹಸಿವಿನ ಕಾರಣವನ್ನು ಕಂಡು ಹಿಡಿದು ಅದರ ಪರಿಹಾರಗಳನ್ನು ಮಾಡಿಕೊಳ್ಳುವುದು ಸೂಕ್ತ. ದಿನಕ್ಕೆ ಮೂರು ಬಾರಿಗಿಂತಲೂ ಜಾಸ್ತಿ ತಿನ್ನುವುದು ಒಳ್ಳೆಯದಲ್ಲ.
ಬರಹ :
ಡಾ. ಪ್ರ. ಅ. ಕುಲಕರ್ಣಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement